ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೧೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವೀರ ನಾಗರಾಜಾರಾಯರು ಪತ್ರಿಕೆಗಳು ಸಂಗೀತ ಕಲೆಯ ಪ್ರಗತಿಗೆ ತುಂಬ ನೆರವು ನೀಡುತ್ತವೆ. ಪ್ರತಿಯೊಂದು ಪತ್ರಿಕೆಯಲ್ಲಿಯೂ ಕಲಾ ವಿಮರ್ಶೆ'ಯ ಭಾಗವಿದ್ದ ಇರುತ್ತದೆ. ಪತ್ರಿಕೆಗಳ ಕಲಾವಿಮರ್ಶಕರು ಎಲ್ಲ ಪ್ರದರ್ಶನಗಳನ್ನೂ ಬಂದು ನೋಡಿ, ಕಲಾವಿದರೊಂದಿಗೆ ವಿಚಾರವಿನಿಮಯಮಾಡಿಕೊಂಡು ವಿದ್ವತ್ತೂರ್ಣ ಲೇಖನಗಳನ್ನು ಬರೆಯುತ್ತಾರೆ.

  • ಡೆನ್ಮಾರ್ಕ್ ನಗರದಲ್ಲಿ ಕತೆಗಾರ ಹ್ಯಾನ್ಸ್ ಆಂಡರ್‌ಸನ್ನರ ಮನೆಯನ್ನು ರಾಷ್ಟ್ರದ ಸಂಪತ್ತನ್ನಾಗಿ ಉಳಿಸಿಕೊಂಡಿದ್ದಾರೆ. ಆತ ಬರೆದ ಕತೆಗಳ ಹಸ್ತ ಪ್ರತಿಗಳಲ್ಲದೆ, ಆತ ಉಪಯೋಗಿಸುತ್ತಿದ್ದ ವಸ್ತುಗಳನ್ನು ಸಂಗ್ರಹಿಸಿಟ್ಟಿದ್ದಾರೆ. ಆತನ ಪ್ರತಿಮೆಗಳು ಡೆನ್ಮಾರ್ಕ್ನ ನಾನಾಭಾಗಗಳಲ್ಲಿ ಕಂಡುಬರುತ್ತವೆ..

(ಇಂಗ್ಲೆಂಡಿನಲ್ಲಿ ನನಗೆ ಜೆ. ಆರ್. ಮಾರ್ ಎನ್ನುವ ಒಬ್ಬ ತರುಣ ವಿದ್ವಾಂಸರ ಪರಿಚಯವಾಯಿತು. ಭಾರತೀಯ ಸಂಗೀತಕ್ಕೆ ಅದರಲ್ಲಿಯೂ ಕರ್ನಾಟಕ ಸಂಗೀತಕ್ಕೆ ಈತ ಅಭೂತಪೂರ್ವ ಸೇವೆ ಮಾಡುತ್ತಿದ್ದಾನೆ. ಭಾರತಕ್ಕೆ ಬರದಿದ್ದರೂ ಲಂಡನ್ನಿನಲ್ಲಿಯೇ ಕುಳಿತುಕೊಂಡು ಗ್ರಾಮಫೋನ್ ರಿಕಾರ್ಡುಗಳು, ರೇಡಿಯೋ ಸಹಾಯದಿಂದ ಕರ್ನಾಟಕ ಸಂಗೀತವನ್ನು ಅಭ್ಯಾಸಮಾಡಿಕೊಂಡು, ಅದರ ಮೇಲೆ ಭಾಷಣಗಳನ್ನು ಮಾಡುತ್ತಾನೆ... (ಅಮೇರಿಕೆಯಲ್ಲಿ 'ಫಿಲಿಡೆಲ್ಪಿಯಾ ಫಿಲ್ ಹಾರೊನಿಕ್ ಆರ್ ಕೆಸ್ವಾ' ನಾಯಕನೂ ಕಲಾವಿಭೂತಿಯೂ ಆದ ಲಿಯೊಪಾಲ್ಸ್ ಸೈಕೋವಸ್ಕಿಯವರ ಪರಿಚಯವಾಯಿತು. ಅವರಲ್ಲಿ ವೀಣೆ ವಾದ್ಯವಿತ್ತು. ಜಗತ್ತಿನ ಎಲ್ಲಾ ಸಂಗೀತವಾದ್ಯಗಳಿಗಿಂತ ವೀಣೆ ಸರ್ವಶ್ರೇಷ್ಠವಾದುದು ಎನ್ನುವುದು ಸೊಕೊವಸ್ಕಿಯವರ ಅಭಿಪ್ರಾಯ. ಅವರಿಗೆ ವೀಣೆ ಕಲಿಯಲು ಅಪಾರ ಆಸಕ್ತಿಯಿದೆ. ಅಲ್ಲಿಯೇ ಸಂಗೀತವನ್ನು ಚಿಕಿತ್ಸೆಗೆ ಉಪಯೋಗಿಸುವ ಬಗ್ಗೆ ಸಂಶೋಧನೆ ನಡೆಸುತ್ತಿದ್ದ ಒಬ್ಬ ಮನಃಶಾಸ್ತ್ರ ಪ್ರವೀಣರ ಪರಿಚಯವಾಯಿತು. ಈ ವಿಷಯದಲ್ಲಿ ಭಾರತ ಅದ್ಭುತ ಪ್ರಯೋಗ ಮಾಡಿದೆಯೆಂದು ಕೇಳಿದ್ದೇನೆ. ನನಗೆ ಮಾರ್ಗದರ್ಶನ ಮಾಡುವಿರಾ ಎಂದು ಅವರು ಕೇಳಿದರು. ನನ್ನ ಅಜ್ಞಾನಕ್ಕಾಗಿ ನಾನು ತಲೆ ತಗ್ಗಿಸಬೇಕಾಯಿತು.”

  • ಲಂಡನ್ ನಗರದಲ್ಲಿ ನಾಗಾಜಾರಾಯರ ಪ್ರದರ್ಶನದೊಂದಿಗೆ, ಕರ್ನಾಟಕ ಸಂಗೀತದ ಮೇಲೆ ಡಾ|| ಆರ್ನಾಲ್ ಬಾಕೆಯವರ ಅಧ್ಯಕ್ಷತೆಯಲ್ಲಿ