ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೧೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೧೯ ಕೆ. ಹಿರಣ್ಣಯ್ಯ ಮೆಜಸ್ಟಿಕ್ ಸಿನೇಮಾಮಂದಿರದ ಟ್ರಾಲಿ ತಳ್ಳುತ್ತಿದ್ದ 'ಪೇಂಟರ್ ಹಿರಣಯ್ಯ' ನನ್ನು ಮರೆತಿಲ್ಲ. ಇಂದಿಗೂ ಪ್ರೊಪ್ರೈಟರ್ ಹಿರಣ್ಣಯ್ಯ ತಾವೇ ಕುಳಿತು ಕಂಪೆನಿಯ ಪ್ರಕಟನೆಯ ಬೇರು ಬರೆಯುತ್ತಾರೆ. ಕಂಪೆನಿಯಲ್ಲಿ ರಾಜಾ, ರಾಣಿ ಪಾರ್ಟು ಮಾಡುವವರಿಗೆ ಕೊಡುವ ಗೌರವ, ಸೌಲಭ್ಯವೇ ಸಾಮಾನ್ಯ ಸೇವಕನಿಗೂ ಸಿಕ್ಕುತ್ತದೆ. ಮೃಷ್ಟಾನ್ನ ಉಂಡರೆ ಎಲ್ಲರೂ ಉಣ್ಣಬೇಕು. ಉ ಪ ನಾ ಸ ನಿ ದ್ದ ರೆ ಎಲ್ಲರೂ ಇರಬೇಕು. ಹಿರಣ್ಣಯ್ಯನವರ ಕಂಪೆನಿ ಒಂದು ರಿಪಬ್ಲಿಕ್ ಆಫ್ ಡ್ರಮಾಟಿಕ್ ಆರ್ ಟ (Republic of Dramatic Art). ಹಿರಣ್ಣಯ್ಯನವರ ಮಿತ್ರ ಮಂಡಳಿಯಲ್ಲಿ ಇನ್ನೊಂದು ಅಚ್ಚರಿಯನ್ನು ನೋಡಬಹುದು. ಸಾಮಾನ್ಯವಾಗಿ ನಾಟಕದ ಕಂಪೆನಿಯ ನಟರು, ಹೋಟೆಲ್ ಮಾಣಿಗಳು, ಮುದ್ರಣಾಲಯದ ನೌಕರರು ಸದಾ ಸರ್ಕಿಟ್ ಮಾಡದಿದ್ದರೆ ಅವರ ಜೀವಕ್ಕೆ ನೆಮ್ಮದಿಯೇ ಇರುವುದಿಲ್ಲ. ಆದರೆ ಹಿರಣ್ಣಯ್ಯ ನವರು ಕಂಪೆನಿ ಸ್ಥಾಪಿಸಿದಾಗ ಬಂದು ಸೇರಿದ ನಟ, ನಟಿಯರು ಇನ್ನೂ ಇದ್ದಾರೆ. ಇದಕ್ಕೆ 'ಹಿರಣ್ಣ ಯ್ಯ ನ ವ ರು ತಮ್ಮ ಕಂಪನಿಯವರಲ್ಲಿ ಬೆಳೆಸಿಕೊಂಡಿರುವ ಹಾರ್ದಿಕ ವಿಶ್ವಾಸವೇ ಕಾರಣ. ಕಂಪೆನಿಯ ಜನ ಹಿರಣ್ಣಯ್ಯನವರಿಗೆ ನೌಕರರಲ್ಲ-ಮಿತ್ರರು. ಅವರದು ಮಾಮೂಲ್ ನಾಟಕ ಕಂಪನಿಯಲ್ಲ-ಮಿತ್ರ ಮಂಡಳಿ, ಹಿರಣ್ಣಯ್ಯನವರ ಮಿತ್ರ ಮಂಡಳಿಯಲ್ಲಿರುವ ಸೀತಾರಾಮರಾಯರು, ಅಚ್ಯುತರಾಯರು, ಚಿನ್ನಪ್ಪ, ಮುರಾರಾಚಾರ್, ಲಕ್ಷ್ಮಯ್ಯ, ಪಾರ್ಥ ಮೊದಲಾದ ನಟರೂ, ಬಳ್ಳಾರಿ ಲಲಿತಮ್ಮ, ಬಳ್ಳಾರಿ ರತ್ನಮಾಲಾ, ಬಳ್ಳಾರಿ ಯಶೋಧಾ, ಶ್ರೀಮತಿ ನಾಗರತ್ನಮ್ಮ, ಕುಮಾರಿ ಸರೋಜಾ ಮೊದಲಾದ ನಟಿಯರೂ ಕನ್ನಡನಾಡಿನಲ್ಲೇ ಹೆಸರಾ೦ತವರು. ಮಂಡಳಿಯ ನಟನಟಿಯರು ಸ್ವಪ್ರತಿಷ್ಠೆಗಿಂತ ನಾಟಕದ ರಸಸಿದ್ದಿ ಪ್ರಧಾನವಾದುದೆಂದು ಭಾವಿಸಿ ಪರಸ್ಪರ ಸಹಕರಿಸುವುದರಿಂದ ನಾಟಕಗಳು ಯಶಸ್ವಿಯಾಗಿ ಪ್ರೇಕ್ಷಕರಿಗೆ ಪೂರ್ಣಾನಂದವನ್ನು ಕೊಡುತ್ತವೆ. ಹಿರಣ್ಣಯ್ಯನವರ ಸರ್ವತೋಮುಖ ಹಾಸ್ಯಪ್ರತಿಭೆಗೆ ಜೀವನದಲ್ಲಿ ಅವರು ಅನುಭವಿಸಿದ ಕಷ್ಟವೂ ಕಾರಣವೆಂದರೆ ತಪ್ಪಾಗಲಾರದು. ಶ್ರಮಜೀವಿ