ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೧೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ನಾಟಕದ ಕಲಾವಿದರು ಪ್ರಾಚೀನ ಕನ್ನಡ ಕವಿಯೇ ಇಲ್ಲ. ಪ್ರೋತ್ಸಾಹಶಾಹಿತ್ಯದಿಂದ ಭರತನಾಟ್ಯ ಮೈಸೂರಿನಲ್ಲಿ ನಾಮಾವಶೇಷವಾಗುತ್ತಿದೆ. ಆದರೂ ಅಳಿದುಳಿದಿರುವ ಕೆಲವು ಪರಂಪರಾಗತ ನರ್ತಕರ ತಂತ್ರ ಪರೀಕ್ಷೆ ಮಾಡಿದರೆ ( ಭರತನಾಟ್ಯ 'ದ ಶುದ್ಧ ಸ್ವರೂಪ ಮೈಸೂರಿನಲ್ಲೇ ಉಳಿದುದು ಎಂದು ತಿಳಿಯದಿರದು. ದಕ್ಷಿಣದ “ಭರತನಾಟ್ಯದ ಮೇಲೆ ಅದರಲ್ಲಿಯೂ (ಮಾನಾಕ್ಷಿ ಸುಂದರಂ ಸಿಳ್ಳೆಯವರ ಸಂಪ್ರದಾಯದ ಮೇಲೆ) ಕಥಕ್ಕಳಿ ಸಂಪ್ರದಾಯ ವಿಶೇಷ ಪ್ರಭಾವ ಬೀರಿ `ದಂತೆ ಕಂಡುಬರುತ್ತದೆ. ಅಚ್ಚ ಮೈಸೂರು ಸಂಪ್ರದಾಯವನ್ನೇ ಅಭ್ಯಾಸ ಮಾಡಿದ ನರ್ತಕನರ್ತಕಿಯರಲ್ಲಿ ಕಂಡುಬರುವ ನಯ, ಸಿಗ್ಧತೆ, ಸೌಕು ಮಾರ್ಯ ಸಾಮಾನ್ಯವಾಗಿ ದಕ್ಷಿಣದ ನರ್ತಕ ನರ್ತಕಿಯರಲ್ಲಿ ಕಂಡುಬರುವು ದಿಲ್ಲ. ಭರತನಾಟ್ಯದ ಪುನರುಜೀವನಕ್ಕೆ ಮಾನಾಕ್ಷಿ ಸುಂದರಂ ಪಿಳ್ಳೆಯವರು ಮಾಡಿರುವ ಸೇವೆ ಅಮೋಘವಾದುದೆಂಬುದರಲ್ಲಿ ಸಂದೇಹವಿಲ್ಲ. ಆದರೆ ನಮ್ಮ ಕಲಾವಿದರು ವಿಮರ್ಶಾಗುಣವನ್ನು ನೀಗಿಕೊಂಡು ಪರಸ್ತುತಿ, ಸ್ವಜನಖಂಡನೆ ಯಲ್ಲಿ ತೊಡಗಬೇಕಾದ ಕಾರಣವಿಲ್ಲ. ಕೃಷ್ಣರಾಯರಂಥ ಅರಿತು ನುರಿತವರು ಮೈಸೂರು ಸಂಪ್ರದಾಯದ ಬಗ್ಗೆ ಹೆಚ್ಚು ಶೋಧ ನಡೆಸಿ ಅದರ ಅವಶೇಷಗಳ ನಾದರೂ ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕು. ಅವರು ಕಲಿತ ಕಲೆಗೆ ಅವರು ನೀಡಬೇಕಾಗಿರುವ ಕಾಣಿಕೆ ಇದೇ ಆಗಿದೆ.