ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೧೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ನಾಟಕದ ಕಲಾವಿದರು ಇಂದು ಬೇರೆ ಬೇರೆ ಭಾವ, ಪ್ರಭಾವಗಳಿಗೆ ಸಿಕ್ಕಿ, ರುಚಿ, ಅಭಿರುಚಿಗಳಿಗೆ ಮರುಳಾಗಿ ಜನತೆ ಈ ದಿವ್ಯ ಕಲೆಯನ್ನು ಹೋಗಗೊಡುತ್ತಿರುವುದನ್ನು ಕಂಡು ಮಮ್ಮಲ ಮರುಗುತ್ತಾರೆ. ಮೈಸೂರು ಸಂಗೀತಗಾರರು, ಸಂಗೀತಾಭಿ ಮಾನಿಗಳು ಒಂದುಗೂಡಿ ' ಸಂಗೀತಪರಿಷತ್ತು ' ಒಂದನ್ನು ಸ್ಥಾಪಿಸಿ ಅದರ ಸಹಾಯದಿಂದ ಮೈಸೂರು ಸಂಗೀತದ ವೈಶಿಷ್ಟ್ಯವನ್ನುಳಿಸಿಕೊಳ್ಳಬೇಕೆಂದು ಏ. ಎನ್. ರಾಯರು ಅಭಿಪ್ರಾಯಪಡುತ್ತಾರೆ. - ಭಾರತೀಯ ಲಲಿತಕಲೆಗಳ ಪ್ರಾದುರ್ಭಾವಕ್ಕೆ ಕರ್ನಾಟಕ (ಮೈಸೂರು) ನೀಡಿರುವ ಕಾಣಿಕೆ ಅಲ್ಪವಾದುದಲ್ಲ. ಪರಂಪರಾಗತವಾದ ಭಾರತೀಯ ಸಂಗೀತ, ಶಿಲ್ಪ, ವಾಸ್ತುಶಿಲ್ಪ, ನೃತ್ಯ, ನಾಟಕ, ಚಿತ್ರಕಲೆಗಳೆಲ್ಲದರ ಮೇಲೂ ಕರ್ನಾಟಕ ತನ್ನ ಮುದ್ರೆಯನ್ನೊತ್ತಿದೆ. ಸಾವಿರಾರು ವರ್ಷಗಳಿಂದ ಹಿರಿಯರು ಬೆಳಸಿ ನಮ್ಮ ಕೈಯ್ಯಲ್ಲಿಟ್ಟಿರುವ ಈ ಭಾಗ್ಯ ಭಂಡಾರವನ್ನು ಕಳೆದುಕೊಳ್ಳುವುದು ವಿವೇಕದ ಲಕ್ಷಣವಲ್ಲ. ಹಿರಿಯ ಪರಂಪರೆಯನ್ನು ಉಳಿಸಿಕೊಳ್ಳಬೇಕು, ಜತೆಗೆ ನಮ್ಮ ನಮ್ಮ ಪ್ರತಿಭಾಶಕ್ತಿಯಿಂದ ಅದರ ವ್ಯಾಪ್ತಿಯನ್ನು ವಿಸ್ತರಿಸಬೇಕು. ಈ ಕೆಲಸ ನಿರ್ವಹಿಸುವುದಕ್ಕೆ ವಿ. ರ್ಎ, ರಾಯ ರಂಥ ಕಲಾವಿದರು ಇರುವುದು ನಮ್ಮ ಭಾಗ್ಯ. ಇವರ ಸದುಪಯೋಗ ಮಾಡಿಕೊಳ್ಳಬೇಕಾದುದು ನಾಡಿನ ಕರ್ತವ್ಯ-ನಾಡನಾಯಕರ ಧರ್ಮ.