ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೧೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೧೦ ಕರ್ನಾಟಕದ ಕಲಾವಿದರು ತಮ್ಮ ಮಕ್ಕಳಿಗೆ ಬಾಲ್ಯದಲ್ಲಿಯೇ ಸಂಗೀತಾಭ್ಯಾಸಕ್ಕೆ ಅವಕಾಶ ಕಲ್ಪಿಸಬೇಕು. ಪ್ರಾಚೀನಕಾಲದಿಂದ ಅನೇಕ ಮಹನೀಯರು ಮಾನವನ ಮನೋಧರ್ಮಕ್ಕನು ಗುಣವಾಗಿ ಧಾರ್ಮಿಕ ತಳಹದಿಯ ಮೇಲೆ ಸಂಗೀತ ಶಾಸ್ತ್ರವನ್ನು ಬೆಳಸುತ್ತ ಬಂದಿದ್ದಾರೆ. ಇದು ಪರಂಪರಾಗತವಾಗಿ ಬಂದ ನಮ್ಮ ಅಮೌಲ್ಯ ನಿಧಿ. ಇದನ್ನು ಉಳಿಸಿಕೊಂಡುಬರುವುದು ನಮ್ಮ ಪ್ರಥಮ ಕರ್ತವ್ಯ. ಶಾಸ್ತ್ರೀಯ ಸಂಗೀತವನ್ನಾರ್ಜಿಸಿ ಪಾಂಡಿತ್ಯ ಪಡೆಯುವುದು ಸುಲಭಸಾಧ್ಯವಲ್ಲ. ಇಂದಿನ ಜನ ಅಲ್ಪತೃಪ್ತರು. ಎಲ್ಲವನ್ನೂ ಆರ್ಥಿಕಾರ್ಜನೆಯಲ್ಲಿ ಅಳೆದು ನೋಡಲು ಆಶಿಸುತ್ತಾರೆ. ಹಿಂದಿನಂತೆ ಶ್ರಮವಹಿಸಿ ಹೆಚ್ಚು ಕಾಲ ವ್ಯಾಸಂಗಮಾಡಿ ಸ್ವರಸಿದ್ದಿ ಹೊಂದಿ ಪಾಂಡಿತ್ಯ ಪಡೆಯಲು ಕಾಲಾವಕಾಶವಿಲ್ಲ. ಅಂತಹ ಉನ್ನತಮಟ್ಟದ ಗುರುಗಳು ದೊರೆಯುವುದೂ ದುರ್ಲಭ. ಜನಸಾಮಾನ್ಯದ ಸಂಗೀತಾಭಿರುಚಿ ಹೆಚ್ಚುವಂತೆ ಮಾಡುವುದು ತಂದೆತಾಯಿಗಳ ಕರ್ತವ್ಯ. ವಿದ್ಯಾಶಾಖೆಯವರೂ ಈ ಕಡೆ ಹೆಚ್ಚು ಗಮನಕೊಡಬೇಕು. ನಮ್ಮ ಸಂಗೀತಗಾರರೂ ಮಹಾಜನರೂ ಲಕ್ಷವೀಯಬೇಕಾದ ವಿಷಯವೊಂದುಂಟು. ನಮ್ಮ ಶಾಸ್ತ್ರೀಯ ಸಂಗೀತದಲ್ಲಿ ಬೆಳವಳಿಗೆಗೆ ಅವಕಾಶವಿದೆ. ಸಾಮರ್ಥ್ಯವುಳ್ಳ ಸಂಗೀತ ವಿದ್ವಾಂಸರೂ ವಾಗ್ಗೇಯಕಾರೂ ಕಾಲದ ಪರಿಜ್ಞಾನದಿಂದ ಸಂಸ್ಕೃತಿಯ ಅಭಿಮಾನದಿಂದ ಒಮ್ಮತದಿಂದ ಪ್ರಯತ್ನ ನಡೆಸಿದರೆ ಕ್ರಮ ಕ್ರಮವಾಗಿ ಉನ್ನತಮಟ್ಟಕ್ಕೆ ಬಂದೇವೆಂಬ ನಂಬಿಕೆ ಬೆಳೆಯಬೇಕು. ಇಂದಿನ ಮದುವೆಮನೆ ಸಂಗೀತ, ಸಿನೀ ವಾಸಂಗೀತ, ಗ್ರಾಮಫೋನ್ ಸಂಗೀತ ಇವೆಲ್ಲ ಪ್ರಜಾ ಸ್ವಾತಂತ್ರಯುಗದ ಸ್ವಚ್ಛಂದ ಮನೋಭಾವದ ಪರಿಣಾಮು. ಲೋಕೋ ಭಿನ್ನ ರುಚಿಃ ಎಂಬ ನಾಣ್ಣುಡಿಗೆ ಒಳ್ಳೆಯ ನಿದರ್ಶನ. ಇದಕ್ಕೆ ವ್ಯಥೆಪಡಬೇಕಾದುದಿಲ್ಲ. ಸತ್ವವಿದ್ದವು ಮಾತ್ರ ನಿಂತು ಉಳಿದವು ಕೆರೆಯ ಜೊಂಡಿನಂತಾಗುವುದು. ನಮ್ಮ ನಾಡಿನ ವಾದ್ಯಗಳಾದ ವೆಣು, ವೀಣೆ, ತಂಬೂರಿ, ಕಿನ್ನರಿ ಮತ್ತೆ ನಾಡಿನಲ್ಲಿ ಅಭಿವೃದ್ಧಿ ಹೊಂದಲು ಸರ್ವಪ್ರಯತ್ನ ನನ್ನೂ ಮಾಡಬೇಕಾಗಿದೆ.' ಚೆನ್ನಮ್ಮನವರು ಶ್ರೇಷ್ಠ ವರ್ಗದ ಸಂಗೀತೋಪಾಸಕರಾಗಿರುವುದಲ್ಲದೆ ಆದು ಪ್ರಸಾರಕ್ಕೂ ಶಕ್ತಿ ಮಾರಿ ಶ್ರಮಿಸುತ್ತಿದ್ದಾರೆ. ಇವರ ಕಲಾವಿದಗ್ಧತೆ ಯಷ್ಟೇ ಹೆಚ್ಚಿನದು ಇವರ ಸೌಜನ್ಯ, ಲೋಕಸೇವಾಕಾಂಕ್ಷೆ, ತುಂಬಿದ ಕೊಡ