ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮುನ್ನುಡಿ ಬೆಳೆದ ಕಲೆಯ ಎಲ್ಲ ಪ್ರಕಾರಗಳೂ ಜನಪದದ ರಸವಿಲಾಸಕ್ಕೆ ಮಾಸಲಾಗಲಿಲ್ಲ. ಆದರೆ ಜನಪದ ವಿಶಿಷ್ಟ ರೀತಿಯಲ್ಲಿ ಕಲೆಯನ್ನು ಬೆಳಸಿಕೊಂಡು ಉತ್ತಮ ವರ್ಗದವರ ಮೇಲೂ ಪ್ರಭಾವಮೂಡಿತು. ಅಜಂತೆಯ ಚಿತ್ರಕಲೆ, ವೇತೂಳ ಬಾದಾಮಿಯ ಶಿಲಾ ಶಿಲ್ಪಗಳು, ಜಾನಪದ ಗೀತೆ, ನೃತ್ಯ, ಚಿತ್ರ, ರಂಗವಲ್ಲಿ (ಅಲ್ ಫೋನಾ), ಯಕ್ಷಗಾನ, ಕಥಾಕಳಿ, ತಾಳಮದ್ದಳೆ, ಕರಡಿ ಮಜಲು ಜಾನಪದದಲ್ಲಿ ಹುಟ್ಟಿದ ಕಲಾಪ್ರಕಾರಗಳು. ಅವುಗಳ ಸುಭಗತೆ ಕಂಡು ನಾಗರಿಕ ಪ್ರಪಂಚವಿಂದು ಬೆಕ್ಕಸಬೆರಗಾಗಿದೆ. * ಬ್ರಿಟಿಷ್ ಸಾಮ್ರಾಜ್ಯಶಾಹಿ ಹಾಗೂ ಪಟ್ಟಣದ ನಾಗರಿಕತೆಯಲ್ಲಿ ಬೆಳೆದ ವಿದ್ಯಾವಂತರು ದೇಶೀಯವಾದ ಜನಪದ ಕಲೆಯನ್ನು ನಿರ್ನಾಮ ಮಾಡಲು ಮನಸ್ಸು ಮಾಡಿದರು. ಅವರ ಇನ್ನೂರು ವರ್ಷಗಳ ಅವಿಶ್ರಾಂತ ಕ್ರಿಯೆಯಿಂದ ಭಾರತದ ಜನಪದ ಕಲೆ ಪತನದ ಮಾರ್ಗ ಹಿಡಿಯಿತು. ಈ ಪರಿಸ್ಥಿತಿಯಲ್ಲಿ ಅಲ್ಪಸ್ವಲ್ಪವಾದರೂ ಕಲೆಯನ್ನು ಉಳಿಸಿದ ಕೀರ್ತಿ ಮೈಸೂರು, ಬರೋಡಾ, ಇಂದೂರು, ಜಯಪುರ ಸಂಸ್ಥಾನಾಧೀಶ್ವರರಿಗೂ, ತಾತಾ, ಪಿಟಟ್, ಎಸ್. ವಿ. ರಾಮಸ್ವಾಮಿ ಮೊದಲಿಯಾರ್, ಸಾಲಾರ್ ಜಂಗ್ ಬಹದ್ದೂರ್ ಮೊದಲಾದ ಶ್ರೀಮಂತರಿಗೂ ಸೇರಬೇಕು. ಆದರೆ ಇವರ ಪ್ರಯತ್ನದಿಂದ ಅಭಿಜಾತವೆನಿಸಿಕೊಂಡಿದ್ದ ಕಲೆಯ (Elite Art) ಉದ್ದಾರವಾಯಿತಲ್ಲದೆ, ನಾಡಿನ ಜೀವನಾಡಿ ಮಿಡಿಯುವ ಜಾನಪದ ಕಲೆಯ ಉದ್ಧಾರವಾಗಲಿಲ್ಲ. 1 and an occasion for self-complacency, it must strengthen your character and make it more fitted for right action. And little as I like the deduction, I cannot but accept it; and this is that the work of art must be judged by its fruits, and if these are not good it is valueless. It is an odd fact, which inust be accepted as in the nature of things and for which I know no explanation, that the artist achieves this effect only when he does not intend it. His sermon is most efficacious if he has no notion that he is preaching one. The bee produces wax for her own purpose and is unaware that man will put it to diverse uses. -IBID (Page 310)