ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೧೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸ್ವರಮೂರ್ತಿ ವಿ. ಎನ್. ರಾವ್ ಹೇಶವ, ಬಾಲ್ಯಾವಸ್ಥೆಗಳಲ್ಲಿ ಪ್ರತಿಭೆ ತೋರಿದ ಮಕ್ಕಳು ತರುವಾಯ ಅದನ್ನು ತಿ ರೂಢಿಸಿಕೊಳ್ಳುವುದು ಅಪರೂಪ, ವಯಸ್ಸು ಬಂದಂತೆ ಬಾಲ ಕಲಾವಿದರ ಪ್ರತಿಭೆ ರಾಹುಗ್ರಾಸವಾಗುತ್ತದೆ. ಶೈಶವ್ಯದಿಂದ ಒಂದೇ ಬಗೆಯ ಪ್ರತಿಭೆಯನ್ನು ತೋರಿಸಿಕೊಂಡು ಇಂದಿಗೂ ಅದನ್ನು ಕಾಪಾಡಿಕೊಳ್ಳು ತಿರುವವರಲ್ಲಿ ಮದರಾಸಿನ ಮಹಾಲಿಂಗಂ ಮತ್ತು ಮೈಸೂರಿನ ವಿ ರ್ಎ. ರಾವ್ ಅನ್ಯಾದೃಶರಾಗಿದ್ದಾರೆ. ಕರ್ನಾಟಕ ಸಂಗೀತ ಸಾರ್ವಭೌಮರಾದ ವೈಣಿಕ ಶಿಖಾಮಣಿ ಶೇಷಣ್ಣ ನವರ ಪರಂಪರೆಯನ್ನು ಕಾಯ್ದುಕೊಂಡು ಬರುತ್ತಿರುವ ವಿ. ರ್ಎ, ರಾಯರು ಶೇಷಣ್ಣನವರಿಗೆ ಸೋದರಿಯ ಪುತ್ರರು. ಇವರ ತಂದೆ ವೀಣೆ ರಾಮಣ್ಣನವರೂ ಸಂಗೀತದ ಮನೆತನದಲ್ಲಿ ಹುಟ್ಟಿ ಬೆಳೆದವರು. ವಿ. ರ್ಎ. ರಾಯರಿಗೆ ತಾಯಿ, ತಂದೆ ಇಬ್ಬರ ಕಡೆಯಿಂದಲೂ ಸಂಗೀತ ಹಿರಿಯ ಅಸ್ತಿಯಾಗಿ ದೊರೆಯಿತು. ಈ ... ಶೇಷಣ್ಣನವರಿಗೆ ಗಂಡುಮಕ್ಕಳಿಲ್ಲ. ವಿ. ಎನ್. ರಾಯರ ತಂದೆ ರಾಮಣ್ಣನವರನ್ನೇ ದತ್ತು ತೆಗೆದುಕೊಂಡರು. ಮೊಮ್ಮಗ ವೆಂಕಟನಾರಾಯಣ ನನ್ನು (ವಿ. ಎನ್. ರಾವ್) ಕಂಡರೆ ಅವರಿಗೆ ಪಂಚಪ್ರಾಣ. ತಾವು ಕಛೇರಿ ಗಳಿಗೆ ಹೋಗುವಾಗ ಹತ್ತು ತಿಂಗಳ ಮೊಮ್ಮಗನನ್ನು ಜತೆಯಲ್ಲಿಯೇ ಕರೆದು ಕೊಂಡು ಹೋಗುತ್ತಿದ್ದರು. ವಿ. ರ್ಎ. ರಾಯರಿಗೆ ತೊಟ್ಟಿಲಿನಲ್ಲಿಯೇ ಸಂಗೀತಾ ಭ್ಯಾಸ ಆರಂಭವಾಯಿತೆಂದರೆ ಅತಿಶಯೋಕ್ತಿಯಲ್ಲ. ಶೇಷಣ್ಣನವರು ವೀಣೆ ನುಡಿಸುತ್ತಿದ್ದರೆ ಮೂರು ನಾಲ್ಕು ವರ್ಷ ವಯಸ್ಸಿನ ವೆಂಕಟನಾರಾಯಣ