ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೧೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸ್ವರಮೂರ್ತಿ ವಿ. ಎನ್. ರಾವ್ ಅಧೋಗತಿಗಿಳಿಯುವುದಕ್ಕೆ ವ್ಯಾಪಾರವನ್ನೇ ಪ್ರಧಾನವಾಗಿಟ್ಟುಕೊಂಡಿರುವ ಸಿನಿಮಾ ಸಂಗೀತ ಕಾರಣವಾಗಿದೆ. ದಕ್ಷಿಣದ ವಿದ್ವಾಂಸರು ಪರಂಪರೆಗೆ ತಿಲೋದಕ ಬಿಟ್ಟು ಜನತೆಯನ್ನು ಮೆಚ್ಚಿಸಲು ( ಅಡಾವುಡಿ' ಸಂಗೀತಕ್ಕೆ ಮನಸೋತುದೂ ಒಂದು ಕಾರಣ. ಕರ್ನಾಟಕ ಸಂಗೀತವೆಂದರೆ ಸ್ವರ, ತಾಳಗಳ ಹೋರಾಟವೆಂಬ 'ತಪ್ಪು ಅಭಿಪ್ರಾಯ ಬೆಳೆಯಲು ದಾಕ್ಷಿಣಾತ್ಯ ವಿದ್ವಾಂಸರ ಸಂಗೀತ ಇಂಬುಗೊಟ್ಟಿತು. ದಿವಂಗತ ಸದಾಶಿವರಾಯರ ಶಿಷ್ಯ ಪರಂಪರೆಗೆ ಸೇರಿದ ಶೇಷಣ್ಣನವರು, ಸುಬ್ಬಣ್ಣನವರು-ಅವರ ಶಿಷ್ಯರಾದ ವಿ. ಎನ್. ರಾಯರು ಇವರು ಸಂಗೀತ ಕೇಳಿರುವವರಿಗೆ ಕರ್ನಾಟಕ ಸಂಗೀತದ ಸತ್ಯ ಸ್ವರೂಪದ ಅರಿವಾಗುತ್ತದೆ. ಈ ಸಂಪ್ರದಾಯದವರು ಉತ್ತರದ ಸಂಗೀತಸಾಮಾದ್ ಅಲ್ಲಾದಿಯಾಖಾನ್ ಸಾಹೇಬರ ಘರಾಣೆಯವರಂತ ವಿಳಂಬಕಾಲಕ್ಕೆ ಹೆಚ್ಚು ಪ್ರಾಧಾನ್ಯ ಕೊಡುತ್ತಾರೆ. ರಾಗ ಹೂವಿನಂತೆ ಅರಳುತ್ತ ಹೋಗಬೇಕು. ಸ್ವರಸಂಧಾನ ಕೂಡ ಪರಸ್ಪರ ಅನುವರ್ತಿಯಾಗಿ ಕಿವಿಗೆ ಇಂಪಾಗಿರಬೇಕು. ರಾಗದ ತೂಕ ತಡೆಯುವಷ್ಟೇ ಸ್ವರಪ್ರಸಾರ ಹಾಕಬೇಕು. ಸಂಗೀತದಲ್ಲಿ ರಾಗದಷ್ಟೇ ತಾಳಕ್ಕೂ ಪ್ರಾಧಾನ್ಯವಿದ್ದರೂ, ತಾಳ ಲಾಗಾನುವರ್ತಿಯಾಗಿರಬೇಕು. ರಾಗ ತಾಳಗಳೆರಡೂ ಭಾವಕ್ಕೆ ೩೯ ಧೀನವಾಗಿರಬೇಕು. ಭಾವರಹಿತವಾದ ಸ್ವರಪ್ರಸಾರ, ತಾಳ ವಿನ್ಯಾಸ ಗಳೆರಡೂ ಕುರುಡ ಕಿನ್ನರಿ ಬಾರಿಸಿದಂತೆ ! ಕರ್ನಾಟಕ ಸಂಗೀತದ ಉ = ಮೋತ ನ ಲಕ್ಷಣಗಳನ್ನು ವಿ. ಎನ್. ರಾಯರ ಸಂಗೀತದಲ್ಲಿ ಕಾಣಬಹುದು. ಮಧುರವೂ ಗಂಭೀರವೂ ಆದ ಅವರ ಕಂಠಶ್ರೀಯಿಂದುಕ್ಕುವ ನಾದತರಂಗ ಶಾಂತ ಸಾಗರದ ಅಲೆಗಳಂತೆ ಗಂಭೀರವೂ ಸುಂದರವೂ ಆಗಿರುತ್ತದೆ. ಕಲಾವಿದ ಕೂದಲೆಳೆಯಷ್ಟು ಅಲುಗಾಡದ ಶ್ರುತಿಯಲ್ಲಿ ವಿಲೀನವಾಗಿ ನಾದದ ಹೊನಲನ್ನು ಉಕ್ಕಂದವಾಗಿ ಶ್ರಾವಕರ ಹೃದಯದಲ್ಲಿ ದಸುತ್ತಾನೆ. ಪ್ರತಿಯೊಂದು ಸ್ವರವೊ ಜೀವ ತುಂಬಿ ಹೊರಬೀಳುತ್ತದೆ. ರಾಯರ ಸಂಗೀತ ಮರೆಯಲಾಗದ ನೆನಪನ್ನು ದಿವ್ಯಾನುಭವವನ್ನು ಶ್ರಾವಕರ ಮನದಲ್ಲಿ ಅಷ್ಟೊತ್ತುತ್ತದೆ.

  • ಕರ್ನಾಟಕ ಸಂಗೀತವನ್ನು ಮೈಸೂರು ವಿಶಿಷ್ಟ ರೀತಿಯಲ್ಲಿ ಬೆಳೆಸಿ ಉಳಿಸಿಕೊಂಡಿದೆಯೆಂದು ವಿ. ಎನ್. ರಾಯರು ದೃಢವಾಗಿ ನಂಬುತ್ತಾರೆ,