ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೧೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕೆ. ಹಿರಣ್ಣಯ್ಯ ೧೨೭ ಫಾರ್ಸುಗಳಲ್ಲಿ ಸಾಮಾನ್ಯವಾಗಿ ಕಥಾವಸ್ತುವನ್ನು ಯಾರೂ ಬುದ್ಧಿಯ ಮಾನದಂಡದಿಂದ ಅಳೆಯುವುದಿಲ್ಲ. ಸಾಂಟಿಸ್ನ ಡಾನ್ ಕ್ವಿಕ್ಕಟ್, ಸ್ವಿಘ್ನನ ಗಲಿವರ್ ಟ್ರಾವಲ್ಸ್, ಸಾಮ್ಯುಯಲ್ ಬಟ್ಲರನ ವಿರಾನ್, ಗೋಲನ ರ್ಇಸ್ಪೆಕ್ಟರ್ ಜನರಲ್ ಮೊದಲಾದ ಲೋಕವಿಖ್ಯಾತ ಕೃತಿಗಳನ್ನು ವಿವೇಚನೆಯ ಕಸೋಟೆಯ ಮೇಲೆ ಉಜ್ಜಿ ನೋಡಿದರೆ ಉಳಿಯುವುದೇನು ? ಪಂಗನಾಮದ ವಸ್ತು ಇರುವಂತೆ ಪ್ರೇಕ್ಷಕ ಒಪ್ಪಿಕೊಂಡರೆ ಅದರ ರಸಾಸ್ವಾದನ ಮಾಡಲು ಸಾಧ್ಯ. ಹಿರಣ್ಣಯ್ಯನವರು ಸಾಮಾನ್ಯವಾಗಿ ತಮ್ಮ ಎಲ್ಲಾ ನಾಟಕಗಳಲ್ಲಿಯೂ ಆಧುನಿಕ ವಿದ್ಯಾವತಿಯರನ್ನು ಅವಹೇಳನ ಮಾಡುತ್ತಾರೆಂಬ ಆಕ್ಷೇಪವೂ ಅವರ ಮೇಲಿದೆ. ಇದು ಕೈಲಾಸಂ ಅವರಿಂದ ಕಲಿತ ಚಾಳಿ ಎಂಬುದನ್ನು ಒಪ್ಪಿಕೊಳ್ಳಬೇಕು. ಆಧುನಿಕ ವಿದ್ಯಾವತಿಯರಲ್ಲಿ ರಾಷ್ಟ್ರಾಭಿಮಾನಿಗಳೂ, ಕಲಾಪರಿಣತಮತಿಗಳೂ, ಉತ್ತಮ ಸಾಹಿತಿಗಳೂ, ಯೋಗ್ಯ ಗೃಹಿಣಿಯರೂ ಇದ್ದಾರೆಂಬುದನ್ನೂ ನಾಟಕಕಾರರು, ನಾಟಕ ಪ್ರದರ್ಶಕರು ನೆನಪಿನಲ್ಲಿಟ್ಟು ಕೊಳ್ಳಬೇಕು. ಭಾರತೀಯ ಮಹಿಳೆಯರ ಸರ್ವತೋಮುಖ ಪ್ರಗತಿಗೆ ಆಧುನಿಕ ಶಿಕ್ಷಣ ಪದ್ಧತಿ ಸ್ವಲ್ಪವೂ ಸಹಾಯಕವಾಗಿಲ್ಲವೆಂಬುದು ಸತ್ಯವಾದರೂ ಆಧುನಿಕ ಶಿಕ್ಷಣ ಪದ್ಧತಿಯ ಲೋಪದೋಷಗಳನ್ನ ತಿಕ್ರಮಿಸಿ ತಮ್ಮ ಬಾಳ್ವೆ ಯನ್ನೇ ಮಾದರಿ ಮಾಡಿ ತೋರಿಸಿರುವ ಮಹಿಳೆಯರೂ ಇದ್ದಾರೆ. ಅಂಥವರ ಚಿತ್ರೀಕರಣ ರಂಗಭೂಮಿಯ ಮೇಲೆ ಅಗತ್ಯ. ಗಂಡಂದಿರನ್ನು ಕಾಡುವ ಹೆಂಡಂದಿರನ್ನೂ, ಮನೆಯನ್ನು ಮಸಣವನ್ನಾಗಿಸುವ ಮಾನಿನಿಯರನ್ನೂ, ಅಲ್ಪ ಆಸೆ ಆಮಿಷಗಳಿಗೆ ತುತ್ತಾಗುವ ಕೋಮಲಾಂಗಿಯರನ್ನೂ ನಾವು ನೋಡಿದ್ದೇವೆ ರಂಗಭೂಮಿಯಲ್ಲಿ, ಲೋಕಜೀವಿಯಾಗಿ ಲೋಕದ ಕಷ್ಟ ಸುಖಗಳಲ್ಲಿ ಭಾಗಿಯಾಗಿ, ಜೀವನದಲ್ಲಿ ಉನ್ನತಾದರ್ಶ ಪಡೆದು ಅದನ್ನು ಸಾಧಿಸಲೆತ್ನಿಸುವ ಸಾಧಿಕೆಯರನ್ನು ನಾವು ನೋಡಬೇಕಾಗಿದೆ. ಹಿರಣ್ಣಯ್ಯ ನವರ ಲಕ್ಷವೂ ಅತ್ತ ತಿರುಗಬೇಕಾದುದವಶ್ಯಕ. ಇದರಲ್ಲಿ ಹಿರಣ್ಣಯ್ಯನವರು ಬಳಸುವ ಹಾಸ್ಯ ಗಮನಿಸುವಂಥದ್ದಾಗಿದೆ. ಸುರೇಖಾ ಗಹನ ಪ್ರಶ್ನೆಗಳನ್ನು ಕೇಳುತ್ತಿರುತ್ತಾಳೆ. ಪ್ರಾಣೇಶಾಚಾರಿ ಗಂಭೀರ ವಾಗಿ ಅವುಗಳಿಗೆ ಉತ್ತರ ಕೊಡುತ್ತಲೂ ಇರುತ್ತಾನೆ. ಅವನಿಗೆ ಥಟ್ಟನೆ ತನ್ನ