ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೧೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕೆ. ಹಿರಣ್ಣಯ್ಯ ೧೧೩ ತಮ್ಮ ಕ್ರಿಯಾಶಕ್ತಿಯನ್ನು ಮಾಸಲುಮಾಡಿದ ಕವಿಗಳು ಸಿಕ್ಕುವುದಿಲ್ಲ. ಕೈಲಾಸಂ ಬರುವವರೆಗೆ ಈ ಕೊರತೆ ನೀಗಲಿಲ್ಲ. * ಕನ್ನಡನಾಡಿನಲ್ಲಿ ಹಾಸ್ಯ ಸಾಹಿತ್ಯದ ಬಗ್ಗೆ ಇದ್ದ ಕೊರತೆಯನ್ನು ನಾಡಗೀರ ಕೃಷ್ಣರಾಯ, ಕಸ್ತೂರಿ, ನಾಡಗೀರ ಗೋವಿಂದರಾಯ, ಬಳ್ಳಾರಿ ಬೀಚಿ, ಕುಪ್ಪಿ ವಾಸುದೇವ ಶೆಣೈ, ಎನ್. ಎಸ್. ಗದಗ್‌ಕರ್, ಡಾಕ್ಟರ್ ಎಂ. ಶಿವರಾಮ್ ಮೊದಲಾದವರು ನಿವಾರಿಸಲು ಪ್ರಯತ್ನಿಸುತ್ತಿದ್ದರೂ ಇವರ ಲಕ್ಷ ಹಾಸ್ಯರಸಪ್ರಧಾನವಾದ ನಾಟಕಗಳ ಕಡೆ ಬೀಳದಿರುವುದು ಕನ್ನಡದ ದುರ್ದೈವ. ಹಾಸ್ಯರಸೋತ್ಪಾದನೆಗೆ ಕನ್ನಡ ರಂಗಭೂಮಿ ಮಾಡಿರುವ ಸೇವೆ ಚಿರಸ್ಮರಣೀಯವಾಗಿದೆ. ನಾಟಕ ಸಾಹಿತ್ಯದಿಂದ ತಮ್ಮ ಪ್ರತಿಭಾಪ್ರದರ್ಶನಕ್ಕೆ ಸಾಕಷ್ಟು ನೆರವು ದೊರೆಯದಿದ್ದರೂ ಲಕ್ಷ್ಮೀಪತಿಶಾಸ್ತ್ರಿಗಳು, ಪುಟ್ಟಾರಿಶಾಸ್ತ್ರಿಗಳು ಸಿದ್ದಪ್ಪಾಜಿಯವರು, ಮರಿರಾಯರು, ಹುಲಿಮನೆ ಸೀತಾರಾಮಶಾಸ್ತ್ರಿಗಳು, ಪಾವಂಜೆಯವರು, ಜಿ. ಎಚ್. ವೀರಣ್ಣನವರು, ಮಹಾಬಲರಾಯರು, ಕೆ. ಹಿರಣ್ಣಯ್ಯನವರು ಹಾಸ್ಯದ ನಾನಾ ಪ್ರಕಾರಗಳ ಪ್ರಯೋಗ ನಡೆಸಿ ಉತ್ತೀರ್ಣರಾಗಿದ್ದಾರೆ. ಹಾಸ್ಯದ ಹೊಲವನ್ನು ಉತ್ತು, ಕಳೆ ಕಿತ್ತು, ಉತ್ತಮ ಬೆಳೆ ಬೆಳೆಯಲು ಕರ್ನಾಟಕದಲ್ಲಿ ಆಗಿರುವ ಕೃಷಿ ಭಾರತದ ಇತರ ಪ್ರಾಂತ್ಯಗಳ ರಂಗಭೂಮಿಯ ಮೇಲೆ ಅಷ್ಟಾಗಿ ಆಗಿಲ್ಲವೆಂದರೆ ಸ್ವಾಭಿಮಾನದ ಮಾತಾಗಲಾರದು. ಹಾಸ್ಯರಸ ಸಮುದ್ರವನ್ನು ಕಡೆದು ಶೋಧಿಸುತ್ತಿರುವ ಕನ್ನಡ ಕಲಾವಿದರಲ್ಲಿ ಹಿರಣ್ಣಯ್ಯನವರು ಅಗ್ರಗಣ್ಯರಾಗಿದ್ದಾರೆ. ಜೀವನ ಸಂಗ್ರಾಮ ಅವರನ್ನು ರುದ್ರನಟರನ್ನಾಗಿ (Tragic Actor) ಮಾಡಬೇಕಾಗಿತ್ತು. ಆದರೆ ವಿವೇಚನೆ ಅವರಿಗೆ ಹಾಸ್ಯದ ಹೆಬ್ಬಾಗಿಲನ್ನು ತೆಗೆದು ಲೋಕಸೇವೆಗೆ ಅನುಗೊಳಿಸಿತು. * ಹಿ ರ ಣ ಯ್ಯ ನ ವ ರ ತಂದೆ ಅನಂತರಾಮಯ್ಯನವರು ಸರ್ಕಾರಿ

  • " Life is a comedy to the man who thinks, and a tragedy to the man who feels”

--Walpole.