ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೧೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಉಭಯಕರ್ ಕೃಷ್ಣ ರಾವ್ ೮೭ .ಹೆಸರಿನಲ್ಲಿ ಛದ್ಮವೇಷದಲ್ಲಿದ್ದ ಅರ್ಜುನನಿಂದ ರಾಜಕುಮಾರಿ ಉತ್ತರ ನೃತ್ಯವನ್ನು ಕಲಿತ ವಿಷಯ ಮಹಾಭಾರತದಲ್ಲಿ ಪ್ರಸ್ತಾಪಿಸಲ್ಪಟ್ಟಿದೆ. ಆ ಕಾಲದ ಶೈಕ್ಷಣಿಕ ಕ್ರಮದಲ್ಲಿಯೇ ನೃತ್ಯಕ್ಕೆ ಒಂದು ಸ್ಥಾನವಿದ್ದಿತು. ತನ್ನ ಪ್ರಜಾವರ್ಗದ ಮುಂದೆ ವಿಷ್ಣುವರ್ಧನನ ಪಟ್ಟದ ರಾಣಿಯಾದ ಶಾಂತಳಾದೇವಿ ನೃತ್ಯ ಪ್ರದರ್ಶನ ಮಾಡಿದ ದೃಷ್ಟಾಂತವೂ ಇದೆ. ಹತ್ತೊಂಭತ್ತನೆಯ ಶತಮಾನದ ಮಧ್ಯಭಾಗದ ವೇಳೆಗೆ ಇಂಗ್ಲಿಷ್ ಶಿಕ್ಷಣ ಭಾರತೀಯ ಜೀವನವನ್ನು ಆಕ್ರಮಿಸಿಕೊಂಡು ನೃತ್ಯ ಕಲೆಯನ್ನು ಒಂದು ವರ್ಗದವರ (ಪಾತರದವರ) ಕೈಗೆ ಹಾಕಿತು. ಉತ್ತಮ ಕುಲದವರು, ಉತ್ತಮ ವರ್ಗದವರು ನೃತ್ಯ ಕಲೆ ಕಲಿಯುವುದು ಹೀನಾಯವೆಂಬ ಭಾವನೆ ಬೆಳೆಯಿತು. ಅದು ತನ್ನ ಕ್ರಿಯಾತ್ಮಕ ಕಲಾವೈಭವವನ್ನು ಕಳೆದುಕೊಂಡು ಕೀಳುವಿಲಾಸದ ಸಾಧನವಾಯಿತು. ಹತ್ತೊಂಭತ್ತನೆಯ ಶತಮಾನದ ಅಂತ್ಯದಲ್ಲಾದ ಜಾಗೃತಿ ಪರಾಕ್ರಮಕ್ಕೂ ಅದರ ವಿಚಾರಧಾರೆಗೂ ಧಕ್ಕೆ ತಂದಿತು. ಭಾರತೀಯರಲ್ಲಿ ರಾಜಕೀಯ ಪರಿಜ್ಞಾನ ಹುಟ್ಟಿದುದಲ್ಲದೆ, ಇಂಗ್ಲೆಂಡ್, ಫ್ರಾನ್ಸ್, ಅಮೆರಿಕಾ ದೇಶಗಳಲ್ಲಿ ವೀರಸನ್ಯಾಸಿ ಸ್ವಾಮಿ ವಿವೇಕಾನಂದರು ಮಾಡಿದ ಅನ್ಯಾದೃಶ ಪ್ರಚಾರಕಾರ್ಯದಿಂದ ವಿಶ್ವ ಸಂಸ್ಕೃತಿ ರೂಪುಗೊಳ್ಳಲು ಭಾರತದಿಂದ ತುಂಬ ನೆರವು ದೊರೆಯುತ್ತದೆ ಎಂಬ ಭಾವನೆಯೂ ಬೆಳೆಯಿತು. ಕೀರ್ತಿಶೇಷ ಡಾ. ಆನಂದ ಕುಮಾರಸ್ವಾಮಿಯವರ ಅವಿಶ್ರಾಂತ ಸೇವೆ ಯಿಂದ ಸುಸಂಸ್ಕೃತ ಐರೋಪ್ಯರು, ಅಮೆರಿಕನ್ನರಲ್ಲಿ ಭಾರತದ ಸಾಂಸ್ಕೃತಿಕ ಜೀವಾಳವನ್ನರಿಯುವ ಕುತೂಹಲ ಹುಟ್ಟಿತು. ಯೂರೋಪ್, ಅಮೇರಿಕಾ ದೇಶಗಳಲ್ಲಿ ಪ್ರವಾಸ ಕೈಗೊಂಡು ಉದಯಶಂಕರ್ ಅವರು ಭಾರತೀಯ ದೇವಾಧಿದೇವತೆಗಳ ಕಥೆಗಳನ್ನು ನೃತ್ಯದಲ್ಲಿ ತೋರಿಸಿ ಈ ಕುತೂಹಲಕ್ಕೆ 'ಇಂಬುಗೊಟ್ಟರು. ಉದಯಶಂಕರರಿಗೆ ವಿಲಾಯತಿಯಲ್ಲಿ ದೊರೆತ ಪ್ರೋತ್ಸಾಹ, ಮಾತೃಭೂಮಿಯಲ್ಲಿದ್ದ ಕಲಾವಿದರ ಮನಸ್ಸಿನಲ್ಲಿ ಆಸೆಯನ್ನು, ಧೈರ್ಯವನ್ನು ಕೆರಳಿಸಿತು. ಭಾರತೀಯ ನೃತ್ಯಕಲೆಯ ಶುದ್ದ ಸ್ವರೂಪವನ್ನರಸಲು ಮೇನಕಾ, ಶ್ರೀಮತಿ ಹತ್‌ಸಿಂಗ್, ರುಕ್ಕಿಣಿ ಆರುಂಡೇಲ್ ಮೊದಲಾದವರು ಪ್ರಯತ್ನಿ ಸಿದರು, ಐರೋಪ್ಯದ ಪ್ರಖ್ಯಾತ ನೃತ್ಯಗಾರರಾದ ಲಾ ಮೇರಿ, ರಾಗಿಣಿದೇವಿ,