ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೧೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

re ಕರ್ನಾಟಕದ ಕಲಾವಿದರು ಮುಂದುವರಿಸಲು ಅನುಕೂಲಮಾಡಿಕೊಟ್ಟರು. ವಿ. ಎನ್. ರಾಯರ ಸಂಗೀತಕ್ಕೆ ಶೇಷಣ್ಣನವರು ಭದ್ರವಾದ ಬುನಾದಿ ಹಾಕಿದ್ದುದರಿಂದ ಸುಬ್ಬಣ್ಣನವರ ಕೆಲಸ ಹಗುರವಾಯಿತು. ಬೆರಳು ತೋರಿದರೆ ಹಸ್ತ ನುಂಗುವ ಶಿಷ್ಯ, ಎರಡು ವರ್ಷಗಳ ಶಿಕ್ಷಣವಾದ ಮೇಲೆ ಶ್ರೀಮನ್ಮಹಾರಾಜರು ವಿ. ಎನ್. ರಾಯರನ್ನು ನೀಲಗಿರಿಗೆ ಬರಮಾಡಿಕೊಂಡು ಅವರ ವಿದ್ವತ್ತನ್ನು ತಾವೇ ಪರೀಕ್ಷಿಸಿ ಆಸ್ಥಾನವಿದ್ವಾನ್ ಪದವಿಯನ್ನು ಅನುಗ್ರಹಿಸಿದರು. ರಾಯರು ಆಸ್ಥಾನ ವಿದ್ವಾಂಸರಾದಾಗ ಅವರ ವಯಸ್ಸು ಹದಿನೈದು : ಭಾರತೀಯ ಸಂಗೀತ ವಿದ್ವಾಂಸರಿಗೆ ಪಾಶ್ಚಾತ್ಯ ಸಂಗೀತದ ಪರಿಚಯ ವಿರಬೇಕೆಂಬುದು ತಿಳಿದ ಶ್ರೀಮನ್ಮಹಾರಾಜರವರ ಅಭಿಪ್ರಾಯವಾಗಿತ್ತು. ವಿ. ಎನ್. ರಾಯರು ಅರಮನೆಯ ಪಿ ಯಾ ನೋ ವಾ ದ್ಯ ಗಾ ರ ರಾ ದ ನರಸಿಂಗರಾಯರ ಬಳಿ ಪಾಶ್ಚಾತ್ಯ ಸಂಗೀತ ಕಲಿಯಬೇಕೆಂದು ಮಹಾರಾಜರು ವಿಧಿಸಿದರು. ವಿ. ಎನ್. ರಾಯರು ಪಿಯಾನೋ ವಾದ್ಯವಾದನದಲ್ಲಿ ಪ್ರಾವೀಣ್ಯ ಪಡೆದುದಲ್ಲದೆ ತಾ, ಸ್ಮಿತ್ ಅವರಲ್ಲಿ ಹಾರ್ಪ್ವಾದ್ಯವನ್ನು ಅಭ್ಯಾಸಮಾಡಿ ಪಾಶ್ಚಾತ್ಯ ಸಂಗೀತದ ಉಚ್ಚ ಪರೀಕ್ಷೆಗಳಿಗೆ ಕುಳಿತು ತೇರ್ಗಡೆ ಹೊಂದಿದರು. ಅದೇ ವರ್ಷ ದಕ್ಷಿಣ ಹಿಂದೂಸ್ಥಾನ, ಆಂಧ್ರ ಪ್ರವಾಸ ಕೈಗೊಂಡು ಮೈಸೂರಿನ ಸಂಗೀತ ಖ್ಯಾತಿಯನ್ನು ವಿಸ್ತರಿಸಿದರು. ೧೯೩೮ ರಲ್ಲಿ ವಿ. ಎನ್. ರಾಯರು ಮದರಾಸಿನ ಮೂಸಿಕ್ ಅಕೆಡಮಿಯಲ್ಲಿ ಭಾರತೀಯ ಸಂಗೀತವನ್ನು ಪಾಶ್ಚಾತ್ಯ ಪದ್ಧತಿಯ ಪ್ರಸಾರ ಕ್ರಮದಲ್ಲಿ ಬರೆದಿಡುವುದರ ಬಗ್ಗೆ ಪ್ರದರ್ಶನವಿತ್ತರು. ಮದರಾಸಿನ ವಿದ್ವಾಂಸರು ರಾಯರ ವಾದಕ್ಕೆ ಒಪ್ಪಿಗೆಯನ್ನು ಕೊಡದಿದ್ದರೂ ಅವರ ವಿದ್ವತ್ ಪ್ರೌಢಿಮೆಯನ್ನು ಕಂಡು ಮೆಚ್ಚಿಗೆ ವ್ಯಕ್ತಗೊಳಿಸಿದರು.

  • ಭಾರತದ ಲಲಿತಕಲೆಗಳಿಗೆ ಬಂದಿರುವ ದುರವಸ್ಥೆ ಯಾರಿಗೂ ಕೀರ್ತಿತರುವಂತಿಲ್ಲ. ಎಲ್ಲೆಡೆಯಲ್ಲಿಯೂ ಲಲಿತಕಲೆಗಳ ಪುನರುದ್ಧಾರ ಮಾಡಲು ಹೊರಟಿರುವವರಿಗೇ ಲಲಿತಕಲೆಗಳ ಋಜುಸ್ವರೂಪ ಗೊತ್ತಿಲ್ಲ, ಅವುಗಳ ನೈಜಸ್ವರೂಪ ಬಲ್ಲ ವಿ. ಎನ್. ರಾಯರಂಥ ವಿದ್ವಾಂಸರ ನೆರವು ಪಡೆಯುವುದಕ್ಕೆ ದುರಭಿಮಾನದ ಅಡ್ಡಿ ಆತಂಕ.

ಜನಪದದಲ್ಲಿ ರೂಢಮೂಲವಾಗಿದ್ದ ಉತ್ತಮ ಕಲಾಭಿರುಚಿ ಇಂದು