ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೧೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಗೀತವಿದುಷಿ ಜೆ. ಚೆನ್ನಮ್ಮ ೧೧೧ ತುಳುಕುವುದಿಲ್ಲ' ಎಂಬ ನಾಣ್ಣುಡಿಯನ್ನು ನಿಜವಾಗಿಸಿದ್ದಾರೆ ಚೆನ್ನಮ್ಮನವರು. ಸಂಗೀತವನ್ನೆ೦ದಿಗೂ ಹಣ ಸಂಪಾದನೆಯ ಸಾಧನ ಮಾಡಿಕೊಂಡಿಲ್ಲ. ತಮ್ಮ ಸಂಗೀತ ಸೇವೆಯ ಸಹಕಾರ ನಿರೀಕ್ಷಿಸುವ ಸಂಸ್ಥೆಗಳ ಸೇವೆಗೆ ಸದಾ ಸಿದ್ದ. ಹಾಡು ಕೇಳಲು ಬಯಸುವವರಿಗೆ ಇಲ್ಲವೆಂದು ಹೇಳಲು ಅವರರಿಯರು. ಈಗ್ಗೆ ೧೮ ವರ್ಷಗಳ ಹಿಂದೆ ಬಾಬು ರಾಜೇಂದ್ರ ಪ್ರಸಾದರು ಏರ್ಪಡಿಸಿದ್ದ 'ಬಿಹಾರ್ ಭೂಕಂಪ ನಿಧಿ'ಗೆ ಧನ ಸಂಗ್ರಹಿಸಲು ನಾನು ಪ್ರಯತ್ನಿಸಿ (೭-೨-೩೪ರಲ್ಲಿ ಒಂದು ವಿವಿಧ ವಿನೋದಾವಳಿ'ಯನ್ನೇರ್ಪಡಿಸಿದೆ. ಸಂಗೀತ ಭಾಗ ನಿರ್ವಹಿಸಲು ಒಬ್ಬರು ಸೋದರಿ ಒಪ್ಪಿಕೊಂಡಿದ್ದರು. ವಿನೋದಾವಳಿಯ ದಿನ ಬಂದೇಬಿಟ್ಟಿತು, ಕಾಲಕ್ಕೆ ಸರಿಯಾಗಿ ಅಧ್ಯಕ್ಷರು ರಾಜಮಂತ್ರಪ್ರವೀಣ ಪಿ. ಮಹಾದೇವಯ್ಯನವರು ದಯಮಾಡಿಸಿದರು. ಸಂಗೀತ ಭಾಗ ನಿರ್ವಹಿಸ ಬೇಕಾಗಿದ್ದ ಸೋದರಿಯರು ಬರಲಿಲ್ಲ. ಗಾಡಿ ಕೊಟ್ಟು ಹೇಳಿ ಕಳುಹಿಸಿದ್ದಾ ಯಿತು. ಬರಲು ಸಾಧ್ಯವಿಲ್ಲವೆಂದು ಉತ್ತರ ಬಂತು. ನನಗೆ ದಿಕ್ಕೇ ತೋಚದಂತಾಯಿತು. ಹೇಗಾದರೂ ಆಗಲಿ ಎಂದು ಚೆನ್ನಮ್ಮನವರಿಗೆ ಹೇಳಿಕಳುಹಿಸಿದೆ. ಅವರು ಕೂಡಲೆ ಬಂದು ನಮ್ಮ ಕಾರ್ಯಕ್ರಮದಲ್ಲಿ ಭಾಗವಹಿಸಿ ನಮ್ಮ ಗೌರವ ಉಳಿಸಿದರು. ಚೆನ್ನಮ್ಮನವರು ಆಪದ್ಬಂಧು ? ಗಳಾದ ಸನ್ನಿವೇಶಗಳು ಹಲವಾರು ಇವೆ. ಸಂಗೀತವನ್ನು ಆತ್ರೋತ್ಕರ್ಷ ಸಾಧನವೆಂದು ಭಾವಿಸಿ ಅದರ ಸೇವೆಯನ್ನು ತ್ರಿಕರಣಶುದ್ಧಿಯಿಂದ ಮಾಡುತ್ತಿರುವ ವಿದುಷಿ ಚೆನ್ನಮ್ಮನವರು ಕನ್ನಡ ಸಂಗೀತ ಪ್ರಪಂಚಕ್ಕೆ ತಮ್ಮ ಹಿರಿಯ ಬಾಳುವೆ, ಶ್ರೇಷ್ಠ ಸಂಗೀತದಿಂದ ಕೀರ್ತಿ ತಂದಿದ್ದಾರೆ.