ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೧೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

fot ಸಂಗೀತವಿದುಪಿ ಜಿ, ಚೆನ್ನಮ್ಮ ಔತ್ತರೇಯ ಸಂಗೀತ ಪದ್ಧತಿಯ ಬಗ್ಗೆ ಚೆನ್ನಮ್ಮನವರು ತಳೆದಿರುವ ಧೋರಣೆ ನಮ್ಮ ಎಲ್ಲ ಸಂಗೀತ ವಿದ್ವಾಂಸರ ಗಮನಕ್ಕೆ ಬರಬೇಕಾದುದನಶ್ಯಕ. 'ಎರಡು ಪದ್ಧತಿಗಳೂ (ಕರ್ನಾಟಕ ಮತ್ತು ಹಿಂದೂಸ್ಥಾನಿ) ಓರ್ವ ತಾಯಿಯ ಮಕ್ಕಳು. ದೇಶ ಕಾಲಗಳಿಗನುಸರಿಸಿ ಅಲ್ಪ ಸ್ವಲ್ಪ ವ್ಯತ್ಯಾಸ ಕಂಡು ಬರುತ್ತಿದೆ. ಆದರೆ ಆತ್ಮ ಒಂದು ಸಾಧಿಸುವ ಕಾರ್ಯ ಒಂದು ಗುರಿಯೂ ಒಂದೇ. 'ಭಾವಜೀವಿಗಳಿಗೆ, ರಸಾನುಭವಿಗಳಿಗೆ, ನಾದಬ್ರಹ್ಮಪಾಸಕರಿಗೆ ಎರಡು ಪದ್ಧತಿಯಲ್ಲಿ ಆನಂದವೂ ಒಂದೆ. ಅದು ಅದ್ವಿತೀಯ ಬ್ರಹ್ಮ-ಅಖಂಡ ಆನಂದ ಸ್ವರೂಪ #? . ಐರೋಪ್ಯ ದೇಶಗಳಲ್ಲಿ ಸಂಗೀತಕ್ಕೆ ನಿತ್ಯಜೀವನದಲ್ಲಿರುವ ಸ್ಥಾನ ನಮ್ಮಲ್ಲಿಲ್ಲ. ಶಾಸ್ತ್ರೀಯ ಸಂಗೀತ (classical music) ಕೇಳುವವರೇ ಬೇರೆ, ಮನರಂಜಕ ಸಂಗೀತ (popular music) ಕೇಳುವವರೇ ಬೇರೆ. ಈ ಕೃತಕತೆ ಇಂಗ್ಲಿಷ್ ಶಿಕ್ಷಣ ಪ್ರಭಾವದಿಂದ ಈಚೆಗೆ ನಮ್ಮಲ್ಲಿ ಬೆಳೆದು ಬಂದಿದೆ. ಶಾಸ್ತ್ರೀಯ ಸಂಗೀತವನ್ನು ಹೇಗೆ ಜನಸಾಮಾನ್ಯರ ಬಳಿಗೊಯ್ಯ ಬೇಕು ಎನ್ನುವ ಮಹಾಸಮಸ್ಯೆ ನಮ್ಮ ಮುಂದಿದೆ. ಆ ಬಗ್ಗೆ ಚೆನ್ನಮ್ಮ ನವರು ಹೀಗೆ ಅಭಿಪ್ರಾಯಪಡುತ್ತಾರೆ. 'ಸಂಗೀತ ಇಂದು ನಾನಾ ರೂಪಗಳಲ್ಲಿ ಬೆಳೆಯುತ್ತಿದೆ. ಅಲ್ಪ ಸ್ವಲ್ಪ ಶಾಸ್ತ್ರೀಯ ಸಂಗೀತ ಕಲಿತವರಿಗೆ ತಕ್ಕ ಮಟ್ಟಿನ ಉತ್ತೇಜನ ದೊರೆಯುತ್ತಿದೆ. ಆದರೆ ಸಂಗೀತದಲ್ಲಿ ಪಾಂಡಿತ್ಯ ಪಡೆದಿರುವವರಿಗೆ ದೊರೆಯುತ್ತಿರುವ ಸಹಾಯ ಹಾಸ್ಯಾಸ್ಪದ. ಶ್ರೀಮಂತರು ಅವಕಾಶ ದೊರೆತಾಗ ದೂರದ ಹೆಸರಿಗೆ ಮರುಳಾಗಿ ಅಪಾರದ್ರವ್ಯವನ್ನು ಹೊರಗಿನವರಿಗೆ ಕೊಡುವಂತೆ ತಮ್ಮ ನಾಡಿನ ಕಲಾವಿದರಿಗೆ ಸಹಾಯ ನೀಡುವುದಿಲ್ಲ. ಸಂಗೀತ ವ್ಯಾಪಾರದ ಸಾಧನವಾಗಿ ಪರಿಣಮಿಸಿದೆ. ಜನಸಾಮಾನ್ಯರಲ್ಲಿ ನಿಜವಾದ ಸಂಗೀತದ ಅಭಿರುಚಿ ಸಾಕಷ್ಟು ಇಲ್ಲದಿರುವುದೇ ಇದರ ಕಾರಣ. ಇಂದಲ್ಲ ದಿದ್ದರೆ ಮುಂದಾದರೂ ತಾಯಂದಿರು ಈ ಕಡೆಗೆ ಲಕ್ಷ್ಯವೀಯಬೇಕು.

  • ಇದೇ ವಿಷಯವನ್ನು ಸಂಗೀತರತ್ನ ಮಲ್ಲಿಕಾರ್ಜುನ ಮನಸೂರ್ ಅವರು ತಮ್ಮ ದಕ್ಷಿಣೆ ತರ ಸಂಗೀತ ಸಮನ್ವಯ' (ಪ್ರಜಾವತ ದೀಪಾವಳಿ ಸಂಚಿಕೆ-೧೯೫೧) ಎಂಬ ರೇಡಿಯೋ ಭಾಷಣದಲ್ಲಿ ಚರ್ಚಿಸಿದ್ದಾರೆ. ಈ ಲೇಖನವನ್ನು ಅನುಬಂಧ ೪ ರಲ್ಲಿ ಕೊಡಲಾಗಿದೆ.

Luuuuuuu uuu