ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೧೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ನಾಟಕದ ಕಲಾವಿದರು ಗೋಲಿಯಾಡುತ್ತ ತಾಳ ಹಾಕುತ್ತಿದ್ದ. ವೆಂಕಟನಾರಾಯಣನ ಐದನೆಯ ವಯಸ್ಸಿನಲ್ಲಿ ಶೇಷಣ್ಣನವರು ಸಂಗೀತ ಶಿಕ್ಷಣ ಆರಂಭಿಸಿದರು. ತಾವು ನುಡಿಸಿ ದುದಕ್ಕೆ ವೆಂಕಟನಾರಾಯಣ ಸ್ವರ ಹಾಕಬೇಕು ; ನುಡಿಸಿದುದನ್ನು ಹಾಡಿ ತೋರಿಸಬೇಕು. ಆರೋಹ, ಅವರೋಹ ಸೂಚಿಸಿ ಅದನ್ನು ಅನುವರ್ತಿಸಿದ ರಾಗ ಹಾಡಿಸುತ್ತಿದ್ದರು. ವೆಂಕಟನಾರಾಯಣನ ಕಲಾದೀಧಿತಿ ಪ್ರಕಾಶಕ್ಕೆ ಬರಲು ಬಹಳ ದಿನ ಬೇಕಾಗಲಿಲ್ಲ. ಶೇಷಣ್ಣನವರಿಗೆ ಹೈದರಾಬಾದಿನ ನೈಜಾಮರಿಂದ ಕರೆಬಂತು. ಅವರು ಜತೆಯಲ್ಲಿ ಮೊಮ್ಮಗನನ್ನೂ ಕರೆದುಕೊಂಡುಹೋದರು. ನೈಜಾಮರ ಮುಂದೆ ವೆಂಕಟನಾರಾಯಣನ ಸಂಗೀತ ಪ್ರದರ್ಶನವಾಯಿತು. ಬಾಲಕನ ಸಂಗೀತ ಪರಿಜ್ಞಾನಕ್ಕೆ ಬೆರಗಾದ ನೈಜಾಮರು ಅವನಿಗೆ ಖಿಲ್ಲತ್ತುಗಳನ್ನೂ, ಪ್ರಶಸ್ತಿ ಪತ್ರವನ್ನೂ ದಯಪಾಲಿಸಿದರು. ಅದೇ ವರ್ಷ ಮಾಘ ಮಾಸದಲ್ಲಿ ಗದ್ವಾಲ್ ಸಂಸ್ಥಾನದಲ್ಲಿ ಶೇಷಣ್ಣನವರ ಕಛೇರಿಯಾದಮೇಲೆ ರಾತ್ರಿ ಮೂರು ಘಂಟೆಯ ಸುಮಾರಿಗೆ ವೆಂಕಟನಾರಾಯಣನ ಕಛೇರಿಯಾಯಿತು. ಬಾಲಕನ ಪ್ರತಿಭೆ ಕಂಡು ಮಾರುಹೋದ ಸಂಸ್ಥಾನಾಧೀಶರು ಮಾರನೆಯ ದಿನದ ವಿದ್ಯತ್ವ ಭೆಯಲ್ಲಿ ವೆಂಕಟನಾರಾಯಣನನ್ನು ಸತ್ಕರಿಸಿ ಅವನಿಗೆ ಸ್ವರಮೂರ್ತಿ' ಎಂಬ ಬಿರುದನ್ನು ಕೊಟ್ಟು ಗೌರವಿಸಿದರು. ಮೈಸೂರಿನ ಹೊರಗೆ ಬಿರುದು ಬಾವಲಿಗಳನ್ನು ಪಡೆದುಬಂದ ವೆಂಕಟನಾರಾಯಣನ ಕಛೇರಿ ಕೇಳಲು ಆಳಿದ ಮಹಾಸ್ವಾಮಿಯವರಾದ ಶ್ರೀಮನ್ನಾಲ್ವಡಿ ಕೃಷ್ಣರಾಜ ಒಡೆಯರವರು ಮೂರು ತಿಂಗಳ ಗಡುವನ್ನಿತ್ತರು. ಶ್ರೀಮನ್ಮಹಾರಾಜರ ಮುಂದೆ ಹಾಡಿಸಲು ಶೇಷಣ್ಣನವರು ಶಿಷ್ಯನನ್ನು ಸಿದ್ಧ ಗೊಳಿಸಲಾರಂಭಿಸಿದರು. ಸಾವೇರಿ ರಾಗದಲ್ಲಿ ಪಾಠ ಆರಂಭವಾಯಿತು. ಎಂಟು ಕೀರ್ತನೆ, ರಾಗ, ಪಲ್ಲವಿಗಳ ಅಭ್ಯಾಸವಾಯಿತು. ಶ್ರೀಮನ್ಮಹಾರಾಜರವರು ಪಂಕಟನಾರಾಯಣನ ಸಂಗೀತ ಕೇಳಿ ಸಂತೋಷಿಸಿ ಚೆನ್ನಾಗಿ ಅಭ್ಯಾಸವಾ ಡೆಂದು ಸಂದೇಶವಿತ್ತರು. ಶೇಷಣ್ಣನವರ ಪಾಠ ಮತ್ತಷ್ಟು ಕಠೋರವಾಯಿತು. ಬಾಯಿ ಹಾಡುಗಾರಿಕೆಯ ಜತೆ ವೀಣೆ ಅಭ್ಯಾಸವೂ ಮೊದಲಾಯಿತು. ಶೇಷಣ್ಣ ನವರು ಶಿಷ್ಯನನ್ನು ರಾತ್ರಿ ಎರಡು ಗಂಟೆಗೆ ಎಬ್ಬಿಸಿ ಪಾಠ ಹೇಳಿಕೊಟ್ಟು, ಬೆಳಿಗ್ಗೆ ಅದರ ಪರೀಕ್ಷೆ ತೆಗೆದುಕೊಳ್ಳುತ್ತಿದ್ದರು. ತಮ್ಮ ಕಛೇರಿಗಳಲ್ಲಿ