ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೧೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೨೧ ಕೆ. ಹಿರಣ್ಣಯ್ಯ ನಿರ್ವಹಿಸುತ್ತಾರೆ. ' ನಾಜೂಕಯ್ಯನಂಥ ಮಧ್ಯಸ್ಥಗಾರನ ಪಾತ್ರ ಕನ್ನಡ ರಂಗಭೂಮಿಯ ಮೇಲೆ ಹೊಸದಲ್ಲ. ನಾಟಕ ಶಿರೋಮಣಿ ಎ. ವಿ. ವರದಾಚಾರ್ಯರು ಆಡುತ್ತಿದ್ದ ' ನಿರುಪಮಾ' ನಾಟಕದಲ್ಲಿ ಮದನಮಂಜರಿ ಮನೆಯಲ್ಲಿಯೂ ಇಂಥ ಒಬ್ಬ ವ್ಯಕ್ತಿ ಬರುತ್ತಿದ್ದ ; * ಗುಲೆಬಕಾವಲಿ' ನಾಟಕದಲ್ಲಿ ಬರುವ ವೇಶ್ಯಾಗೃಹದಲ್ಲಿಯೂ ಇಂಥ ಒಬ್ಬ ವ್ಯಕ್ತಿ ಬರುತ್ತಾನೆ. ನಿರೂಪನಾ, ಗುಬಕಾವಲಿ ನಾಟಕಗಳಲ್ಲಿ ಬರುವ ಮಧ್ಯಸ್ಥಗಾರರು ಆ ವೃತ್ತಿಯ ಒಂದು ಚಿತ್ರ ; ಹಿರಣ್ಣಯ್ಯನವರ ನಾಜೂಕಯ್ಯ ವೃತ್ತಿಯ ವಿಮರ್ಶಕ, ಮಣಿಮಂಜರಿಯಂಥ ಅಜ್ಞಯರನ್ನು ವೇಶ್ಯಾವೃತ್ತಿಗೆ ಎಳೆದು ಅವರ ಪಾಪದ ಗಳಿಕೆಯಿಂದ ಮೆರೆಯುವವನು ನಾಜೂಕಯ್ಯ. ಪ್ರೇಮ, ಅಂತಃಕರಣ, ಆತ್ಮಗೌರವ, ಮಾನವಧರ್ಮ ಎಲ್ಲವನ್ನೂ ಧನಪಿಶಾಚಿಯ ಪೂಜಾಮಂದಿರದಲ್ಲಿ ಬಲಿಗೊಟ್ಟು ತದೇಕ ಭಕ್ತಿಯಿಂದ ಧನಪೂಜೆ ಮಾಡುವ ಮ ನೋ ಭಾ ವ ದ ರುದ್ರ ವ್ಯಕ್ತಿ ನಾಜೂಕಯ್ಯ, ತನ್ನ ಸೂತ್ರದ ಗೊಂಬೆಯಾದ ಮಣಿಮಂಜರಿಯನ್ನು ಅವನು ವರ್ಣಿಸುತ್ತಾನೆ " ಜಗದಾದಿದೇವತೆಯ ! ಪ್ರತಿರೂಪವೋ ಎಂಬ ರುಣರುಣದ 1 ರೂಪಾಯಿಯವಳ ಗಂಡ || ಬಯಸಿದಾಶಯ ಸಲಿಸಿ | ಬ್ರಹಾಂಡದೊಳು ಮರನ | ಬೆಳ್ಳಿ ರೂಪಾಯಿ 1 ಯವಳ ಗಂಡ || ಕಲಹ ಕಾರಣ ಸರ್ವ ಕಾರ್ಯ ಸಾಧನ ತ್ರಾಣ ! ಗುಣಪೂರ್ಣ 1 ರೂಪಾಯಿಯವಳ ಗಂಡ 11 ಇನ್ನು ನಾಶನಗೈದು ಇರದೆ ಚಿಂತೆಯ ತರುವ ! ಇಬ್ಬಂದಿ ರೂಪಾಯಿಯವಳ ಗಂಡ | ನಾಜೂಕಯ್ಯ ಸರ್ವ ದುರ್ಗುಣಸಂಪನ್ನ ! ಚೈತ್ರ, ವಸಂತರು ಕಾಮದೇವನ ಎಡಬಲದಲ್ಲಿ ಸದಾ ಇರುವಂತೆ ವೇಶ್ಯಾವೃತ್ತಿಯ ಜತೆಯಲ್ಲಿ ಮ್ಯೂತ, ಸುರಾಪಾನಗಳಿದ್ದೇ ಇರಬೇಕು. ನಾಜೂಕಯ ಎರಡರಲ್ಲಿಯೂ ಪಾರಂಗತ, ಸುರಾಪಾನದ ಪ್ರಭಾವವನ್ನು ಅವನು ವರ್ಣಿಸುವ ವೈಖರಿಯೇ ವೈಖರಿ.