ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೧೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ರುದ್ರಪಟ್ಟಣದ ದೊರೆಸ್ವಾಮಿ ಸಂಗ್ರಹಿಸಿದರು. ೧೯೪೧ನೆಯ ಇಸವಿಯಲ್ಲಿ ಗುರುಸಮ್ಮುಖದಲ್ಲಿ, ಮೈಸೂರಿನ ಸಂಗೀತ ವಿದ್ವಾಂಸರ ಎದುರಿನಲ್ಲಿ ದೊರೆಸ್ವಾಮಿ ತಮ್ಮ ಮೊಟ್ಟ ಮೊದಲ ನೆಯ ಕಛೇರಿ ಮಾಡಿ ಯಶಸ್ವಿಯಾದರು. ಮಾರನೆಯ ವರ್ಷ ಗುರುಗಳ ಜತೆಯಲ್ಲಿ ಮುಂಬಯಿ, ಕಾಥೇವಾಡ ಸಂಸ್ಥಾನಗಳಲ್ಲಿ ಪ್ರವಾಸಮಾಡಿ ಕೀರ್ತಿ ಗಳಿಸಿದರು. ಐದು ವರ್ಷಗಳ ತರುವಾಯ ಮೈಸೂರು ಆಸ್ಥಾನ ವಿದ್ವಾನ್ ಪದವಿ ದೊರೆಸ್ವಾಮಿಯವರಿಗೆ ಲಭಿಸಿತು. ಮದರಾಸಿನಲ್ಲಿ ಅನೇಕ ಪತ್ರಿಕೆಗಳು ದೊರೆಸ್ವಾಮಿಯವರ ಕಲಾನೈಪುಣ್ಯ ವನ್ನು ಕುರಿತು ಪ್ರಶಂಸನಾತ್ಮಕ ಲೇಖನಗಳನ್ನು ಬರೆದವು. ಕಲ್ಕಿ ಯವರು ದೊರೆಸ್ವಾಮಿಯವರ 'ಸಿಂಹೇಂದ್ರ ಮಧ್ಯಮ' ರಾಗ ವಿಸ್ತಾರವನ್ನು ನೋಡಿ ಆಶ್ಚರ್ಯಚಕಿಯವರ 'ಸಿಂಹ ಲೇಖನಗಳನ್ನು ಸ್ವಾಮಿಯವರ ಈ

  • ದೊರೆಸ್ವಾಮಿಯವರ ವಾದ್ಯವಾದನದಲ್ಲಿ ಶಕ್ತಿ ಸೌಂದರ್ಯಗಳ ಸಂಗಮ ವನ್ನು ಕಾಣಬಹುದು. ಅವರ ರಣಸಾಧನೆಯಲ್ಲಿ ವೀಣೆ ಮಗುವಿನಂತೆ ನಲಿ ಯುತ್ತದೆ. ನಾಲ್ಕಾರು ಗಂಟೆ ನುಡಿಸಿದರೂ ಅಪಶ್ರುತಿಯಾಗಲೀ ಅಪಸ್ವರ ವಾಗಲೀ ಕೇಳಿಬರುವುದಿಲ್ಲ. ವಿಲಂಬಕಾಲದ ಕೆಲಸ, ಅನುಸ್ವರ ಸಂಧಾನ ಅವರ ವಾದ್ಯವಾದನಕ್ಕೆ ಅಪೂರ್ವ ಕಳೆಯನ್ನು ಕೊಡುತ್ತವೆ. ರಾಗ ವಿಸ್ತಾರ ಸಂಪ್ರದಾಯಬದ್ದ ಮಾರ್ಗವನ್ನು ಬಿಡದೆ ಕ್ರಿಯಾತ್ಮಕವಾಗಿ ಬೆಳೆಯುತ್ತದೆ. ಇಂದ್ರಿಯ ವ್ಯಾಪಾರವನ್ನು ಮರೆಸಿ ಮನಸ್ಸನ್ನು ಶಾಂತಸ್ಥಿತಿಯಲ್ಲಿಡುವ ಜಾಣೆ ದೊರೆಸ್ವಾಮಿಯವರಿಗೆ ಸಾಧಿಸಿದೆ.

ದೊರೆಸ್ವಾಮಿಯವರ ನಾದೋಪಾಸನೆ ನಿರ್ವಿಘ್ನವಾಗಿ ಮುಂದುವರಿದು ಮೈಸೂರು ಸಂಗೀತದ ಖ್ಯಾತಿಯನ್ನು ದೇಶ ವಿದೇಶಗಳಲ್ಲಿ ಪಸರಿಸಲೆಂದು ಹಾರೈ ಸುತ್ತೇನೆ.