ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೧೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸ್ವರಮೂರ್ತಿ ವಿ. ಎನ್. ರಾವ್ ಬೆಂಕಟನಾರಾಯಣನಿಂದ ಪಲ್ಲವಿ ಹಾಡಿಸುತ್ತಿದ್ದರು. ಆರು ತಿಂಗಳಾನಂತರ ಶ್ರೀಮನ್ಮಮಹಾರಾಜರ ಮುಂದೆ ಪುನಃ ಕಛೇರಿಯಾಯಿತು. ಶ್ರೀಮನ್ನ ಹಾರಾಜರವರು ಸೂಕ್ಷ್ಮವಾಗಿ ತಮ್ಮ ಮೆಚ್ಚಿಗೆ ವ್ಯಕ್ತಪಡಿಸಿ ಅಭ್ಯಾಸ ಮುಂದುವರಿಸೆಂದು ೧೯೨೯ರಲ್ಲಿ ಬೆಳಗಾಂವಿಯಲ್ಲಿ ಗಾಂಧೀಜಿಯವರು ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಜತೆಯಲ್ಲಿ ಸಂಗೀತ ಸಮ್ಮೇಳನವೂ ವ್ಯವಸ್ಥಿತ ವಾಗಿತ್ತು. ಶೇಷಣ್ಣನವರ ಜತೆಯಲ್ಲಿ ಹೋದ ವೆಂಕಟನಾರಾಯಣನಿಗೆ ಗಾಂಧೀಜಿ ಮುಂದೆ ಹಾಡುವ ಸುಯೋಗಸಿಕ್ಕಿತು. ಭಾರತ ಭಾಗ್ಯ ವಿಧಾತನ ಆಶೀರ್ವಾದದಿಂದ ವೆಂಕಟನಾರಾಯಣನ ಕಲಾಲತೆ ಕುಡಿಯೊಡೆಯಲು ಅನು ಕೂಲವಾಯಿತು. ಬೆಳಗಾಂವಿಯಿಂದ ಹಿಂದಿ-ುಗಿದಮೇಲೆ ಮೈಸೂರು ಸಿವಿಲ್ ಸರ್ವಿಸ್ ಅಸೋಸಿಯೇಷನ್ನಿನಲ್ಲಿ ಶೇಷಣ್ಣನವರ ಮತ್ತು ವೆಂಕಟನಾರಾಯಣನ ಕಛೇರಿ ವ್ಯವಸ್ಥೆಯಾಯಿತು. ರೆಸಿಡೆಂಟರ ಹಸ್ತದಿಂದ ವೆಂಕಟನಾರಾಯಣನಿಗೆ ಚಿನ್ನದ ಪದಕ ಪಾರಿತೋಷಿಕವಾಗಿ ಸಿಕ್ಕಿತು. ೧೯೨೫ರಲ್ಲಿ ಮದರಾಸಿನ ಚನ್ನಪುರಿ ಆಂಧ್ರ ಸಭೆಯಲ್ಲಿ ವಿ. ಎನ್. ರಾಯರ ಮೊಟ್ಟ ಮೊದಲಿನ ಸಾರ್ವ ಜನಿಕ ಕಛೇರಿಯಾಯಿತು. ಅಂದು ಅವರ ಹಾಡುಗಾರಿಕೆ ಕೇಳಿದ ಪಾರ್ಥಸಾರಥಿ ಸಭೆಯವರೂ, ಮದರಾಸಿನ ಇನ್ನಿತರ ಸಭೆಯವರೂ ಕಛೇರಿಗಳನ್ನೇರ್ಪಡಿಸಿದರು. ಥಿಯೋಸೋಫಿಕಲ್ ಸೊಸೈಟಿಯ ರಜತೋತ್ಸವ ಸಂದರ್ಭದಲ್ಲಿ ವಿ. ಎನ್. ರಾಯರು ಶೇಷಣ್ಣನವರ ಕಛೇರಿ ಮುಗಿದಮೇಲೆ ಹಾಡಿ ವಿದ್ವಜ್ಜನರನ್ನು ಬೆರಗುಗೊಳಿಸಿದರು. ಮಾರನೆಯ ವರ್ಷ ವಿ. ಎನ್. ರಾಯರ ಜೀವನದ ಮಹಾದುರಂತ ಸಂಭವಿಸಿತು. ಸರಸ್ವತಿಯ ವ ರ ಪುತ್ರ ರಾ ದ ವೈಣಿಕಶಿಖಾಮಣಿಗಳು ಕಾಲಾಧೀನರಾಗಿ ಸಂಗೀತ ಪ್ರಪಂಚವನ್ನೇ ಅಪಾರ ದುಃಖಕ್ಕೀಡುಮಾಡಿದರು. ಸಾಯುವ ಮುನ್ನ ಶೇಷಣ್ಣನವರು ಮೊಮ್ಮಗನನ್ನು ಹತ್ತಿರ ಕರೆದು ಅವನ ಮೈದಡವಿ ಆಶೀರ್ವದಿಸುತ್ತಾ 'ವಿದ್ಯೆ ಕಲಿಯುವುದಕ್ಕೆ ಹಿಂಜರಿಯಬೇಡ.' ಎಂದು ಹೇಳಿದರು. ಆಳಿದ ಮಹಾಸ್ವಾಮಿಯವರು ಶೇಷಣ್ಣನವರ ಕರುಣೆಯ ಶಿಶುವನ್ನು ಎತ್ತಿಕೊಂಡರು. ಅರಮನೆಯಲ್ಲಿ ತಿಂಗಳಿಗೆ ಇಪ್ಪತ್ತು ರೂಪಾಯಿ ಸಂಬಳ ಮಾಡಿಕೊಟ್ಟು, ವೀಣೆ ಸುಬ್ಬಣ್ಣ ನ ವ ರಲ್ಲಿ ಸಂಗೀತಾಭ್ಯಾಸ