ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೧೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೧೬ ಕರ್ನಾಟಕದ ಕಲಾವಿದರು ಕಡೂರು ಪಯೋಗಿಸಿ ಕಳಿಸಿದರು. ೧೯೪೨ನೆಯ ಇಸವಿಯಲ್ಲಿ ಬಾಂಬಿನ ಭೀತಿಯಿಂದ ಮದರಾಸು ಬರಿದಾಗುತ್ತ ಬಂತು. ಮ ದ ರಾ ಸಿ ನ ವ್ಯಾಪಾರೋದ್ಯಮಗಳೆಲ್ಲಾ ತಟಸ್ಥವಾದವು. ಹಿರಣ್ಣಯ್ಯನವರು ಮದರಾಸು ಬಿಟ್ಟು ತಮ್ಮ ಸ್ವಂತ ಊರಾದ ಸಕ್ಕರಾಯ ಪಟ್ಟಣಕ್ಕೆ (ಕಡೂರು ಜಿಲ್ಲೆ ಬಂದು ನೆಲಸಿದರು. ಸಿನಿಮಾ ಪ್ರಪಂಚದಲ್ಲಿ ದೊರೆತಿದ್ದ ಅನುಭವವನ್ನು ಉಪಯೋಗಿಸಿಕೊಂಡು " ಆಶಾಪಾಶ ' ನಾಟಕ ವನ್ನು ಕೈಯಾಡಿ - ದೇವದಾಸಿ' ನಾಟಕ ಸಿದ್ದಗೊಳಿಸಿದರು. ಹಳ್ಳಿಯಲ್ಲಿ ಕಾಲಹರಣ ಮಾಡುತ್ತ ಕುಳಿತಿದ್ದ ಹಿರಣ್ಣಯ್ಯನವರನ್ನು ಹೊರಗೆಳೆದು ರಂಗ ಭೂ ಮಿ ಯ ಸೇವೆಯ ನೊಗವನ್ನು ಅವರ ಹೆಗಲಮೇಲೆ ಹೊರೆಸಿದ ಕೀರ್ತಿ ದಿವಂಗತ ಎಂ. ಎ. ಗೋಪಾಲ್ ಅವರಿಗೆ ಸೇರತಕ್ಕದು. ಗೋಪಾಲ್ ಮತ್ತು ಹಿರಣ್ಣಯ್ಯ ಕೂಡಿ ಒಂದು ಹಂಚಿಕೆ ತೆ ಗೆ ದ ರು. ಮೈಸೂರಿನಲ್ಲಿ ಮೂರು ನಾಟಕ ಆಡತಕ್ಕದ್ದು, ಅದರ ನಿವ್ವಳ ಉತ್ಪನ್ನವನ್ನು ಬಂಡವಾಳ ಮಾಡಿಕೊಂಡು ಮುಂದೆ ಕಂಪೆನಿ ಸ್ಥಾಪಿತಕ್ಕುದೆಂದು, ಆಗವರ ಕೈಯಲ್ಲಿದ್ದ ಬಂಡವಾಳ ನಲವತ್ತು ರೂಪಾಯಿ. ಮೊದಲನೆಯ ನಾಟಕ ಸದಾರಮೆ - ಥಿಯೇಟರ್ ತುಂಬಿ ಹೋಯಿತು. ಅದರಿಂದ ಬಂದ ಹಣದಿಂದ ದಿವಂಗತ ಪೀರ್ ಸಾಹೇಬರ ಕಂಪೆನಿಯ ಹಳೆಯ ಸಾಮಾನುಗಳನ್ನು ನೂರೈವತ್ತು ರೂಪಾಯಿಗೆ ಖರೀದಿ ಮಾಡಿದ್ದೂ ಆಯಿತು. ಹಿರಣ್ಣಯ್ಯನವರಿಗೆ ಶುಕ್ರದೆಶೆ ಆರಂಭವಾಯಿತು. ಮೂವತ್ತೆರಡು ಸದಾರಮೆ ನಾಟಕಗಳಾದವು. ಹನ್ನೆರಡು ಎಚ್ಚಮನಾಯಕ, ದೇವದಾಸಿಯೂ ರಂಗಕ್ಕೆ ಬಂದು ಒಂದೇ ಸಮನೆ ಎಪ್ಪತ್ತೆರಡು ಪ್ರದರ್ಶನಗಳಾದವು. ತಮಾಷೆ ಎಂಬ ಹೊಸ ನಾಟಕವನ್ನೂ ಕೂಡಿಸಿ ಇಪ್ಪತ್ತೈದು ಪ್ರದರ್ಶನಗಳನ್ನಿತ್ತರು. ಮಾರನೆಯ ವರ್ಷ ಸಂಗೀತರತ್ನ ೬. ಚೌಡಯ್ಯನವರು, ಎಂ. ಎನ್. ಗೋಪಾಲ್, ಹಿರಣ್ಣಯ್ಯ ಕೂಡಿಕೊಂಡು ಕೊಯಿಮತ್ತೂರಿನಲ್ಲಿ 'ವಾಣಿ' ಕನ್ನಡ ಚಿತ್ರ ಪಠವನ್ನು ತೆಗೆದರು. ವಾಣಿ ಚಿತ್ರ ಮುಗಿದ ಮೇಲೆ ೧೯೪೩ರಲ್ಲಿ ಮೈಸೂರು ನಗರದಲ್ಲಿ 'ಹಿರಣ್ಣಯ್ಯನವರ ಮಿತ್ರ ಮಂಡಳಿ' ಆರಂಭವಾಯಿತು. ಮೈಸೂರಿನಲ್ಲಿ ಕೆಲವು ನಾಟಕಗಳನ್ನಾಡಿಕೊಂಡು ಅರಸೀಕೆರೆ, ಶಿವಮೊಗ್ಗೆ, ದಾವಣಗೆರೆ, ಹರಿಹರ, ತಿಪಟೂರು, ಹಾಸನ ಪ್ರವಾಸ ಕೈಗೊಂಡರು. ೧೯೪೫ರಲ್ಲಿ ಹಿರಣ್ಣಯ್ಯನವರು ದೊಡ್ಡ ನಷ್ಟವನ್ನನುಭವಿಸಬೇಕಾಯಿತು.