ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೧೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೦೨ ಕರ್ನಾಟಕದ ಕಲಾವಿದರು ಚೆನ್ನಮ್ಮನವರ ಸಿದ್ಧಿಗೆ ಕಾರಣವಾಗಿರುವ ಅವರ ಅನ್ಯಾದೃಶ ಶ್ರದ್ದೆಯನ್ನು ನಾವು ಮನಸಾರೆ ಮೆಚ್ಚಿಕೊಳ್ಳಬೇಕು. ಚೆನ್ನಮ್ಮನವರ ತಾಯಿ ಶ್ರೀಮತಿ ರಾಜ ಮ್ಮ ನ ನ ರು ಮತ್ತು ಸೋದರಮಾವ ಶ್ರೀ ಚೆನ್ನಬಸಪ್ಪನವರು ಇಬ್ಬರೂ ಸಂಗೀತ ವಿದ್ಯಾಪಾರಂಗತರು. ಚೆನ್ನಬಸಪ್ಪನವರು ದಕ್ಷಿಣ ಹಿ೦ ದೂ ಸ್ಥಾ ನ ದ ಲ್ಲೇ ಲ್ಲಾ ಪ್ರವಾಸಮಾಡಿ ಅನೇಕ ಸಾರಿ ತೋ ಷ ಕ ಪ್ರಶಸ್ತಿಗಳನ್ನು ದೊರಕಿಸಿಕೊಂಡಿದ್ದರು. ತಂಜಾವೂರು ಆಸ್ಥಾನದಿಂದಲೂ ಅವರಿಗೆ ಬದುಮಾನ ದೊರೆತಿತ್ತು. ರಾಜಮ್ಮನವರಿಗೆ ಶಾಸ್ತ್ರೀಯ ಸಂಗೀತದಲ್ಲಿ ವಿಶೇಷ ಪರಿಶ್ರಮವಿರುವುದಲ್ಲದೆ ಜಾನಪದ ಸಂಗೀತವಾದ ಮನೆಬಳಕೆಯ ಸಾಂಪ್ರದಾಯಿಕ ಹಾಡುಗಳಲ್ಲಿಯೂ ಪರಿಶ್ರಮಪಡೆದಿದ್ದಾರೆ. ಚೆನ್ನಮ್ಮನವರಿಗೆ ತಾಯಿ, ಸೋದರಮಾವಂದಿರೆ ಪ್ರಥಮ ಗುರುಗಳು. ಮಾತೃದತ್ತವಾದ ವಿದ್ಯೆಯನ್ನು ರೂಢಿಸಿಕೊಂಡು ತುಮಕೂರಿನಲ್ಲಿ ಅನೇಕರಿಗೆ ಸಂಗೀತಪಾಠ ಹೇಳಿಕೊಡುತ್ತಿದ್ದರು. ೧೯೩೨ ನೆಯ ಇಸವಿ ಜೂನ್ ತಿಂಗಳಲ್ಲಿ ತುಮಕೂರಿನಲ್ಲಿ ವ್ಯವಸ್ಥಿತವಾಗಿದ್ದ 'ಸ್ವದೇಶೀಪ್ರದರ್ಶನ' ದಲ್ಲಿ ಚೆನ್ನಮ್ಮನವರ ಮೊದಲನೆಯ ಸಾರ್ವಜನಿಕ ಕಛೇರಿ ನಡೆಯಿತು. ಅವರ ಹಾಡುಗಾರಿಕೆ ಶ್ರಾವಕರ ಮೇಲೆ ಪರಿಣಾಮವನ್ನುಂಟು ಮಾಡಿತು. ಅದೇ ವರ್ಷ ಜುಲೈ ತಿಂಗಳಲ್ಲಿ ಬೆಂಗಳೂರಿನ ಕಲಾಮಂದಿರ' ಸಂಸ್ಥೆಯವರು ಏರ್ಪಡಿಸಿದ್ದ (ಕಲಾಪ್ರದರ್ಶನ ಮತ್ತು ವಿವಿಧ ವಿನೋದಾವಳಿ' ಸಮಾ ರ೦ ಭ ಗ ಳಲ್ಲಿ ಚೆನ್ನಮ್ಮನವರು ಭಾಗವಹಿಸಿ ಬೆಂಗಳೂರಿನ ಸಂಗೀತಪ್ರಿಯರ ಗೌರವಕ್ಕೆ ಪಾತ್ರರಾದರು. ಸಂಗೀತವಿದ್ಯೆ ಬೆಳಸಿಕೊಳ್ಳಲು, ಬೆಂಗಳೂರಿನಂಥ ಸಾ೦ ಸ್ಯ ತಿ ಕ ಕೇಂದ್ರದಲ್ಲಿ ನೆಲಸುವುದು, ಚೆ ' ಮ್ಮ ನ ವ ರಿಗೆ ಅವಶ್ಯಕವಾಗಿತ್ತು, ಯಾವದಾದರೂ ಸರ್ಕಾರಿಶಾಲೆಯಲ್ಲಿ ಶಿಕ್ಷಕಿಯಾಗಿ ನಿಂತು ಪ್ರೌಢ ಶಿಕ್ಷಣ ದೊರಕಿಸಿ ಕೊಳ್ಳ ಲು ನಿರ್ಧರಿಸಿದರು. ಚೆನ್ನಮ್ಮನವರ ಉತ್ಸಾಹ, ಕಲಾಭಿಮಾನವನ್ನು ಕಂಡು ಪ್ರಧಾನ ವಿದ್ಯಾಧಿಕಾರಿಗಳಾದ ಶ್ರೀ ಎನ್. ಎಸ್. ಸುಬ್ಬರಾಯರು ಅವರಿಗೆ ವಿದ್ಯಾರ್ಥಿವೇತನ ಕೊಟ್ಟು ಪ್ರೌಢ ಶಿಕ್ಷಣ ಪಡೆಯಲು ಸಹಾಯಕರಾದರು.