ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೧೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೧೬ ಕೆ. ಹಿರಣ್ಣಯ್ಯ ಅವರ ಗೆಳೆಯ, ಕಂಪೆನಿಯ ಪ್ರೇರಕಶಕ್ತಿ, ಗೋಪಣ್ಣ (ಎಂ.ಎನ್. ಗೋಪಾಲ್) ಕಾಲವಶರಾದರು. - ೧೯೪೫ ರಲ್ಲಿ ಹಿರಣ್ಣಯ್ಯನವರು ಬೆಂಗಳೂರಿಗೆ ಬಂದು ನಿಂತರು. ಗಾಂಧೀನಗರದಲ್ಲಿ ಸ್ವಂತ-ಜಿಂಕ್ ಮೀಟ್- ಥಿಯೇಟರಾಯಿತು. ಸತತವಾಗಿ ತೊಂಭತ್ತು ಮೂರು ದೇವದಾಸಿ ನಾಟಕಗಳನ್ನಾಡಿ ಬೆಂಗಳೂರು ರಸಿಕರ ಮನವೊಲಿಸಿಕೊಂಡರು. ಥಿಯೇಟರ್‌ ತೆಗೆದುಹಾಕಲು ಸರ್ಕಾರದಿಂದ ಆಣತಿ ಬಂತು. ಇನ್ನೇನು ಗತಿ ಎನ್ನುವ ಯೋಚನೆ ಹಿರಣ್ಣಯ್ಯನವರನ್ನು ಬಲವಾಗಿ ಮುತ್ತಿತು. ಆಗ ಶ್ರೀಮತಿ ಕಮಲಮ್ಮ ಕೃಷ್ಣಯ್ಯಂಗಾರ್ ಅವರು ತಮ್ಮ 'ಮನೋರಮಾ' ಬಂಗಲೆಯ ಕಾಂಪೌಂಡಿನಲ್ಲಿ ಸ್ಥಳ ಕೊಟ್ಟು ಈಗಿರುವ (ಶ್ರೀ ಥಿಯೇಟರ್' ನಿರ್ಮಿಸಲು ನೆರವಾದರು. ೧೯೪೨ನವೆಂಬರ್ ತಿಂಗಳಿಂದ ಶ್ರೀ ಥಿಯೇಟರಿನಲ್ಲಿ ಹಿರಣ್ಣಯ್ಯನವರ ನಾಟಕಗಳು ಆರಂಭವಾದವು. ಒಂದೇ ಸಮನೆ ಮುನ್ನೂರ ಎಂಬತ್ತೇಳು 'ದೇವದಾಸಿ' ನಾಟಕಗಳನ್ನಾಡಿ ಹಿರಣ್ಣಯ್ಯ ನವರು ಅಪೂರ್ವ ಯಶಸ್ಸು ಗಳಿಸಿಕೊಂಡರು. - ೧೯೪೬ರಲ್ಲಿ ಹಿರಣ್ಣಯ್ಯನವರು ಕಂಪೆನಿಯೊಂದಿಗೆ ಹುಬ್ಬಳ್ಳಿ, ಬೆಳಗಾಂವಿ, ಜಮಖಂಡಿ, ಗದಗು, ಬಾಗಿಲಕೋಟೆ, ವಿಜಾಪುರ, ಸೊಲ್ಲಾಪುರ, ಆದವಾನಿ, ರಾಯಚೂರು ಪಟ್ಟಣಗಳಲ್ಲಿ ನಾಟಕ ಪ್ರದರ್ಶನಗಳನ್ನಿತ್ತು ಮರಳಿ ಬೆಂಗಳೂರಿಗೆ ಒಂದು ವರ್ಷದ ತರುವಾಯ ಬಂದು ನಾಟಕಗಳ ಪ್ರದರ್ಶನ ಆರಂಭಿಸಿದರು. ೧೯೪೬ ರಿಂದ ಈವರೆಗೆ ಮಕ್ಕಲ್ ಟೋಪಿ, ದೇವಿ ಮಂಡೋದರಿ, ಜಗಜ್ಯೋತಿ ಬಸವೇಶ್ವರ, ಅನಸೂಯಾ, ಪಂಗನಾಮ ನಾಟಕ ಗಳನ್ನು ಕೂಡಿಸಿ ಆಡಿದ್ದಾರೆ. ಈಚೆಗೆ ಸುಲಭ ದರದಲ್ಲಿ ಭಾನುವಾರ ಬೆಳಿಗ್ಗೆ ಯ ಪ್ರದರ್ಶನಗಳನ್ನು ಆರಂಭಿಸಿದ್ದಾರೆ. ಹಿರಣ್ಣಯ್ಯನವರ ಕಲಾಸೇವೆ ಜನತೆಯ ಮೇಲೆ ಯಾವ ಪರಿಣಾಮವನ್ನುಂಟುಮಾಡಿದೆಯೆಂಬುದಕ್ಕೆ ಹುಬ್ಬಳ್ಳಿ, ಬೆಳಗಾಂವಿ, ಗದಗು, ಹಿರಿಯೂರು, ಬಳ್ಳಾರಿ, ಮೈಸೂರು, ಬೆಂಗಳೂರು, ಮುಂಬಯಿ ನಗರಗಳಲ್ಲಿ ಮಾನಪತ್ರಗಳನ್ನು ಒಪ್ಪಿಸಿರುವ ಸಾರ್ವಜನಿಕರೂ, ಪ್ರತಿನಿತ್ಯ ಶ್ರೀ ಥಿಯೇಟರಿ'ನಲ್ಲಿ ಕಿಕ್ಕಿರಿದು ತುಂಬಿ, ಹಿರಣ್ಣಯ್ಯನವರ ಹಾಸ್ಯ ರಸಗಂಗೆಯಲ್ಲಿ ಸಾಯುವ ಕಲಾಭಿಮಾನಿಗಳೂ ಸಾಕ್ಷಿಯಾಗಿದ್ದಾರೆ. ಹಿರಣಯ್ಯನವರ