ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೧೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಗೀತವಿದುಷಿ ಜೆ ಚೆನ್ನಮ್ಮ ೧೦೩ ಲಂಭಿಸಿದ್ದರು...ರಂಭಿಸಿದರು. ಶ್ರೀನಿವಾಸವಾಗಿದೆ. ಮದರಾಸಿನ ಪ್ರಸಿದ್ದ ಸಂಗೀತ ಮ ನ ತ ನ ಕ್ಕೆ ಸೇರಿದವರೂ, ಪ್ರತಿಭಾಶಾಲಿ ವಿದ್ವಾಂಸರೂ ಆದ ಶ್ರೀ ವೀಣಾ ಕೃಷ್ಣಮಾಚಾರ್ಯರು ಅದೇ ಕಾಲಕ್ಕೆ ಬೆಂಗಳೂರಿಗೆ ಬಂದು ಬಸವನಗುಡಿಯಲ್ಲಿ ಆತ್ಯಗಾನ ವಿದ್ಯಾಲಯ' ವನ್ನು ಆರಂಭಿಸಿದ್ದರು. ಅವರಲ್ಲಿ ೧೯೩೩ ರಿಂದ ಚೆನ್ನಮ್ಮನವರು ಉಚ್ಚ ಸಂಗೀತ ಶಿಕ್ಷಣ ಪಡೆಯಲಾರಂಭಿಸಿದರು. ಕೃಷ್ಣಮಾಚಾರ್ಯರು ಅವರ ಸೋದರರಾದ ಟೈಗರ್ ವರದಾಚಾರ್ಯರು, ಕೆ.ವಿ. ಶ್ರೀನಿವಾಸಯ್ಯಂಗಾರರು* ಕರ್ನಾಟಕ ಸಂಗೀತ ಕ್ಕೆ ಮಾಡಿರುವ ಸೇವೆ ಚಿರಸ್ಮರಣೀಯವಾಗಿದೆ. ಕೃಷ್ಣಮಾಚಾರ್ಯರು ಅವರ ಸೋದರರು, ಒಂದೇ ಬುಡಕಟ್ಟಿಗೆ ಸೇರಿದವ ರಾದರೂ ಅವರವರ ಕಲಾದೃಷ್ಟಿ ತೀರ ಭಿನ್ನವಾದುದು. ಕೃಷ್ಣಮಾಚಾರ್ಯರು ಸ್ವಯಂ ವೈಣಿಕರಾಗಿದ್ದುದೂ ಹಿಂದೂಸ್ಥಾನಿ ಪದ್ದತಿಯ ಸಂಗೀತಾಭಿಮಾನಿ ಗಳಾಗಿದ್ದು ದೂ, ಅ ವ ರ ಸಂ ಗೀ ತ ಕ್ಕೆ ಹೆಚ್ಚಿನ ಮಾರ್ದವತೆಯನ್ನೂ, ಸೌಕುಮಾರ್ಯವನ್ನು ತಂದುಕೊಟ್ಟವು. ತಾವು ರಚಿಸಿದ್ದ ನೂರಾರು ಕೃತಿಗಳನ್ನು ಸ್ವರಪ್ರಸಾರದೊಂದಿಗೆ ಪ್ರಕಟನೆಗೆ ಕೃಷ್ಣಮಾಚಾರ್ಯರು ಸಿದ್ದಗೊಳಿಸುತ್ತಿದ್ದರು. ಆದರದು ಮುಗಿಯುವಷ್ಟರಲ್ಲಿ ಮೃತ್ಯುವಶರಾದರು. ಅವರ ಕೃತಿ ಅರ್ಧದಲ್ಲಿ ನಿಂತುಹೋಯಿತು. ಇಂಥ ಸದ್ಗುರುಗಳ ಪ್ರತಿಭೆಯ ಪೂರ್ಣ ಪ್ರಯೋಜನ ಚೆನ್ನಮ್ಮನವರಿಗೆ ಸಿಕ್ಕಿತು. ಕೃಷ್ಣಮಾಚಾರ್ಯರಲ್ಲಿ ಹತ್ತು ವರ್ಷ ಕಾಲ ಸತತ ಅಭ್ಯಾಸ ನಡೆಸಿ ಅವರ ಆತ್ಯಗಾನ ವಿದ್ಯಾಲಯ' ದ ಸಹೋಪಾಧ್ಯಾಯಿನಿಯರಾಗಿದ್ದರು. ಚೆನ್ನಮ್ಮನವರ ಹಾಡುಗಾರಿಕೆಯಲ್ಲಿ ಅದರಲ್ಲಿಯೂ ಪದ, ಜಾವಡಿಗಳಲ್ಲಿ ಕೃಷ್ಣಮಾಚಾರ್ಯರ ಪದ್ದತಿ, ಪಾಂಡಿತ್ಯದ ಪಡಿಯಚ್ಚು ಕಂಡು ಬರುತ್ತದೆ. * ೧೯೩೨ ರಲ್ಲಿ ಚೆನ್ನಮ್ಮನವರು ಅ ಣ್ಣಾ ಮಲೆ ವಿಶ್ವವಿದ್ಯಾನಿಲಯದ 'ಸಂಗೀತಭೂಷಣ' ಪ್ರಶಸ್ತಿ ದೊರಕಿಸಿಕೊಳ್ಳಲು ಚಿದಂಬರಕ್ಕೆ ತೆರಳಿದರು. ಈ ಮೊದಲೇ ಅವರು ಮದರಾಸು ಕಾರ್ಪೊರೇಷನ್ನಿನ ರೇಡಿಯೋ ಆಶ್ರಯದಲ್ಲಿ ಸಂಗೀತ ಕಛೇರಿಗಳನ್ನು ನಡೆಸಿದ್ದುದರಿಂದ ಅಣ್ಣಾಮಲೆ ವಿಶ್ವವಿದ್ಯಾನಿಲಯದ ಉಪಸ್ಥಾನಪತಿಗಳಾದ ರೈಟ್ ಆನರಬಲ್ ವಿ. ಶ್ರೀನಿವಾಸಶಾಸ್ತ್ರಿಗಳವರು

  • ತ್ಯಾಗರಾಜ ಹೃದಯ, ಗಾನಭಾಸ್ಕರ, ಸಂಗೀತ ಸುಧಾಂಬುಧಿ ಇತ್ಯಾದಿ ಗ್ರಂಥಕರ್ತರು

...