ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೧೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವೀಗ ಸಾಗರಾಜರಾಯರು ಆn • ನಾಗರಾಜಾರಾಯರ ಶಿಕ್ಷಣ ಮೈಸೂರಿನಲ್ಲಿ ಮುಗಿಯಿತು. ಸಂಗೀತ, ನಾಟಕದ ಬಗ್ಗೆ ತಮ್ಮ ಮಗನಿಗಿದ್ದ ಅಭಿರುಚಿಯನ್ನು ಕಂಡ ಅವರ ತಂದೆ ಬಿಡಾರದ ಕೃಷ್ಣಪ್ಪನವರ ಸಲಹೆ ಕೇಳಿದರು. ಬಿಡಾರದ ಕೃಷ್ಣಪ್ಪನವರು ಆನವಟ್ಟಿ ವಿರೂಪಾಕ್ಷಶಾಸ್ತ್ರಿಗಳವರನ್ನು ಸಂಗೀತಪಾಠ ಹೇಳುವುದಕ್ಕೆ ಗೊತ್ತು ಮಾಡಿಕೊಟ್ಟರು. ಆರು ತಿಂಗಳು ಪಾಠ ಸಾಗುವಲ್ಲಿ ನಾಗರಾಜಾರಾಯರಿಗೆ ತುಂಬ ಕಾಹಿಲೆಯಾಗಿ ಅವರು ಬೆಂಗಳೂರು ಸೇರಬೇಕಾಯಿತು. ದೇಹಸ್ಥಿತಿ ಗುಣ ಹೊಂದಿದ ಮೇಲೆ ವೀಣೆ ರಾಘವಾಚಾರ್ಯರಲ್ಲಿ ಪಾಠ ಆರಂಭವಾಯಿತು. ರಾಘವಾಚಾರ್ಯರಿಗೆ ಶಿಷ್ಯನ ಯೋಗ್ಯತೆಯಲ್ಲಿ ತುಂಬ ನಂಬಿಕೆಯಿತ್ತು. ಶಿಷ್ಯನೆದುರಿಗೆ ಅವನನ್ನು ಪ್ರಶಂಸಿಸದಿದ್ದರೂ ಮಿತ್ರರಾದ ನಟಭಯಂಕರ ಗಂಗಾಧರಪ್ಪನವರೆದುರಿಗೆ ಧಾರಾಳವಾಗಿ ಪ್ರ ಶಂ ಸಿ ಸು ತ್ತಿ ದ್ಧ ರು. ನಾಗರಾಜಾರಾಯರ ದುರದೃಷ್ಟಕ್ಕೆ ಒಂದು ವರ್ಷದ ತರುವಾಯ ರಾಘವಾಚಾರ್ಯರು ಕಾಲವಶರಾದರು. ಸಂಗೀತಾಭ್ಯಾಸ ಮಾಡಲು ನಾಗರಾಜಾರಾಯರು ಮಾಡಿದ ಪ್ರಯತ್ನ ಹೀಗೆ ಕೊನೆಗಂಡರೂ ಅವರ ಉತ್ಸಾಹ ಕುಂದಲಿಲ್ಲ. ವೀಣಾವಿದ್ವಾನ್ ಎಂ. ಎನ್. ಭೀಮರಾಯರನ್ನು ಆಶ್ರಯಿಸಿ ಪಾಠ ಮುಂದುವರಿಸಿದರು. ಸಂಗೀತದ ಜತೆಯಲ್ಲಿ ಶಾಲೆಯ ಓದೂ ಸಾಗಿತ್ತು. ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಮೇಲೆ ಸಂಗೀತಾಭ್ಯಾಸ ಮುಂದುವರಿಸಲು ಅಣ್ಣಾಮಲೆ ವಿಶ್ವವಿದ್ಯಾನಿಲಯ ಸೇರಿದರು. ಅಲ್ಲಿ ನಾಲ್ಕು ವರ್ಷಕಾಲ ವಿಚ್ಛತಿಯಿಲ್ಲದೆ ವಿ. ಎಸ್. ಜಿ. ಶಂಕರ ಅಯ್ಯರ್ ಮತ್ತು ಕೆ. ಎಸ್. ನಾರಾಯಣಸ್ವಾಮಿ ಅಯ್ಯರ್ ಅವರಲ್ಲಿ ಅಭ್ಯಾಸ ಸಾಗಿತು. ಉಭಯ ಗುರುಗಳಿಗೂ ನಾಗರಾಜಾರಾಯರ ಶ್ರದ್ದೆ, ಗ್ರಹಣಶಕ್ತಿ ಏಶೇಷತೃಪ್ತಿಯನ್ನಿತ್ತಿತು. ಅಣ್ಣಾಮಲೆ ವಿಶ್ವವಿದ್ಯಾನಿಲಯದಲ್ಲಿ * ಸಂಗೀತ ಭೂಷಣ ' ಡಿಗ್ರಿಯನ್ನು ಪಡೆದುಕೊಂಡು ನಾಗರಾಜಾರಾಯರು ರೈಟ್ ಆನರಬಲ್ ವಿ. ಶ್ರೀನಿವಾಸಶಾಸ್ತ್ರಿಗಳು, ಸಂಗೀತಸಾರ್ವಭೌಮ ಟೈಗರ್ ವರದಾಚಾರ್ಯರು ಮೊದಲಾದ ವಿದ್ವನ್ಮಣಿಗಳೆದುರಿಗೆ ತಮ್ಮ ವಿದ್ವತ್ಪದರ್ಶನ ಮಾಡಿ ಮೆಚ್ಚುಗೆ ದೊರಕಿಸಿಕೊಂಡರು. - ೧೯೪೧ರಲ್ಲಿ ನಾಗರಾಜಾರಾಯರು ದೆಹಲಿ ಪಟ್ಟಣದಲ್ಲಿ ಸಂಗೀತ ಶಿಕ್ಷಕ ರಾಗಿ ತಮ್ಮ ಜೀವನಯಾತ್ರೆ ಆರಂಭಿಸಿದರು. ದೆಹಲಿಯಲ್ಲಿ ಕರ್ನಾಟಕ