ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೧೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

  • ಹಿರಣ್ಣಯ್ಯ

೧೧೫ ಮುಂದೆ ಅವರಿಗೆ ಕೀರ್ತಿತಂದ ಕೆಲವು ನಾಟಕಗಳು ಈ ಸಮಯದಲ್ಲಿ ರೂಪಗೊಂಡುವಾಗಿವ. ಹಿರಣ್ಣಯ್ಯನವರು ಎರಡು ನಾಟಕಗಳನ್ನು - “ ಎಚ್ಚಮನಾಯಕ', ( ಆಶಾಪಾಶ' -ಬರೆದು ಆವುಗಳನ್ನು ರಂಗಭೂಮಿಯಲ್ಲಿ ಪ್ರದರ್ಶಿಸಲು ಸಿದ್ಧ ರಾದರು. ಮುಂದೆ ನಾಟಕದ ಕಂಪನಿ ಸೇರುವುದೊಂದೇ ಮಾರ್ಗ, ಆಗ ಉಚ್ಛಾಯ ಸ್ಥಿತಿಯಲ್ಲಿದ್ದ ತು ಮ ಕೂಾ ರು ಸೀತಾರಾಮಯ್ಯನವರ “ಸೀತಾಮನೋಹರ ಕಂಪೆನಿ'ಯಲ್ಲಿ ನಟರಾಗಿ ಸ್ವಲ್ಪ ಕಾಲನಿಂತರು. (೧೯೩೪). ಕೆಲವು ತಿಂಗಳು ಕಳೆಯುವುದರಲ್ಲಿ ಗುಬ್ಬಿ ನಾಟಕ ಮಂಡಳಿಯವರ ಬ್ರಾಂಚ್ ಕಂಪನಿಯ ನಟರಾದರು. ಆಶಾಪಾಶ'ವನ್ನು ರಂಗದ ಮೇಲೆ ಪ್ರದರ್ಶಿಸುವ ಹಿರಣ್ಣಯ್ಯನವರ ಮನೋಲಥ ಗುಬ್ಬಿ ಬ್ರಾಂಚ್ ಕಂಪೆನಿಯಲ್ಲಿ ಈಡೇರಿತು. ನಾಲ್ಕು ವರ್ಷ ಕಾಲ ಅಲ್ಲಿದ್ದು ಶ್ರೀ ನೀಲಕುರಪ್ಪನವರು ಸ್ಟಾ ಪಿ ಸಿ ದ್ದ * ಓರಿಯಂಟಲ್ ಇನಾಟಕ್ ಕಂಪೆನಿ' ಸೇರಿ ಅಲ್ಲಿ ತ – ಎಚ್ಚಮನಾಯಕ' ನಾಟಕವನ್ನೂ ರಂಗದ ಮೇಲೆ ತಂದರು. ಅಲ್ಲಿಯೂ ಹೆಚ್ಚು ಕಾಲ ನಿಲ್ಲಲಿಲ್ಲ. ೧೯೩೮ರಲ್ಲಿ ಶ್ರೀ ನಾಗೇಂದ್ರರಾಯರು, ಸುಬ್ಬಯ್ಯನಾಯಿಡು ಮತ್ತು ಶ್ರೀಮತಿ ಲಕ್ಷ್ಮೀಬಾಯಿ ಸ್ಥಾಪಿಸಿದ ' ಸಾಹಿತ್ಯ ಸಾಮ್ರಾಜ್ಯ ನಾಟಕ ಮಂಡಳಿ' ಸೇರಿ ಎಚ್ಚಮನಾಯಕ, ಆಶಾಪಾಶ ನಾಟಕಗಳನ್ನು ಪ್ರದರ್ಶನಕ್ಕೆ ತಂದರು. ಇಷ್ಟು ವರ್ಷ ಪಟ್ಟ ಶ್ರಮಕ್ಕೆ ಹಿರಣ್ಣಯ್ಯನವರಿಗೆ ಈಗ ಜನತೆಯ ಆದರ, ಪ್ರೋತ್ಸಾಹ ದೊರೆಯಿತು. ಸಾಹಿತ್ಯ ಸಾಮ್ರಾಜ್ಯ ನಾಟಕ ಮಂಡಳಿಯೊಡನೆ ಅಖಿಲ ಕರ್ನಾಟಕ ಪ್ರವಾಸ ಮಾಡಿ ಹೋದ ಹೋದ ಕಡೆ ಯಶಸ್ಸು ಗಳಿಸಿದರು. ೧೯೪೦ರಲ್ಲಿ ಸಾಹಿತ್ಯ ಸಾಮ್ರಾಜ್ಯ ನಾಟಕ ಮಂಡಳಿ ನಿಂತುಹೋಯಿತು.* ಹಿರಣ್ಣಯ್ಯನವರು ಮದರಾಸು ಸೇರಿ ಸಿನಿಮಾ ಪ್ರಪಂಚದಲ್ಲಿ ಕಾಲಿಟ್ಟರು ಭಕ್ತಿ, ಅಲ್ಲಿಬಾಬಾ, ತಿರುವಳ್ಳುವರ್, ವಾನರಸೇವೆ, ಸಭಾ ಸತಿ, ಮೊದಲಾದ ತಮಿಳು ಚಿತ್ರಗಳಲ್ಲಿಯೂ ಕೃಷ್ಣಪ್ರೇಮ ಎಂಬ ತೆಲುಗು ಚಿತ್ರದಲ್ಲಿಯೂ ಅಭಿನಯಿಸುವ ಅವಕಾಶ ಸಿಕ್ಕಿತು. ಇಡಿಯ ಜಗತ್ತನ್ನೇ ಅಲ್ಲಕಲ್ಲೋಲಮಾಡಿದ

  • ಶ್ರೀ ಸುಬ್ಬಯ್ಯ ನಾಯಿಡು ಮತ್ತು ಶ್ರೀಮತಿ ಲಕ್ಷ್ಮೀಬಾಯಿ ಈ ಮಂಡಳಿಯನ್ನು ಪ್ರನರುಜೀವನಗೊಳಿಸಿ ನಾಟಕಗಳನ್ನಾಡುತ್ತಿರುವುದು ಸಂತೋಷದ ಸಂಗತಿ.

= = = =