ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೧೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ನಾಟಕದ ಕಲಾವಿದರು ಸಂಗೀತ ಸಭೆ' ಯನ್ನು ಸ್ಥಾಪಿಸಿ ಕರ್ನಾಟಕ ಸಂಗೀತ ಪ್ರಸಾರಕ್ಕೆ ಇಂಬು ಗೊಟ್ಟರು. ವರ್ಷ ಕಳೆಯುವುದರೊಳಗಾಗಿ ಕನ್ನಡನಾಡಿನ ಕರೆಗೆ ಓಗೊಟ್ಟು, ಬೆಂಗಳೂರಿಗೆ ಬಂದು ಪಾಠ ಪ್ರವಚನ ಹೇಳಲಾರಂಭಿಸಿದರು. _೧೯೪೫ರಲ್ಲಿ ಪ್ರಸಿದ್ಧ ನರ್ತಕರಾದ ರಾಮಗೋಪಾಲರು ನಾಗರಾಜಾ ರಾಯರನ್ನು ತಮ್ಮ 'ಸಂಗೀತ ನಿರ್ದೇಶಕರಾಗಿ ನಿಯಮಿಸಿಕೊಂಡರು. ಮೂರು ವರ್ಷಗಳ ತರುವಾಯ ರಾವುಗೋಪಾಲರ ನೃತ್ಯಮಂಡಳಿಯೊಂದಿಗೆ ವಿಶ್ವ ಪರ್ಯಟನ ಮಾಡುವ ಸದವಕಾಶ ನಾಗರಾಜಾರಾಯರಿಗೆ ಒದಗಿತು. ಈ ಮೊದಲೇ ನಾಗರಾಜಾರಾಯರು ಪಾಶ್ಚಾತ್ಯ ಸಂಗೀತವನ್ನೂ ಅಭ್ಯಾಸಮಾಡ ತೊಡಗಿ “ಟ್ರಿನಿಟಿ ಕಾಲೇಜಿನ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದ್ದುದರಿಂದ ಪಾಶ್ಚಾತ್ಯರ ಪಾರಿಭಾಷಿಕ ಶಬ್ದಗಳ ಸಹಾಯದಿಂದಲೇ ಅವರಿಗೆ ಭಾರತೀಯ ಸಂಗೀತದ ಪರಿಚಯ ಮಾಡಿಕೊಡಲು ಅನುಕೂಲವಾಯಿತು, ಒಂದು ವರ್ಷಕಾಲ ನಾಗರಾಜಾರಾಯರು ಲಂರ್ಡ, ಅಮೆರಿಕಾ, ಸಿಟ್ಟರೆಂಡ್, ನಾರೈ, ಸ್ವೀಡನ್ ದೇಶಗಳ ಪ್ರವಾಸಮಾಡಿ ಅಲ್ಲಿ ನೂರಾರು ಸಂಗೀತಕಛೇರಿಗಳನ್ನು ಮಾಡಿದರು. ರಾಮಗೋಪಾಲರ ವಾದ್ಯಗೋಷ್ಠಿಯ ಮುಖಂಡರಾಗಿ ಅವರ ನೃತ್ಯಗಳಿಗೆ ಯೋಗ್ಯ ಹಿನ್ನೆಲೆಯ ಸಂಗೀತ ವನ್ನೊದಗಿಸುವ ಕರ್ತವ್ಯವನ್ನೂ ನಿರ್ವಹಿಸುತ್ತಿದ್ದರು. ಪಾಶ್ಚಾತ್ಯ ದೇಶಗಳಲ್ಲಿ ನಾಗರಾಜಾರಾಯರಿಗೆ ಸ್ವಾರಸ್ಯವಾದ ಅನುಭವ ಗಳಾದವು. `ತಮ್ಮ ಅನುಭವಗಳನ್ನು ಇವರು ಈ ರೀತಿ ವರ್ಣಿಸಿದ್ದಾರೆ. 'ನಾವು ಹೋದ ಹೋದಲ್ಲಿ ಜನತೆ ಭಾರತೀಯ ಸಂಗೀತದ ಬಗ್ಗೆ ವಿಶೇಷ ಆಸಕ್ತಿ ತೋರಿದರು. ಮಕ್ಕಳಿಗಾಗಿಯೇ ಪ್ರತ್ಯೇಕ ಪ್ರದರ್ಶನಗಳನ್ನು ನಾವು ಕೊಡಬೇಕಾಯಿತು. ನಾಲ್ವೆಯ ಮಕ್ಕಳು ಕನ್ನಡ ಹಾಡೊಂದನ್ನು ಕಲಿತು ನಮ್ಮೊಂದಿಗೆ ಹಾಡಿದರು. ಈ ಜನರಿಗಿರುವ ಕಲಾಪ್ರೇಮ ಪ್ರಶಂಸನೀಯ ವಾದುದು. ನಾಲ್ಕಾರು ಒಳ್ಳೆಯ ಚಿತ್ರವಿಲ್ಲದಿರುವ ಮನೆಯೇ ಇಲ್ಲ. ಸ್ಟಾಕ್ ಹೋಂ ನಗರದ ಬೀದಿಗಳ ಸ್ವಚ್ಛತೆ ಆಶ್ಚರ್ಯವನ್ನುಂಟುಮಾಡಿದವು.

  • 'ನಾಟಕ ಕಲೆಯ ಶಿಕ್ಷಣ ಕೊಡುವ ಶಾಲೆಗಳು ಪ್ರತಿ ಊರಿನಲ್ಲಿಯೂ ಇವೆ. ನಾಟಕಶಾಲೆಗಳಿಗೆ ಏನೂ ಅಭಾವವಿಲ್ಲ. ಕ್ರಿಸ್ಮಸ್ ಹಬ್ಬದ ಕಾಲದಲ್ಲಿ ಮಕ್ಕಳಿಗಾಗಿಯೇ 'ಮೂಕ ನಾಟಕ'ಗಳನ್ನೇರ್ಪಡಿಸುತ್ತಾರೆ. ವೃತ್ತ