ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೧೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

M ತ ನು ರುದ್ರಪಟ್ಟಣದ ದೊರೆಸ್ವಾಮಿ ಬಾರತೀಯ ಸಂಗೀತದಲ್ಲಿ ವೀಣೆಗಿರುವ ಸ್ಥಾನ ಬೇರೆ ಯಾವ ಸಂಗೀತ *ಆ ವಾದ್ಯ ಕೂ ಇಲ್ಲ. ವಿದ್ಯಾಭಿಮಾನದೇವತೆಯಾದ ಸರಸ್ವತಿಯ ಕೈಯಲ್ಲಿ ಭಾರತೀಯರು ಕೊಟ್ಟಿರುವುದು ವೀಣೆ ; ಭಕ್ತ ಶಿರೋಮಣಿಯಾದ ನಾರದನಕ್ಷೆಯಲ್ಲಿ ವೀಣೆ, ವೀಣೆ ವಾದ್ಯಕ್ಕೆ ಧಾರ್ಮಿಕ ಸ್ವರೂಪ ಬಂದಿರುವುದಲ್ಲದೆ ತಾಂತ್ರಿಕ ಸ್ವರೂಪವೂ ಅದರ ಮಹತ್ವವನ್ನು ಹೆಚ್ಚಿಸಿದೆ. ಮಾನವ ದೇಹದ ರಚನೆ, ಕ್ರಿಯೆ ಪ್ರತಿಕ್ರಿಯೆಗಳನ್ನೇ ಆಧಾರವಾಗಿಟ್ಟುಕೊಂಡು ವೀಣೆಯನ್ನು ರಚಿಸಲಾಗಿದೆ. ವೀಣೆಯಲ್ಲಿ ನುಡಿಯುವ ಸ್ವರಗಳೇ ಶುದ್ಧ ಸ್ವರಗಳೆಂದು ಪರಿಗಣಿಸಲಾಗಿದೆ. ಪ್ರಾಚೀನ ಕಾಲದಿಂದಲೂ ಉತ್ತರ ಭಾರತದಲ್ಲಿ ರುದ್ರವೀಣೆಯೂ ದಕ್ಷಿಣ ಭಾರತದಲ್ಲಿ ಸರಸ್ವತಿ ವೀಣೆಯ ಪ್ರಚಾರದಲ್ಲಿವೆ. ಆದರೆ ದಕ್ಷಿಣ ವೀಣೆ ವಾದ್ಯಕ್ಕೆ ಕೊಟ್ಟಿರುವ ಪ್ರಾಶಸ್ಯವನ್ನು ಉತ್ತರ ಕೊಟ್ಟಿಲ್ಲ. ಇಂದಿಗೂ ದಕ್ಷಿಣದಲ್ಲಿ ವೀಣಾವಾದ್ಯವಾದನ ಅತ್ಯುನ್ನತ ಮಟ್ಟದಲ್ಲಿದೆ. ಮದರಾಸಿನ ವೀಣಾ ಧನಂ, ಮೈಸೂರಿನ ಶೇಷಣ್ಣನವರು, ಸುಬ್ಬಣ್ಣನವರು ವೀಣಾವಾದನ ಕಲೆಗೆ ಅಚ್ಚಳಿಯದ ಕೀರ್ತಿಯನ್ನು ದೊರಕಿಸಿಕೊಟ್ಟಿದ್ದಾರೆ. ಲಲಿತ ಕಲೆಗಳು ತಮ್ಮ ಋಜುಸ್ವರೂಪವನ್ನು ಕಳೆದುಕೊಂಡು