ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮುನ್ನುಡಿ ಇಂದು ಕಲೆಗಳ ಉದ್ದಾರ, ಕಲಾಕೃತಿಗಳ ರಕ್ಷಣೆ, ಕಲಾವಿದರ ಪೋಷಣೆ ಯಾರು ಮಾಡಬೇಕು ? ಎನ್ನುವ ಬೃಹತ್ ಪ್ರಶ್ನೆ ನಮ್ಮ ಮುಂದೆ ಇದೆ. ಕಾವ್ಯ ಬರೆದು ಅಕ್ಷರಕ್ಕೆ ಲಕ್ಷ ಸಂಪಾದಿಸುತ್ತಿದ್ದ ಕವಿಗಳ ಕಾಲ, ಒಂದು ಚಿತ್ರವನ್ನು ಬರೆದೋ, ಶಿಲ್ಪವನ್ನು ಮಾಡಿಯೋ ಜಹಾಗೀರಿ ಸಂಪಾದಿಸುತ್ತಿದ್ದ ಕಾಲ ಮುಗಿದುಹೋಯಿತು. ತಮ್ಮ ಸಂಸಾರ ಹೇಗೆ ಸಾಗಿಸಬೇಕೆಂಬ ಸಮಸ್ಯೆ ಇಂದು ರಾಜ ಮಹಾರಾಜರನ್ನೂ ಕಾಡತೊಡಗಿದೆ. ಒಂದು ಕಾಲದಲ್ಲಿ ರಾಜ ಮಹಾರಾಜರು, ಶ್ರೀಮಂತರು ನಿರ್ವಹಿಸುತ್ತಿದ್ದ ಕಾರ್ಯಭಾಗವನ್ನು ಹೆಚ್ಚು ಪ್ರಾತಿನಿಧಿಕವಾಗಿ ಇಂದು ರಾಷ್ಟ್ರ, ರಾಷ್ಟಸರ್ಕಾರ, ರಾಷ್ಟ್ರದ ಮುಂದಾಳುಗಳು ನಿರ್ವಹಿಸಬೇಕಾಗಿದೆ. ಅಧಿಕಾರಸೂತ್ರಗಳನ್ನು ವಹಿಸಿಕೊಂಡಿರುವ ರಾಷ್ಟ್ರ ನಾಯಕರ ಮೇಲೆ ಅದು ಹೆಚ್ಚಿನ ಉತ್ತರವಾದಿತನವನ್ನು ಹೊರಿಸಿದೆ ಯೆಂಬುದನ್ನವರು ಮರೆಯಬಾರದು. ಈ ವಿಷಯದಲ್ಲಿ ರಾಷ್ಟ್ರನಾಯಕರು ತಳೆದಿರುವ ಧೋರಣೆ, ವ್ಯಕ್ತ ಪಡಿಸುವ ಮನೋಭಾವ ಎರಡೂ ರಾಷ್ಟ್ರದ ಕಲಾಪ್ರಗತಿಗೆ ಪರಿಪೋಷಕವಾಗಿದೆ ಯೆಂದು ಹೇಳಲು ಸಾಧ್ಯವಿಲ್ಲ. ಭಾರತದ ಲಲಿತಕಲೆಗಳ ಪುನರುದ್ಧಾರಕ್ಕೆ ಕೇಂದ್ರ ಸರ್ಕಾರ ಮನಃಪೂರ್ವಕವಾಗಿ ಪ್ರಯತ್ನಿಸುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಅವರಿಗೆ ಸಹಕಾರ ನೀಡಬೇಕಾದುದು ಪ್ರಾಂತ್ಯ ಸರ್ಕಾರಗಳ ಕರ್ತವ್ಯವಲ್ಲವೇ ? ಅಖಿಲಭಾರತದ ಕಲಾಪ್ರವೀಣರ ಜತೆಯಲ್ಲಿ ಕುಳಿತು ವಿಚಾರ ವಿನಿಮಯಮಾಡಬಲ್ಲ ಸಾಮರ್ಥ್ಯವುಳ್ಳ ಕನ್ನಡಿಗರೇ ಇಲ್ಲವೇ ? ಮೈಸೂರಿನಲ್ಲಿ ಯಾರು ಸಂಗೀತದಲ್ಲಿ, ನಾಟಕದಲ್ಲಿ, ನೃತ್ಯದಲ್ಲಿ, ಚಿತ್ರಕಲೆಯಲ್ಲಿ, ಕಲಾ ವಿಮರ್ಶೆಯಲ್ಲಿ ಪ್ರಾವೀಣ್ಯ ದೊರಕಿಸಿಕೊಂಡಿದ್ದಾರೆ - ಯಾರು ಅವುಗಳ ಬಗ್ಗೆ ಅಧಿಕಾರವಾಣಿಯಿಂದ ಮಾತನಾಡಬಲ್ಲರು - ಯಾರು ಮೈಸೂರನ್ನು ಪ್ರತಿನಿಧಿಸಿದರೆ ನಾಡಿಗೆ ಕೀರ್ತಿ ಬರುವುದು ಎನ್ನುವ ಅಂಶ ಮೈಸೂರು ಸರ್ಕಾರಕ್ಕೆ ಗೊತ್ತಿದೆಯೇ ? ಸೇವೆಗೆ ಅವಕಾಶವೇ ಇಲ್ಲದೆ ನಾಡಿನ ಚೈತನ್ಯ ಇಂದು ಹಾಳಾಗಬೇಕೇ ? ಪ್ರತಿಯೊಂದಕ್ಕೂ 'ಕೋಮುವಾರು ನೀತಿ'ಯೇ ಕಸೋಟಿಗಲ್ಲಾಗಬೇಕೇ ? ಇದು ನಾಡನ್ನು ಕಟ್ಟುವ ಲಕ್ಷಣವೇ? – ನಮ್ಮ ಸ್ವಾತಂತ್ರ್ಯವನ್ನು ಸ್ಥಿರಪಡಿಸುವ ಹದನೇ ? - ಜನತೆಯಲ್ಲಿ ಕೆಚ್ಚನ್ನು, ಆತ್ಮಾಭಿಮಾನವನ್ನು ಹುಟ್ಟಿಸುವ ಸಾಧನವೇ ? ಅಧಿಕಾರಸ್ಥಾನಕ್ಕೆ