ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೧೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

1. ಹಿರಣ್ಣಯ್ಯ ೧೨೩ ಪಲ್ಲಿ ಭಗವಂತನೆಂಬ ಪುಣ್ಯ ಮೂರ್ತಿಯು ಬಂಡೆಗಳ ಮೇಲೂ, ಬೆಟ್ಟಗಳ ಮೇಲೂ ಬಯಲಾಡಂಬರದ ಪೂಜಾ ವಿಧಾನಗಳಿಗೆ ಬಲಿಯಾಗಿ ಒಂದಾಣೆಯ ಹಣ್ಣು ಕಾ ಯಿ ಗ ಳಿ ಗೂ ಕಾಲಾಣೆಯ ಕರ್ಪೂರಕ್ಕೂ ತಿರುಪಯವನಂತ ಕೈಯೊಡ್ಡಿ ಹಲ್ಲು ಕಿರಿಯುತ್ತೆ ಕಣ್ಣು ಮುಚ್ಚಿಕೊಂಡು ಕಲ್ಲಾಗಿ ಕುಳಿತುಕೊಳ್ಳ ಬೇಕಾದ ಕಾರಣವೇ ಇರಲಿಲ್ಲ. ಜಗದೀಶ್ವರನ ಲೀಲಾ ಚಿ ತ ಗ ಳಲ್ಲಿ ಅನ್ಯಾಯದ ವಿಚಿತ್ರಗಳಿಗೆ ಸ್ಥಳವೇ ಇರುತ್ತಿರಲಿಲ್ಲ. ಸಮತ್ವ ತತ್ತ್ವದಿಂದ ಸೃಷ್ಟಿಸಲ್ಪಟ್ಟಿರುವ ಈ ಜಗತ್ತಿನಲ್ಲಿ ಜನರು 'ಸಮಾಜ'ವೆಂಬ ಹೆಸರಿನಿಂದ ಮುಂದೆ ಬಂದು ತೊಂಬತ್ತು ಜನ ಬಡವರ ಬೆವರಿನ ಕಷ್ಟಾರ್ಜಿತವಾದ ದನಿಗಳನ್ನು ಒಂದುಗೂಡಿಸಿ ಕುಡಿಯುತ್ತ ಅವರ ಮಧ್ಯದಲ್ಲಿಯೇ ಹತ್ತು ಜನ ಶ್ರೀಮಂತರಾಗಿ ಮೆರೆಯಬೇಕಾಗಿರಲಿಲ್ಲ. ಅಧಿಕಾರಿ ಸೇವಕರೆಂಬ ಅಂತಸ್ತು ಗಳನ್ನು ವಿಂಗಡಿಸಿ, ಬಡವರು ಭಾಗ್ಯವಂತರು ಎಂಬ ಭೇದಗಳನ್ನು ಕಲ್ಪನೆ ಮಾಡಿ, ಮೇಲ್ಪಾತಿ ಕೀಳಾತಿಗಳೆಂಬ ತಾರತಮ್ಯಗಳ ಭೂತಕ್ಕೆ ಬಲಿಗೊಟ್ಟು ಉಪ್ಪರಿಗೆಗಳ ವೈಭವದಲ್ಲಿ ಸುಖದ ವಿಪರೀತಗಳನ್ನು ಚಪ್ಪರಿಸುತ್ತ, ನಕ್ಕು ನಲಿದಾಡಿ, ವಂಚನೆಯೆಂಬ ಮಂಚದಮೇಲೆ ಕುಳಿತು ಪುಣ್ಯವಂತರೆಂಬ ಹೊದ್ದಿಕೆಯನ್ನು ಹೊದ್ದು ಕೊಂಡು “ ಅನ್ನದಾತ 'ರೆಂಬ ಬಿರುದು ಬಾವಲಿಗಳನ್ನು ತಲೆಬಾಗಿಲಿನಲ್ಲಿ ತಗಲುಹಾಕಿ, ಕದ ಮುಚ್ಚಿಕೊಂಡು ಒಳಗೆ ಮೃಷ್ಟಾನ್ನ ತಿಂದು, ಬದುಕಿದ ಮಾತ್ರಕ್ಕೇ ಹೃದಯಮಂದಿರದಲ್ಲಿಯೇ ಕಳ್ಳನಂತೆ ಕುಳಿತು ಎಲ್ಲವನ್ನೂ ನೋಡುತ್ತಿರುವ ಪರಮಾತ್ಮನ ' ದೃಷ್ಟಿಯಿಂದ ಯಾರೂ ತಪ್ಪಿಸಿಕೊಳ್ಳಲಾರರು. * ಕೊಲೆಪಾತಕ 'ನೆಂದು ತೀರ್ಮಾನಿಸಿ ನನ್ನೊಬ್ಬನನ್ನು ಕೊಂದಮಾತ್ರಕ್ಕೆ ಏನು ಮಾಡಿದಂತಾಯಿತು ? ಒಂದು ' ಚಾಟ್ಟು ' ಸುರೆ '-' ಒಬ್ಬಳು ವ್ಯಭಿಚಾರಿಣಿ '-ಒಂದು ಇಸ್ಪೀಟ್ ಪ್ಯಾಕ್' ಈ ಮೂರು ವಸ್ತುಗಳನ್ನು ಕೊಂದಲ್ಲದೆ ನನ್ನಂತಹ, ಮೂವತ್ತು ಮೂರು ಕೊಟ ಜನರನ್ನು ' ಕೊಂದರೆ ' ತಾನೆ ಪ್ರಪಂಚವನ್ನು ಉದ್ಧಾರಮಾಡಿ ದಂತಾಗುವುದೆ ? ಇನ್ನು ಮುಂದಾದರೂ ಸಮಾಜದ ಹಿರಿಯರು ವಿಶ್ವಶಾಂತಿಗಾಗಿ ದುಡಿಯಲು ಬದ್ಧ ಕಂಕಣರಾದರೆ ನನ್ನಂತಹ ನಿರ್ಭಾಗ್ಯಜೀವಿಯ ನಿರ್ದಾಕ್ಷಿಣ್ಯ ವಾದ ಪ್ರಶ್ನೆಗೆ ಸಮಾಜದಲ್ಲಿ ' ಧರ್ಮಬದ್ದವಾದ ನ್ಯಾಯವು ದೊರೆಯುವು ದಾದರೆ ' ಅಂತಹ ಮಹಾತ್ಮರಿಗೆ ವಂದಿಸುವ ಸಲುವಾಗಿ ಪ್ರಾಣ ಕೊಡುವನು.”