ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೧೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

fo ಕರ್ನಾಟಕದ ಕಲಾವಿದರು ಭರ್ತೃನೆ, ಪ್ರೋತ್ಸಾಹದಾರಿದ್ರಗಳನ್ನು ಪರಿಗಣಿಸದೆ ತಮ್ಮ ಕಲಾಭಿಮಾನ ವನ್ನು ಕಾಪಾಡಿಕೊಂಡು ಬಂದಿದ್ದಾರೆ. ನೃತ್ಯ ಕಲೆಯ ತಂತ್ರದ ಬಗ್ಗೆ ಪ್ರದರ್ಶನದಿಂದ ಕೂಡಿದ ಭಾಷಣಗಳನ್ನು ಮಾಡಿ ಜನತೆಯಲ್ಲಿ ಕಲಾಭಿರುಚಿ ಬೆಳೆಯುವಂತೆ ಮಾಡುತ್ತಿದ್ದಾರೆ. ಕೃಷ್ಣರಾಯರದು ನೃತ್ಯಕ್ಕೆ ಅಳವಟ್ಟ ಪ್ರಮಾಣಬದ್ದವಾದ ದೇಹ. ಮುಖಲಕ್ಷಣವೂ ಭಾವಪ್ರದರ್ಶನಕ್ಕೆ ಅನುಕೂಲಿಸುವಂತಿದೆ. ಭರತನಾಟ್ಯ, ಕಥಕ್ಕಳಿ ಸಂಪ್ರದಾಯಗಳನ್ನು ಅಧಿಕೃತ ಆಚಾರ್ಯರಿಂದ ಶಾಸ್ರೋಕ್ತವಾಗಿ 'ಕಲಿಯಲು ಕೃಷ್ಣರಾಯರು ಪ್ರಯತ್ನಿಸಿದ್ದಾರೆ. ಕೃಷ್ಣರಾಯರ ಕಲಾಪರಿಣತ 'ಮತಿಯನ್ನು ಕುರಿತು ಅವರ ಗುರುಗಳಾದ ಮಾನಾಕ್ಷಿ ಸುಂದರಂ ಪಿಳ್ಳೆಯವರು ವ್ಯಕ್ತಪಡಿಸಿರುವ ಅಭಿಪ್ರಾಯವಿದು : ' ನನ್ನ ಪ್ರಿಯ ಶಿಷ್ಯ ಶಿಷ್ಯರಾದ ಕೃಷ್ಣರಾಯರು, ಚಂದ್ರಭಾಗಾದೇವಿ ಈ ಪುರಾತನ ಕಲೆಯನ್ನು ಶಾಸೊಕ್ಕ ವಾಗಿ ಅಭ್ಯಾಸ ಮಾಡಿದ್ದಾರೆ. ನೃತ್ಯಕಲೆ ಕಲಿಯಲು ಅವರು ತೋರಿದ ಶ್ರದ್ದೆ, ಜಾಣೆ ನನ್ನನ್ನು ಸಂತೋಷಗೊಳಿಸಿದೆ. ಎರಡೇ ತಿಂಗಳಲ್ಲಿ ಈ ಕಲೆಯನ್ನು ಮನನ ಮಾಡಲು ಅವರಿಗೆ ನೆರವಾದುದು ಅವರ ಅಪರಿಮಿತ ಉತ್ಸಾಹ ಹಾಗೂ 'ಉತ್ಕಟ ಕಲಾಭಿಮಾನ, ಅವರ ತಾರುಣ್ಯ, ಅಭಿರುಚಿ, ಭಾವ, ಲಯ, ತಂತ್ರ ನೈಪುಣ್ಯ ಅವರಿಗೆ ಬಹುಮಟ್ಟಿಗೆ ಸಿದ್ಧಿಸಿವೆ. ಪುರಾತನ ಪದ್ದತಿಗನುಸಾರವಾಗಿ ನಾನು ಹೇಳಿಕೊಟ್ಟಂತೆ ಅವರು ಭರತನಾಟ್ಯ ಪ್ರದರ್ಶನ ಮಾಡುತ್ತಾರೆಂದು ನಾನು ಧೈರ್ಯವಾಗಿ ಹೇಳಬಲ್ಲೆ. ಈ ಮಟ್ಟಕ್ಕೆ ನೃತ್ಯ ಕಲೆಯನ್ನು ಕಲಿತ ಬ್ರಾಹ್ಮಣ ದಂಪತಿಗಳಲ್ಲಿ ಇವರೇ ಮೊದಲಿಗರು. ಈ ಕಲೆ ಕಲಿಯುವ ಇತರರಿಗೆ ಇವರು ಮಾರ್ಗದರ್ಶಕರಾಗುತ್ತಾರೆಂಬ ನಂಬಿಕೆ ನನಗಿದೆ.' ಇ. ಕೃಷ್ಣಯ್ಯ, ಪೊನ್ನಯ್ಯಪಿಳ್ಳೆ, ಮರೂರು ಸುಬ್ರಹ್ಮಣ್ಯಂ ಮೊದಲಾದ ಪ್ರಸಿದ್ದ ಕಲಾ ವಿಮರ್ಶಕರು, ವಿದ್ವಾಂಸರು ಇದೇ ಅಭಿಪ್ರಾಯವನ್ನು ಕೃಷ್ಣರಾಯರ ಬಗ್ಗೆ ವ್ಯಕ್ತಪಡಿಸಿದ್ದಾರೆ. . ಕೃಷ್ಣರಾಯರ ಪ್ರದರ್ಶನಗಳಲ್ಲಿ ಸ್ವರಜತಿ, ಅಲರಿಪು, ತಿಲಾನಗೆಳಲ್ಲದೆ ಅವರ ಕಲ್ಪನಾನೃತ್ಯಗಳೂ ಇರುತ್ತವೆ. ಕೃಷ್ಣರಾಯರ ಕಲೆಯಲ್ಲಿ ಮೂರು ಮುಖ್ಯಾಂಶಗಳಿವೆ. 'ಗೀತಗೋವಿಂದ'ದಂಥ ಮಹಾಕಾವ್ಯವನ್ನು ಸಂಪ್ರದಾಯ