ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೧೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

  • *

ಡಿ. ೩- ಇದು

2 . 2

3 ವೃತ್ತ F ೯ .

  • #

ನ 4

. > ಕು ! ವೀಣೆ ನಾಗರಾಜಾರಾಯರು vಾತಿ, ಮತ, ದೇಶ ಭಾಷೆಗಳ ಬಂಧನಕ್ಕೆ ಸಿಲುಕದೆ ವಿಶ್ವವಾಣಿಯಾಗಿ ಇಲ್ಲಿ ನಿಲ್ಲುವ ಯೋಗ್ಯತೆಯುಳ್ಳದ್ದು ಸಂಗೀತ ಒಂದೇ. ವಿಶ್ವ ಕೌಟುಂಬಿಕ ಭಾವನೆಯನ್ನು ಬಿತ್ತುವುದಕ್ಕೆ ಸಂಗೀತಕ್ಕಿಂತ ಉತ್ತಮ ಸಾಧನವಿಲ್ಲ. ಬಾಕ್, ಬೀಡೊವನ್ನರ ಕೃತಿಗಳನ್ನು ಕೇಳಿ ಭಾರತೀಯರು ಸಂತೋಷಿಸಬಹುದು ; ಪುರಂದರ, ತ್ಯಾಗರಾಜರ ಕೃತಿಗಳನ್ನು ಕೇಳಿ ಪಾಶ್ಚಾತ್ಯರು ಸಂತೋಷಿಸ ಬಹುದು. ನಾರೈಯ ಮೂರುಸಾವಿರ ಮಕ್ಕಳು ನಾಗರಾಜಾರಾಯರು ಹೇಳಿ ಕೊಟ್ಟ 'ಬಾರೊ ಬಾರೊ ಗಣಪ' ಎಂಬ ಜಾನಪದ ಗೀತೆಯನ್ನು ಕಲಿತು ಹಾಡಿ ಸಂತೋಷಿಸಿ ಸಂಗೀತದ ವಿಶ್ವವ್ಯಾಪ್ತಿಗೆ ನಿದರ್ಶನವನ್ನೊದಗಿಸಿದರು. ಶ್ರೀ ರಾಮಗೋಪಾಲರವರ ನೃತ್ಯ ಮಂಡಳಿಯ ಸಂಗೀತ ದಿಗ್ದರ್ಶಕರಾಗಿ ೧೯೪೮ರಲ್ಲಿ ನಾಗರಾಜಾರಾಯರು ವಿಶ್ವ ಪರ್ಯಟನ ಹೊರಟಾಗಲೇ ನಾಲ್ವೆಯ ಮಕ್ಕಳಿಗೆ ಕನ್ನಡ ಹಾಡು ಹೇಳಿಕೊಟ್ಟುದು. ಐರೋಪ್ಯ ದೇಶಗಳ ಅನೇಕ ಸಾಂಸ್ಕೃತಿಕ ಕೇಂದ್ರಗಳಲ್ಲಿ ವಿದ್ವಜ್ಜನರೆದುರಿಗೂ, ಸಾರ್ವಜನಿಕರೆದುರಿಗೂ ವೀಣೆ ನುಡಿಸಿ, ಹಾಡಿ ನಾಗರಾಜಾರಾಯರು ಭಾರತ ಸಂಸ್ಕೃತಿಯ ಸುಭಗತೆಯ ಪ್ರಸಾರ ಮಾಡಿ ಬಂದಿದ್ದಾರೆ.