ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೧೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೦೦ ಕರ್ನಾಟಕದ ಕಲಾವಿದರು ತೊಡಕೂ ಕಾರಣವಲ್ಲವೇ ? ಸಾಹಿತ್ಯ, ಲಲಿತಕಲೆಗಳು ನಾಲ್ಕು ಜನ ಕಲಿತವರ ಸೇವೆಮಾಡಿದರೆ ಸಾಲದು, ಇನ್ನು ಮೇಲೆ ಅದು ಜನತೆಯ ಸೇವೆಗೆ ನಿಲ್ಲಬೇಕು. ಸಹಸ್ರಾರು ಜನಗಳ ಬಾಳು ಸಂಗೀತದಿಂದ ಬೆಳಗಬೇಕಾಗಿದೆ. ಬೋರೇಗೌಡನ ಬಳಿಗೆ ಸಂಗೀತವನ್ನು ನಾವು ಒಯ್ಯಬೇಕಾದರೆ ಕನ್ನಡಭಾಷೆಯ ಕೀರ್ತನೆ, ಪದಗಳು, ಗೀತೆಗಳ ಶರಣು ಹೋಗಬೇಕಾದುದು ಅತ್ಯಗತ್ಯ. ಕರ್ನಾಟಕ ಸಂಗೀತದ ಕೇಂದ್ರಗಳಲ್ಲಿ ಒಂದಾದ ಮೈಸೂರು ಕರ್ನಾಟಕದಲ್ಲಿ ತಮಿಳು ನಾಡಿನ ಸಂಗೀತ ವಿದ್ವಾಂಸರ ಸರ್ವಾಧಿಕಾರ, ತೆಲುಗು ಭಾಷೆಯ ಕೀರ್ತನೆಗಳ ವ್ಯಾಪ್ತಿ ; ಔತ್ತರೇಯ ಸಂಗೀತದ ಕೇಂದ್ರಗಳಲ್ಲಿ ಒಂದಾದ ಉತ್ತರ ಕರ್ನಾಟಕದಲ್ಲಿ ಮಹಾರಾಷ್ಟ್ರ ಸಂಗೀತ ವಿದ್ವಾಂಸರ ಸರ್ವಾಧಿಕಾರ, ಮರಾಟಿ, ಹಿಂದೀ ಭಾಷೆಯ ಚೀಸುಗಳ ವ್ಯಾಪ್ತಿ - ಈ ಬಗೆಯ ಪ್ರಭಾವ ಕನ್ನಡನಾಡಿನ ಉತ್ಕರ್ಷಕ್ಕೆ ಸಾ ಧ ನ ವಾ ಗಿ ದೆ ಯೆಂದು ಯಾರು ಹೇಳಲು ಸಾಧ್ಯ? ದಿವ್ಯ ಪರಂಪರೆಯ ಬೆಂಬಲವುಳ್ಳ ಕರ್ನಾಟಕ ಅವರಿವರ ಹುಯ್ಯ ಹಾಲಿನಿಂದ ಬದುಕಿಕೊಂಡಿರಬೇಕೇ ? ಕನ್ನಡ ಸಂಗೀತದ ಬೆಳವಳಿಗೆಗೆ ಚೆನ್ನಮ್ಮನವರು ಮಾಡಿರುವ ದುಡಿಮೆ ಗಮನಾರ್ಹವಾದುದು. ಕನ್ನಡ ಕೀರ್ತನೆಗಳನ್ನೂ ದೇವರನಾಮಗಳನ್ನೂ ಭಾವಗೀತೆಗಳನ್ನೂ ಅವರು ಮನದುಂಬುವಂತೆ ಹಾಡಬಲ್ಲರು. ಇಂಥ ವಿದ್ವಾಂಸರು ಕನ್ನಡ ಸಂಗೀತದ ವಿಶಿಷ್ಟ ಪ್ರಭೆಯನ್ನು ಬೆಳಗಿಸುವುದರ ಕಡೆಗೆ ಹೆಚ್ಚು ಲಕ್ಷ ಕೊಡಬೇಕೆಂದು ನಾನು ಸೂಚಿಸಿದಿರಲಾರೆ. ಕನ್ನಡ ಸಂಗೀತ ಬೆಳವಳಿಗೆಗೆ ತೆಲುಗಿನದ್ವೇಷ ಇತುಶಕ್ತಿಯಾಗ ಬೇಕಾದ ಕಾರಣವಿಲ್ಲ. ಕಲೆ ನಿಜಕ್ಕೂ ಭಾಷ, ದೇಶ, ಜನಾಂಗಗಳ ಇತಿ ಮಿತಿಯನ್ನು ಮಾರಿದ್ದು, ಇಂದು ನಾವು ಬಾಕ್', ಏತೋವನ್, ಮೊಜಾರ್ ಇವರ ಕೃತಿಗಳನ್ನೂ ಪಾಲ್ ರೋಬ್ಬನ್, ಲಾರೆನ್ಸ್ ಟಿಬೆಟ್, ಮಾರ್ ಹಾಮ್ ಬರ್, ಸೊಕೋವಸ್ಕಿ, ಯಹೂದಿ ಮೆನ್ಯೂನ್ ಅವರ ಗಾಯನ ವಾದನಗಳನ್ನೂ ಕೇಳಿ ಸಂತೋಷಿಸುವಾಗ ತ್ಯಾಗರಾಜರು, ದೀಕ್ಷಿತರು, ಶಾಮಾಶಾಸ್ತ್ರಿಗಳೂ ನಮಗೆ ಬೇಡದವರಾಗುವುದಿಲ್ಲ. ಕನ್ನಡ ಸಂಗೀತ ಕನ್ನಡ ನಾಡಿಗಾಗಿ ಬೆಳೆಯಬೇಕು. ಕನ್ನಡ ಬೆಳೆದರೆ ಭಾರತ ಬೆಳೆಯುತ್ತದೆ; ಭಾರತ ಬೆಳೆದರೆ ವಿಶ್ವ ಬೆಳೆಯುತ್ತದೆ,