ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೧೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ನಾಟಕದ ಕಲಾವಿದರು ನಾಟಕ ನೋಡಿದ ಭಾರತ ಸೈನ್ಯದ ಪ್ರಧಾನಾಧಿಕಾರಿಗಳೂ, ಕಲಾಭಿಮಾನಿ ಗಳೂ ಆದ ಜನರಲ್ ಸಿ. ಎಮ್. ಕಾರಿಯಪ್ಪನವರು 'ಇಂಥ ಒಳ್ಳೆಯ ಅಭಿನಯ ನೋಡಿ ನನಗೆ ಪರಮ ಸಂತೋಷವಾಯಿತು. ನೀವೂ ನಿಮ್ಮಂಥ ವರೂ ರಂಗಭೂಮಿಯ ಪುನರುದ್ಧಾರಕ್ಕೆ ಎಲ್ಲ ಪ್ರಯತವನ್ನೂ ಮಾಡುವಿರಿ ಎನ್ನುವ ನಂಬಿಕೆ ನನಗಿದೆ. ನಮ್ಮ ದೇಶದಲ್ಲಿ ಹೆಚ್ಚು ಹೆಚ್ಚಾಗಿ ನಾಟಕಗಳು ಬೆಳೆಯಬೇಕೆಂದು ನನ್ನ ಆಸೆ.' * ಎಂದು ಮುಕ್ತಕಂಠದಿಂದ ಮೆಚ್ಚುಗೆಯ ನುಡಿ ನುಡಿದಿದ್ದಾರೆ. ಹಿರಣ್ಣಯ್ಯನವರು ತಮ್ಮ ಹದಿನಾರನೆಯ ವಯಸ್ಸಿನಿಂದ ಈ ವರೆಗೆ ಸುಮಾರು ಮೂವತ್ತೊಂದು ವರ್ಷ ಕಾಲ + ಸತತವಾಗಿ ರಂಗಭೂಮಿಯ ಸೇವೆ ಮಾಡಿಕೊಡು ಬಂದಿದ್ದಾರೆ. ನಾಟಕ ಜೀವನದ ಕಷ್ಟ ಕಂಡುಂಡವರಿಗೆ ಮಾತ್ರ ಗೊತ್ತು ಅದರ ಕಪ್ಪ, ತಾಪ, ಸಂಕಟ, ಕತೆ ಇವರಿಗೆ ಚಿರಂತನ ತಾರುಣ್ಯವನ್ನು ಕರುಣಿಸಿದೆ. ಕಷ್ಟ ಬಂದಾಗ ಕುಗ್ಗದೆ, ಸುಖ ಬಂದಾಗ ಹಿಗ್ಗದೆ ಇರುವ ಮನೋಭಾವ ಬೆಳೆದು ಬಂದಿದೆ. ಉಪಕಾರ ಮಾಡಿದವರನ್ನು ಸದಾ ಸ್ಮರಿಸಿಕೊಳ್ಳುವ ಸಂಸ್ಕೃತಿ, ಹತ್ತು ಜನಕ್ಕೆ ಕೈ ಮಾಗಿ ಸಹಾಯ ಮಾಡಬೇಕೆಂಬ ಔದಾರ್ಯ ಹಿರಣ್ಣಯ್ಯನವರ ಯಶಸ್ಸಿನ ರಹಸ್ಯವಾಗಿದೆ. ತಮ್ಮ ಕಷ್ಟ ಕಾಲ ದ ಲ್ಲಿ ಉಪಕಾರ ಮಾಡಿದ ಶ್ರೀಮತಿ ಕಮಲಮ್ಮ ಕೃಷ್ಣಯ್ಯಂಗಾರ್ಯರು, ಶ್ರೀ ಕೊಲ್ಲಾ ನರಸಿಂಹಶೆಟ್ಟರು ಮೊದಲಾದ ಸಹೃದಯರನ್ನು ಕೃತಜ್ಞತೆಯಿಂದ ಸ್ಮರಿಸಿಕೊಳ್ಳುತ್ತಾರೆ.

  • ಒಂದು ದೊಡ್ಡ ಕಂಪನಿ ನಡೆಸಿಕೊಂಡು ನೂರಾರು ಜನಕ್ಕೆ ಆಶ್ರಯ ದಾತರಾಗಿರುವ ಹಿರಣ್ಣಯ್ಯನವರು ಮೂವತ್ತೆಂಟು ವರ್ಷಗಳ ಕೆಳಗೆ
  • " I have been wanting to write to you for some time to say how delighted I was witnessing your show on the night of 30 Dec 50 when I was in Bangalore. It was such joy to me to see such excellent acting. I do hope you and people like you will do everything you can to revive the stage again. I want to see more and more theatres throughout our countay.” (12 Feb 51. New Delhi)

--Gen CM Cariappa. + ಹಿರಣ್ಣಯ್ಯನವರ ಜನ್ಮದಿನ : ೨ ನವೆಂಬರ್ ೧೯೦೫, - tv -