ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೧೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕೆ. ಹಿರಣ್ಣಯ್ಯ ೧೨೫ 'ಜಗಜ್ಯೋತಿ ಬಸವೇಶ್ವರ' ನಾಟಕದಲ್ಲಿ ಹಿರಣ್ಣಯ್ಯನವರು ತೋರುವ ಹಾಸ್ಯದ ಬಗೆಯೇ ಬೇರೆ. ಮೂಲ ನಾಟಕದಲ್ಲಿ ಹಾಸ್ಯಕ್ಕೆ ಅವಕಾಶವಿಲ್ಲ. ನಾಟಕದ ಕಂಪನಿಯವರು ವಿವಿಧಾಭಿರುಚಿಯುಳ್ಳ ಪ್ರೇಕ್ಷಕ ವರ್ಗವನ್ನು ತಣಿಸ ಬೇಕಾದ ಪರಿಸ್ಥಿತಿ ಇರುವುದರಿಂದ ಹಿರಣ್ಣಯ್ಯನವರು ಒಂದು ಉಪಕಥಾ ಭಾಗವನ್ನು ನಾಟಕಕ್ಕೆ ಜೋಡಿಸಿಕೊಂಡರು. ನೀಚ ದೇವತೆಗಳ ಉಪಾಸನಾ ಸಕ್ಕನಾದ ಒಬ್ಬ ಆಯುರ್ವೇದ ಪಂಡಿತ. ಅವನು ಸಹಜಗುಣಾನುಗುಣವಾಗಿ ಬಸವಣ್ಣನ ವಿರುದ್ದ , ಹುಯಿಲುಮಾಡುತ್ತಿದ್ದ ಮಂಚಣ್ಣಪಂಡಿತ ಪೆದ್ದ ರಸರ ಪಕ್ಷ ಸೇರುತ್ತಾನೆ. ಮದ್ದು, ಮಾಟ, ವಿಷಪ್ರಯೋಗ, ಅಪಪ್ರಚಾರಗಳ ಮೂಲಕ ಬಸವಣ್ಣನನ್ನು ಮಟ್ಟ ಹಾಕಲೆತ್ನಿಸುತ್ತಾನೆ. ಕೊನೆಗೆ ವಿಫಲ ಮನೋರಥನಾಗಿ ಬಸವಣ್ಣನ ದಿವ್ಯಗುಣಕ್ಕೆ ಮಾರುಹೋಗಿ ಅವನ ಅನುಯಾಯಿಯಾಗುತ್ತಾನೆ. ಪಂಡಿತನ ಪಾತ್ರದಲ್ಲಿ ಹಿರಣ್ಣಯ್ಯನವರು ಹಾಸ್ಯದ ಒಂದು ವಿಶೇಷ ಪ್ರಯೋಗ ನಡೆಸಿದ್ದಾರೆ. ಪಂಡಿತನ ಹೆಂಡತಿ ಸುಹೃದಯ ಜೀವಿ, ನುಗ್ಗೆ, ಅವಳೂ ಬಸವನ ಭಕ್ತಳಾಗಿ ಬಸವಣ್ಣನ ದರ್ಶನಕ್ಕೆ ಪೂಜಾ ಸಾಮಗ್ರಿಗಳನ್ನು ಹಿಡಿದು ಹೊರಟಿದ್ದಾಳೆ. ಸಾಕ್ಷಾತ್ ಪರಮೇಶ್ವರನೇ ಬಂದು ಬಸವಣ್ಣನಿಗೆ ಲಿಂಗಾಧರಣೆ ಮಾಡಿದ ಕೌತುಕವನ್ನು ಗಂಡನಿಗೆ ಅಭಿಮಾನಪೂರ್ವಕವಾಗಿ ಹೇಳುತ್ತಾಳೆ. ಪಂಡಿತ ಮಾತಿನ ಮಾಲೆ ಯನ್ನೇ ನೇಯ್ತು ' ನಾನು ಇದೇ ಈಗ ಸ್ವರ್ಗಲೋಕದಿಂದ ಬರುತ್ತಿದ್ದೇನೆ. ಇಂದ್ರ ಹೇಳಿ ಕಳಿಸಿದ್ದ. ಅವನಿಗೂ ಅವನ ಹೆಂಡತಿಯರಿಗೂ ಹುಟ್ಟಿದ್ದ ವೈಮನಸ್ಯ ಪರಿಹರಿಸಿ, ಅವನ ಆಸ್ತಿ ವಿಭಾಗ ಮಾಡಿಸಿ ಊರಿಗೆ ಹೊರಟೆ. ಕೂಡಲೆ ಯಮ ಹೇಳಿಕಳಿಸಿದ. ಅವನ ದರ್ಶನ ಮಾಡಿಕೊಂಡು ಬಂದೆ. ಪ್ರವಾಸದಿಂದ ನನಗೆ ಕಂಡು ಬಂದದ್ದು ಭೂಲೋಕದ ಸುಖ ಸ್ವರ್ಗದಲ್ಲಿ ಸ್ವಲ್ಪವೂ ಇಲ್ಲವೆನ್ನುವುದು, ಪಂಡಿತನ ಹೆಂಡತಿ ಗಂಡನ ವೃತ್ತಾಂತವನ್ನು ನಂಬಲೊಪ್ಪದೆ ' ಎಲ್ಲಿಯಾದರೂ ಉಂಟೇ ? ನೀವೂಂದರೇನು, ಸ್ವರ್ಗಕ್ಕೆ ಹೋಗಿ ಬರುವುದೂಂದ್ರೇನು ?' ಎನ್ನುತ್ತಾಳೆ. ಪಂಡಿತ ಅವಳಿಗುತ್ತರಿಸುತ್ತಾ " ನಿನ್ನ ಮುಂದೆ ಗುಂಡುಕಲ್ಲಿನ ಹಾಗೆ ನಿಂತು ನಾನೇ ಹೇಳುತ್ತಿದ್ದರೂ ಸ್ವರ್ಗಕ್ಕೆ ಹೋಗಿ ಬಂದುದು ಸುಳ್ಳು ಎನ್ನುವೆಯಲ್ಲಾ ? ಕೈಲಾಸದಿಂದ ಶಿವ ಬಂದು ಬಸವಣ್ಣನಿಗೆ ಲಿಂಗಧಾರಣೆ ಮಾಡಿಸಿದ ಎನ್ನುವುದನ್ನು ಹೇಗೆ ನಂಬುವೆ ” ಎಂದು ಕೇಳುತ್ತಾನೆ. ವಸ್ತುವನ್ನು