ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೧೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ನಾಟಕದ ಕಲ ಏದರು ಪಾರ್ಥಿವ ಪ್ರಪಂಚಕ್ಕಾಗಿ ! ಅವನ ಕೈಯಿಂದ ಗಾಂಡೀವ ಜಾರುತ್ತದೆ ಕಣ್ಣುಗಳಿಂದ ಹನಿ ಜಾರುತ್ತದೆ. ಅವನ ಕಣ್ಣು ಮುಂದೆ ಸಾವುನೋವುಗಳ ಭೀಕರ ಚಿತ್ರ ಸುಳಿಯುತ್ತದೆ. ಸ್ಥಿತಪ್ರಜ್ಞನಾದ ಭಗವಾನ್ ಕೃಷ್ಣ ತನ್ನ ವೀರಶಿಷ್ಯ ಹಂಬೇಡಿಯಾದುದನ್ನು ದಿಟ್ಟಿಸಿ ನೋಡುತ್ತಾನೆ. ಅರ್ಜುನನನ್ನು *ಬ - ಅನಾರ್ಯ ಎಂದು ಮೂದಲಿಸಲು ಶ್ರೀಕೃಷ್ಣ ಹಿಂಜರಿಯುವುದಿಲ್ಲ. ಧರ್ಮಸಂಸ್ಥಾಪನೆಗೆ ಅಧರ್ಮದೊಂದಿಗೆ ಹೋರಾಡುವುದು ಕತ್ರಿಯನ ಕರ್ತವ್ಯ ಅರ್ಜುನನ ಎಲ್ಲ ಆಕ್ಷೇಪಣೆಗಳಿಗೂ ಸಂದೇಹಗಳಿಗೂ ಸಮಂಜಸವಾದ ಉತ್ತರ ವಿತ್ತು ಯುದ್ದಾವಶ್ಯಕತೆಯನ್ನು ಸಿದ್ಧ ಮಾಡಿ ತೋರಿಸುತ್ತಾನೆ. ತನ್ನ ತಾತ್ತಾ ಲಿಕ ದೌರ್ಬಲ್ಯವನ್ನು ನೀಗಿಕೊಂಡು ಅರ್ಜುನ ಮಹಾಪಾರ್ಥನಾಗಿ ವಿಜೃಂಭ ಸುತ್ತಾನೆ. ಭಗವದ್ಗೀತೆಯ ಈ ವಸ್ತು ಅತ್ಯಂತ ಸುಂದರವಾಗಿರುವಂತೆ ಅತಿ ಕ್ಲಿಷ್ಟವಾದುದೂ ಆಗಿದೆ. ಅರ್ಜುನನ ಒಳತೋಟಿಗೆ ಪ್ರತಿಯಾಗಿ ಕಾಣು ವುದು ಕೃಷ್ಣನ ಸುಶಾಂತ ಪ್ರವೃತ್ತಿ. ಕೃಷ್ಣರಾಯರು ಈ ಘನವಸ್ತುವಿಗೆ ಯೋಗ್ಯ ಆದರ ತೋರಿದ್ದಾರೆ. ಅರ್ಜುನ ವೀರಮನೋಭಾವವನ್ನು ತೋರಲು ಕಥಕ್ಕಳಿಯ ಅಷ್ಟ ಕಾಲ ತುಂಬ ನೆರವಾಗುತ್ತದೆ.

  • ಸಾರಿಗಾಕೊಂಗು' ಪದನಿರೂಪಣೆಯಲ್ಲಿ ಕೃಷ್ಣರಾಯರು ಶ್ರೀಕೃಷ್ಣನ ಬಾಲಲೀಲೆಗಳನ್ನು ಚಿತ್ರಿಸುತ್ತಾರೆ. ಜನಸಾಮಾನ್ಯರ ಕೈಗೆ ಸಿಕ್ಕಿದ ಕೃಷ್ಣನ ರಾಸಲೀಲಾ ವಿಪರೀತಾರ್ಥಕ್ಕೊಳಗಾಗಿದೆ. ನೃತ್ಯಕಾರ ಸಾಕಷ್ಟು ಭಾವ ಜೀವಿಯೂ, ಮರ್ಮಜ್ಞನೂ ಆಗಿರದಿದ್ದರೆ ಕ್ರೈಸ್ತ ಪಾದ್ರಿಗಳಂತೆ ಕೃಷ್ಣ ಒಬ್ಬ ಡಾನ್ಜುವಾನನೋ ಕ್ಯಾಸನೋವನೋ ಆಗಿರಬೇಕೆಂದು ಭಾವಿಸುತ್ತಾನೆ. ಕೃಷ್ಣನ ಅನುಭಾವಜೀವನ ಹಾಗೂ ಗೋಪಿಕಾಕಸ್ಯೆಯರ ಮೇಲೆ ಅವನು ಮೂಡಿದ ಆಧ್ಯಾತ್ಮಪ್ರಭಾವದ ಕಡೆಗೆ ಕೃಷ್ಣರಾಯರು ನನ್ನ ಗಮನ ಸೆಳೆಯು ತಾರೆ. ಶ್ರೀ ಕೃಷ್ಣ ಅಖಂಡ ಬ್ರಹ್ಮಾಂಡದ ಮಹಾಪ್ರಭು-ತನ್ನ ವಿರಾಟ್ ಗರ್ಭದಲ್ಲಿ ಎಲ್ಲ ಜೀವಿಗಳಿಗೆಡೆಯುವಂತೆ ಬೃಂದಾವನದ ಸ್ನಿಗ್ಧ ಸುಂದರ, ಪರಿಶುದ್ದ ಗೋಪಿಯರಿಗೂ ಎಡೆಯಿಯುತ್ತಾನೆ. ಶ್ರೀಕೃಷ್ಣ ತನ್ನ ರಾಸ ಲೀಲಾ ರಹಸ್ಯವನ್ನು ಗೀತೆಯ ಕೊನೆಯ ಅಧ್ಯಾಯದಲ್ಲಿ ತಾನೇ ಬಿಡಿಸಿಹೇಳು ತ್ತಾನೆ: ' ಸರ್ವಧರ್ಮಾನ್ ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ | ಅಹಂ ತ್ಯಾ ಸರ್ವಪಾಪೇನ್ಯೂ ಮೋಕ್ಷಯಿಷ್ಯಾಮಿ ಮಾ ಶುಚಃ !”