ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೧೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೨೦ ಕರ್ನಾಟಕದ ಕಲಾವಿದರು ಯಾಗಿ ಶ್ರಮಜೀವಿಗಳ ಜೀವನ, ಹೋರಾಟವನ್ನು ಕಂಡುಂಡ ಹಿರಣ್ಣಯ್ಯ ನವರು ನಗೆಯ ಕಾರಂಜಿಯನ್ನು ಚಿಮ್ಮುಸುತ್ತಿರುವಂತೆ ನಮ್ಮ ಅಂತಃ ಕರಣವನ್ನು ಕಲಕುತ್ತಾರೆ. ಸ್ಟೀಫನ್ ಲೀಕಾಕ್ ಹೇಳಿದಂತೆ ಜೀವನದ ವಿಪರ್ಯಾಸಗಳ ಅಂತಃಕರಣಪೂರ್ವಕ ವಿವೇಚನೆ ಮತ್ತು ಅವುಗಳ ಕಲಾತ್ಮಕ ನಿರೂಪಣೆಯೇ ಹಾಸ್ಯ.* ಮಾನವನ ಲೋಪದೋಷಗಳನ್ನು ಸಹೃದಯತೆ ಯಿಂದ ನೋಡಬಲ್ಲವನೇ ಉತ್ತಮ ಹಾಸ್ಯಕಾರ, ಉತ್ತಮವರ್ಗದ ಹಾಸ್ಯ ಕಾರ ಲೋಕದ ಕೊಂಕು ಡೊಂಕುಗಳನ್ನು ನಗೆಯಾಡುವುದು ಮಾತ್ರವೇ ಅಲ್ಲದೆ ತನ್ನ ಕೊಂಕು ಡೊಂಕುಗಳನ್ನೂ ನಗೆಯಾಡುತ್ತಾನೆ. “ ನಕ್ಕು ನಲಿವಾ ನಗೆ ಲೇಸು' ಎಂದು ಸರ್ವಜ್ಞ ಹೇಳಿದುದನ್ನೇ ಪ್ರಸಿದ್ದ ದಾರ್ಶನಿಕ ಹಾಬ್ ಒಪ್ಪಿಕೊಳ್ಳುತ್ತಾನೆ.+. ಹಾಸ್ಯ ನಾನಾರೀತಿಯಲ್ಲಿ ಹುಟ್ಟುತ್ತದೆ. ಶಬ್ದ ಪಲ್ಲಟ, ಭಾವಪಲ್ಲಟ, ಸನ್ನಿವೇಶ, ಪಾತ್ರಗಳಿಂದ ಹಾಸ್ಯವನ್ನು ನಿರ್ಮಾಣಮಾಡಬಹುದು. ಎಚ್ಚಮನಾಯಕ, ಸದಾರಮೆ, ಕಾಳಿದಾಸ, ಅನುಸೂಯಾ ನಾಟಕಗಳಲ್ಲಿ ಹಿರಣ್ಣಯ್ಯನವರು ತೋರುವ ಹಾಸ್ಯಕ್ಕೂ ದೇವದಾಸಿ, ಮಕ್ಕಲ್ ಟೋಪಿ, 'ಬಸವೇಶ್ವರ, ಪಂಗನಾಮ ನಾಟಕಗಳಲ್ಲಿ ತೋರುವ ಹಾಸ್ಯಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ದೇವದಾಸಿ ವೇಶ್ಯಾವಾಟ, ವೇಶ್ಯಾವೃತ್ತಿಗೆ ಸಂಬಂಧಿಸಿದ ನಾಟಕ. ಇದರಲ್ಲಿ ಹಿರಣ್ಣಯ್ಯ ಮಧ್ಯಸ್ಥಗಾರ ನಾಜೂಕಯ್ಯನ ಪಾತ್ರ 1 1 == 1

  • “Humour inay be defined as the kindly contemplation of the incongruities of life, and the artistic expression thereof."

-Stephen Leacock in “ Humour and Humanity? ".... The essence of humour is human kindliness." --Ibid “ Preface" S of “The passion of laughter is nothing else but a sudden glory arising from sudden conception of some eminency in ourselves, by comparison with the inferiority of others, or with our own formerly" ---Thomas Hobbs-quoted by Stephen Leacock.