ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೧೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

Nov ಕರ್ನಾಟಕದ ಕಲಾವಿದರು ಅವರಿಗೆ ವಿಶ್ವವಿದ್ಯಾನಿಲಯದಲ್ಲಿ ಪ್ರವೇಶ ಕೊಡಲು ನಿರಾಕರಿಸಿದರು. ನಿರಾಶೆಯ ಬೆಟ್ಟವೇ ಕಳಚಿ ಚೆನ್ನಮ್ಮನವರ ಮೇಲೆ ಬಿದ್ದಂತಾಯಿತು. ಅದೇ ವಿಶ್ವ ವಿದ್ಯಾನಿಲಯದ ಸಂಗೀತ ವಿದ್ವಾಂಸರಾಗಿದ್ದ ಪೊನ್ನಯ್ಯ ಒಳ್ಳೆಯವರು, ತಾವು ಶಿಕ್ಷಣ ಕೊಡಲು ಮುಂದೆ ಬಂದು ಚೆನ್ನಮ್ಮನವರ ಮನದ ದುಗುಡವನ್ನು ಪರಿ ಹರಿಸಿದರು. ದೀಕ್ಷಿತರ ಶಿಷ್ಯ ಪರಂಪರೆಗೆ ಸೇರಿದ ಪೊನ್ನಯ್ಯ ಸಿಳ್ಳೆಯವರ ಎರಡು ವರ್ಷಗಳ ಶಿಕ್ಷಣ ಚೆನ್ನಮ್ಮನವರಿಗೆ ದೀಕ್ಷಿತರ ಅನೇಕ ಕೀರ್ತನೆಗಳು, ಪೊನ್ನಯ್ಯ ಪಿಳ್ಳೆಯವರ ಮನೆತನದ ಕೀರ್ತನೆಗಳ ಪರಿಚಯ ಮಾಡಿಕೊಟ್ಟಿತು. ಒಳ್ಳೆಯವರ ಮನೆತನದ ಕೀ ರ್ತ ನೆ ಗ ಳಾ ದ (ಅಂಬಾ ನೀಲಾಂಬರಿ' “ಬ್ಬ ಹದಂಖ ಕದಂಬ' ಎಂಬ ನೀಲಾಂಬರಿ ಶಂಕರಾಭರಣ ರಾಗಗಳ ಕೀರ್ತನ ಗಳನ್ನೂ, ಒಳ್ಳೆಯವರು ರ ಚಿ ಸಿ ದ (ಜಗದೀಶ ಉನಕ್ ಎನ್ ಮೋದಿಲ್ ಅಲ್ಲಿಯೋ !' ಎಂಬ ಕೀರ್ತನೆಯನ್ನೂ ಅವರೇ ಚೆನ್ನಮ್ಮನವರಿಂದ ಅನೇಕ ಸಾರಿ ಹಾಡಿಸಿ ಕೇಳಿ ಸಂತೋಷಿಸುತ್ತಿದ್ದರು. - ಕೃಷ್ಣಮಾಚಾರ್ಯರ ಅಮರಕೃತಿಗಳಾದ ಕರಹರಪ್ರಿಯ ರಾಗದ “ಏ ಪಾಪಮುನು ಚೇತಿನಂದುಕ್ಕೆ' ಎಂಬ ಕೃತಿಯನ್ನೂ, ನಟಭೈರವಿ ರಾಗದ 'ಯವರು ನಾ ಪಾಲಿಟಕಿ' ಎಂಬ ಕೀರ್ತನೆಯನ್ನೂ ದಿವಂಗತ ತಾಯಪ್ಪ ನವರೂ ದಿವಂಗತ ನಾಟ್ಯ ಪ್ರವೀಣೆ ವರಲಕ್ಷ್ಮಿ (ವರಾಲು)ಯವರೂ ಪದೇಪದೇ ಚೆನ್ನಮ್ಮನವರಿಂದ ಹಾಡಿಸಿ ಕೇಳಿ ಸಂ ತೋ ಷ ಪ ಡು ತ್ತಿ ದ್ಧ ರು. ಕೃಷ್ಣಮಾಚಾರ್ಯರಿಂದ ಕಲಿತಿರುವ ಪದ, ಜಾವಡಿಗಳಿಂದಲೆ ಕಛೇರಿ ಮಾಡುವಷ್ಟು ಚೆನ್ನಮ್ಮನವರು ಸಮರ್ಥರಾಗಿದ್ದಾರೆ. ಮದರಾಸ್ ಸರ್ಕಾರ ನಡೆಸುವ ಪ್ರೌಢ ಸಂಗೀತ ಪರೀಕ್ಷೆಗಳಲ್ಲಿ ಉತ್ತಮ ಶ್ರೇಣಿಯಲ್ಲಿಯೂ, ಮೈಸೂರಿನ ಸಂಗೀತ ವಿದ್ವತ್ಸರೀಕ್ಷೆಯಲ್ಲಿಯೂ ಚೆನ್ನಮ್ಮ ನವರು ಉತ್ತೀರ್ಣರಾಗಿದ್ದಾರೆ. ಮದಾಸು, ಚಿದಂಬರ, ಹೈದರಾಬಾದು; ಮಂಗಳೂರು, ಮೈಸೂರು, ಬೆಂಗಳೂರುಗಳಲ್ಲಿ ಅನೇಕ ಸಂಗೀತಕಛೇರಿಗಳನ್ನು ನಡೆಸಿ ಮಾನಪತ್ರಗಳನ್ನೂ ವಿದ್ವಜ್ಜನರ ಗೌರವವನ್ನೂ ದೊರಕಿಸಿಕೊಂಡಿದ್ದಾರೆ, ಚೆನ್ನಮ್ಮನವರು ೧೯೪೧ರಲ್ಲಿ " ಗಾನ ಮ೦ ದಿ ರ” ವೆಂಬ ಸ್ವಂತ ಸಂಗೀತ ವಿದ್ಯಾಲಯವನ್ನು ಸ್ಥಾಪಿಸಿ ತಮ್ಮ ಹಿರಿಯ ಸೋದರಿಯ ಸಹಾಯದಿಂದ ಅದನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ.