ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮುನ್ನುಡಿ xiii ೨) ಕನ್ನಡ ನಾಡಿನ ಪ್ರತಿಯೊಂದು ಮುನಿಸಿಪಾಲಿಟಿಯೂ ಪ್ರತಿವಾರ ಸಾರ್ವಜನಿಕರಿಗಾಗಿ ಉಚಿತ ಕಛೇರಿಗಳನ್ನೇರ್ಪಡಿಸಿ, ಸಂಗೀತ ವಿದ್ವಾಂಸರಿಗೆ ಪ್ರೋತ್ಸಾಹ ಕೊಡಬೇಕು. ಗಾಯನ ಸಮಾಜದವರು, ವ್ಯಾಪಾರಿ ಸಂಸ್ಥೆಯವರು ಏರ್ಪಡಿಸುವ ಸಂಗೀತ ಕಛೇರಿಗಳ ಶುಲ್ಕ ತೆತ್ತು ಸಂಗೀತ ಕೇಳುವುದು ಶ್ರೀಮಂತರಿಗೆ ಮಾತ್ರ ಸಾಧ್ಯ. ಮಧ್ಯಮ ವರ್ಗದವರು, ಶ್ರಮಜೀವಿಗಳು ಈ ಸಂಸ್ಥೆಗಳು ವಿಧಾಯಕ ಮಾಡುವ ಶುಲ್ಕ ತೆರುವುದು ಸಾಧ್ಯವೇ ಇಲ್ಲ. ಅಂಥ ಜನ ಸಂಗೀತದಿಂದ ವಂಚಿತರಾಗಬೇಕೇ ? ೩) ರಾಮನವಮಿ ಉತ್ಸವಗಳು, ವಸ್ತುಪ್ರದರ್ಶನಗಳಲ್ಲಿ ಕನ್ನಡಿಗರ ಹಣ ಸೆಳೆದು ಹೊರಗಿನವರ ಬೊಕ್ಕಸ ತುಂಬುವ ವ್ಯಾಪಾರ ನಿಲ್ಲಿಸಬೇಕು. ಅಂಥ ಕ ಛೇ ರಿ ಗ ಳಿ ಗೆ ಸಾರ್ವಜನಿಕರು ಯಾವ ಪ್ರೊತ್ಸಾಹವನ್ನೂ ಕೊಡಬಾರದು. * ೪) ಊರಿನ ಜನ ಸ್ವಲ್ಪ ಸ್ವಾಭಿಮಾನ ಬೆಳಸಿಕೊಂಡು ಮದುವೆಯ ಸಮಾರಂಭಗಳಲ್ಲಿ, ಸತ್ಕಾರಕೂಟಗಳಲ್ಲಿ ನಡೆಯುವ ಕಛೇರಿಗಳ ಅವಕಾಶವನ್ನು ಸ್ಥಳೀಯ ವಿದ್ವಾಂಸರಿಗೆ ಕೊಡಬೇಕು. * ೫) ಕನ್ನಡನಾಡಿನ ಪತ್ರಿಕೆಗಳು ಈ ಪ್ರಶ್ನೆಯನ್ನೆತ್ತಿಕೊಂಡು ಸ್ಥಳೀಯ ವಿದ್ವಾಂಸರ ಹಕ್ಕು ಬಾಧ್ಯತೆಗೆ ಹೋರಾಡಬೇಕು. ೬) ಮೈಸೂರ ಅರಮನೆ ವ್ಯವಸ್ಥೆ ಮಾಡಿದ್ದಂತೆ ಸರ್ಕಾರ ಸ್ಥಳೀಯ ಸಂಗೀತ ವಿದ್ವಾಂಸರಿಗೆ, ಕಲಾವಿದರಿಗೆ ಗೌರವ ಮಾಶಾಸನ ಕೊಟ್ಟು ಸಂರಕ್ಷಿಸಬೇಕು. ೭) ಸಾರ್ವಜನಿಕರಲ್ಲಿ ಸಾಕಷ್ಟು ಜಾಗೃತಿಯನ್ನುಂಟುಮಾಡಿ ಅವರಲ್ಲಿ ಸ್ವಾಭಿಮಾನ ಹುಟ್ಟುವಂತೆ ಮಾಡಬೇಕಾದುದು ನಾಡಿನ ವಿದ್ವಜ್ಜನರ ಕರ್ತವ್ಯವಾಗಿದೆ. ಕನ್ನಡನಾಡಿನ ಸಂಗೀತ ವಿದ್ವಾಂಸರಲ್ಲಿಯೇ “ಯಾವ ಸಂಘಟನೆಯೂ ಇಲ್ಲದಿರುವುದು ಅವರ ಪುರೋಭಿವೃದ್ಧಿಗೆ ಕಂಟಕವಾಗಿದೆ, ತಮ್ಮ ಹಿತ, ಆತ್ಮಗೌರವ, ವಿದ್ಯಾ ಮರ್ಯಾದೆಗಳನ್ನು ಕಾಪಾಡಿಕೊಳ್ಳುವು ದಕ್ಕಾದರೂ ಕನ್ನಡ ಸಂಗೀತ ವಿದ್ವಾಂಸರು ಒಂದುಗೂಡಬೇಕು. ತಮ್ಮ ತಮ್ಮ ಶಿಷ್ಯರ, ಭಕ್ತರ ಸಣ್ಣ ಪುಟ್ಟ ಗುಂಪು ಕಟ್ಟಿಕೊಂಡು, ಇತರ ವಿದ್ವಾಂಸರನ್ನು ನಿಂದೆ ಮಾಡಿಕೊಂಡು ಕಾಲತಳ್ಳುವ ಮನೋಭಾವವನ್ನು ಸಂಗೀತ