ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

xii ಮುನ್ನುಡಿ ಸಂಗೀತ ಕಛೇರಿ ಮಾಡಿಸುವುದು ಒಂದು ಸಂಪ್ರದಾಯ. ಇಲ್ಲಿಯೂ ದಕ್ಷಿಣದ ವಿದ್ವಾಂಸರಿಗೇ ಮನ್ನಣೆ. ಈಗ ನಾಲೈದು ವರ್ಷಗಳಿಂದ ಬೆಂಗಳೂರು, ಮೈಸೂರು, ಭದ್ರಾವತಿ ಮೊದಲಾದ ಊರುಗಳಲ್ಲಿ ರಾಮನವಮಿ ಕಛೇರಿಗಳ ಪ್ರಾಬಲ್ಯ ಬೆಳೆದಿದೆ. ಶ್ರೀರಾಮಚಂದ್ರನ ಹೆಸರಿನಲ್ಲಿ ನಡೆಯುವ ಸಂಗೀತ ವ್ಯಾಪಾರ ಒಂದು ಸ್ಥಿರಸಂಸ್ಥೆಯಾಗಿದೆ. ರಾಮನವಮಿ ಕಛೇರಿ ಮಾಡುವುದಕ್ಕೂ ದಕ್ಷಿಣದ ವಿದ್ವಾಂಸರೇ ಬರಬೇಕು. ಕಾಂಗ್ರೆಸ್ ಮತ್ತು ಖಾಸಗಿ ಸಂಸ್ಥೆಗಳು ನಡೆಸುವ ಪ್ರದರ್ಶನಗಳಲ್ಲಿಯೂ ದಕ್ಷಿಣಾದಿ ವಿದ್ವಾಂಸರೇ ಬಂದು ಹಾಡಬೇಕುನುಡಿಸಬೇಕು. ಆಲ್ ಇಂಡಿಯಾ ರೇಡಿಯೋ ಸಂಸ್ಥೆಯವರು ಪ್ರಾಂತೀಕರಣ ಮಾಡಿ ಆಯಾಭಾಗದ ವಿದ್ವಾಂಸರು ಆಯಾ ಭಾಗದಲ್ಲಿಯೇ ಹಾಡಬೇಕೆಂದು ವಿಧಾಯಕ ಮಾಡಿದ್ದಾರೆ. ಮೈಸೂರು ವಿದ್ವಾಂಸರು ಮದರಾಸು, ತಿರುಚಿ ನಿಲಯಗಳಲ್ಲಿ ಹಾಡಲು ಸಾಧ್ಯವಿಲ್ಲ. ಸಿನೇಮಾ ಸಂಗೀತ ದಿಗ್ದರ್ಶನ ಸಂಗೀತ ವಿದ್ವಾಂಸರವರೆಗೆ ಬರುವುದಿಲ್ಲ; ಸಂಗೀತ ಪಾಠಗಳೂ ಕೇವಲ ಸಿನೇಮಾ ಹಾಡುಗಳಿಗೇ ಮಾಸಲಾಗುತ್ತಿವೆ. .- ಈ ಪರಿಸ್ಥಿತಿಯಲ್ಲಿ ಕನ್ನಡ ನಾಡಿನ ಸಂಗೀತ ಬದುಕಿ ಬೆಳೆಯಬೇಕೆಂದರೆ ಹೇಗೆ ಸಾಧ್ಯ ? ಕನ್ನಡ ಸಂಗೀತ ವಿದ್ವಾಂಸರಿಗೆ ಉಳಿಗಾಲವೆಲ್ಲಿ ? ಕೆಲವು ಸಮಾಜಗಳ ವ್ಯವಸ್ಥಾಪಕರು, ರಾಮನವಮಿ, ವಸ್ತುಪ್ರದರ್ಶನ ವ್ಯವಸ್ಥಾಪಕರು ದಕ್ಷಿಣಾದಿ ಸಂಗೀತಗಾರರ ಪ್ರತಿನಿಧಿಗಳಾಗಿ ಸ್ಥಳೀಯ ವಿದ್ವಾಂಸರ ಹಿತಕ್ಕೆ ಧಕ್ಕೆ ತರುತ್ತಿರುವುದು ಅಕ್ಷಮ್ಯ ಅಪರಾಧವಾಗಿದೆ. ದಕ್ಷಿಣದಲ್ಲಿ ಖ್ಯಾತಿಗಳಿಸಿಕೊಂಡಿರುವ ಮೈಸೂರು ಸಂಗೀತ ವಿದ್ವಾಂಸರೇ ಈ ದುರ್ವಾಸಾರದ ಯಾಜಮಾನ್ಯ ವಹಿಸಿರುವುದು ಮತ್ತಷ್ಟು ಖಂಡನೀಯವಾಗಿದೆ. ಈ ಪರಿಸ್ಥಿತಿಯನ್ನು ಸುಧಾರಿಸುವುದು ಹೇಗೆ ? - ೧) ಕನ್ನಡನಾಡಿನ ಸಂಗೀತ ವಿದ್ವಾಂಸರಿಗೆ ಆಶ್ರಯಸ್ಥಾನವಾಗಿರುವಂತೆ ಸಂಗೀತ ಸಭೆಗಳನ್ನೇರ್ಪಡಿಸಬೇಕು. ದಿವಂಗತ ಶ್ರೀ ಎಚ್. ನರಸಿಂಗ ರಾಯರು, ಶ್ರೀ ಡಿ. ಸುಬ್ಬರಾಮಯ್ಯನವರು ಇಂಥ ಪ್ರಯತ್ನ ನಡೆಸಿ ಹತಾಶರಾದರು. ರಾಷ್ಟ್ರಪ್ರೇಮಿಗಳಾದ ಜನನಾಯಕರು ಮುಂದೆ ಬಂದು ಸುವ್ಯವಸ್ಥಿತ ರೀತಿಯಲ್ಲಿ ಕರ್ನಾಟಕ ಸಂಗೀತ ಸಮಾಜಗಳನ್ನು ಸ್ಥಾಪಿಸಿ ನಡೆಸಿಕೊಂಡು ಬರಬೇಕು.