ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೧೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೨೨ ಕರ್ನಾಟಕದ ಕಲಾವಿದರು “ ಸುಖವೀನ ಸುರಪಾನವಿದ ಸ್ವರ್ಗಸಮಾನಂ | ತೆಗೆದಾಡಿಸಿ ತಲೆದೂಗುತೆ ತಡಕಾಡಿನ ನಾನಂ 1 ತನುತಂ ಪಿನ ಪಾನಂ | ೧ | ಸುನಾರಿಯ ತಲೆಹಾರಿಸಿ ಸರಿದೋಡಿದ ಜ್ಞಾನಂ | ನರಳಲೋಕದೊಳ್ಳೆಳಲದಿರುವೀ ಅಮೃತಪಾನಂ । ಬರಿಮಾತಿನ ಜನರೆತರಿವರು ನಿನ್ನ ಭಿಮಾನಂ | ಸರ್ಕಾರದ ವರಮಾನದೊಳಿದಕುತ್ತ ಮ ಸ್ಥಾನಂ | ನಮ್ಮಿಂಡಿಯದೊಳಗೆಲ್ಲರಿಗಿದು ದೈವಸಮಾನಂ || ೨ || ನಶ್ವರ ಸಂಸಾರದ ವ್ಯಾಮೋಹವ ಮರೆಸಿ ! ನೇತೃಯ ಸುಖಜಾಲದ ಬರಿಮಾಯೆಯೊಳಿರಿಸಿ | ಮನೆಮಠಗಳ ಮಾರಿಸಿ ಮನದಾತೆಯ ಮುಗಿಸಿ | ಕರಗುಳಿದಾಸಾಲಕೆ ಸಂನ್ಯಾಸನ ಕೊಡಿಸಿ ! ಬಹುರೋಗದ ಋಣ ಬಾಧೆಯೋಳಿ 1 ಪಾಣವ ಬಿಡಿಸಿ | ಪರಲೋಕಕ್ಕೆ ಕರೆದೊಯ್ಯುವ ಬಹು ಸುಲಭ ವಿಧಾನ: ನಾಜೂಕಯ್ಯನ ಜೀವನ ದುರಂತದಲ್ಲಿ ಪರಿಣಾಮ ಹೊಂದುವುದು ಅನಿವಾರ್ಯ: ತನ್ನನ್ನು ನಂಬಿದ್ದ ಮಣಿಮಂಜರಿಯನ್ನೂ ಅವಳನ್ನು ನಂಬಿದ್ದ ವಸಂತಶೇಖರನನ್ನೂ ಕೊಲೆ ಮಾಡಿ ಹಣದ ಪೆಟ್ಟಿಗೆಯನ್ನು ಹಾರಿಸಿಕೊಂಡು ನಾಜೂಕಯ್ಯ ಪರಾರಿಯಾಗುವ ಪ್ರಯತ್ನ ಮಾಡಿದಾಗ ಪೋಲೀಸಿನವರ ಕೈಗೆ ಸಿಕ್ಕಿಬೀಳುತ್ತಾನೆ. ಅವನಿಗೆ ಮರಣದಂಡನೆಯಾಗುತ್ತದೆ. ನಾಜೂಕಯ್ಯ ಕೊನೆಯಲ್ಲಿ ಆಡುವ ಮಾತುಗಳಲ್ಲಿ ಹಿರಣ್ಣಯ್ಯನವರು ಜೀವನವಿಮರ್ಶೆ ಯನ್ನು ಅತ್ಯಂತ ಮಾರ್ಮಿಕವಾಗಿ ಮಾಡಿದ್ದಾರೆ ( (ಈ ಲೋಕದ ಪಾಸಿಗಳಿಗೆ' ನಾನೇನನ್ನೂ ತಿಳಿಸಬೇಕಾಗಿಲ್ಲ. ನನ್ನನ್ನು ಯಾರಾದರೂ 'ಪಾಪಿಷ್ಠ'ನೆಂದು ಕರೆಯುವವರಿದ್ದರೆ ಅಂತಹ “ಪುಣ್ಯಾತ್ಮರು' ಮಾತ್ರ ಅವರವರ ಹಿನ್ನೆಲೆಯಲ್ಲಿ ಅಡಕವಾಗಿರುವ 'ಪುಣ್ಯದ ತೆರೆಗಳನ್ನು ಅವರವರೇ 'ಒಂದೊಂದಾವರ್ತಿ' ತೆರೆದು ನೋಡಿಕೊಳ್ಳಲಿ. ಆಗ ನನ್ನ ಆಶೋತ್ತರಗಳಿಗೆ ಅವಕಾಶವೇ ಬೇಕಿಲ್ಲ. ನಾವು ಆಶೆಪಡುವಂತೆ ಸುಖ ವಿಲಾಸಗಳು ಅಷ್ಟೊಂದು ಸುಲಭವಾಗಿ ಸಿಕ್ಕುವಹಾಗಿದ್ದಿದ್ದರೆ ಈ ಕಲಿಯುಗ Aಶ.