ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೧೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೩೦ ಕರ್ನಾಟಕದ ಕಲಾವಿದರು ತಾಯಿ ಅಂಬಾಬಾಯಿ ಹುಟ್ಟು, ಸಂಗೀತಗಾರ್ತಿಯಾಗಿದ್ದರು. ರಾಯಚೂರಿನ ಇಮಾಂ ಸಾಹೇಬ್ ಎಂಬ ವಿದ್ವಾಂಸರಲ್ಲಿ ಅಂಬಾಬಾಯಿ ಕರ್ನಾಟಕ ಸಂಗೀತ ಮೊದಲು ಅಭ್ಯಾಸ ಮಾಡಿದರು. ತಾಯಿಯೇ ಗಂಗೂಬಾಯಿಯವರ ಪ್ರಥಮ ಗುರುಗಳು. ಸಂಗೀತ ಶಿಕ್ಷಣದೊಂದಿಗೆ ಶಾಲಾಶಿಕ್ಷಣವೂ ಆರಂಭವಾಯಿತು. ಕನ್ನಡ ಐದನೆಯ ಇಯತ್ತೆಯ (ಕಾಸು) ವರೆಗೆ ಓದು ಸಾಗಿತು. ಈ ದೆಸೆಯಲ್ಲಿ ಗಂಗೂಬಾಯಿಯವರ ಕರ್ನಾಟಕ ಸಂಗೀತವನ್ನು ಶ್ರೀ ದೇಸಾಯ್ ದತ್ತೋಪಂತರ ಮನೆಯಲ್ಲಿ ಕೇಳಿದ ಖಾನ್ ಸಾಹೇಬ್ ಅಬ್ದುಲ್ ಕರೀಂಖಾನ ರವರು ' ತಂಜಾವೂರಿನ ಸಂಗೀತ ಕೇಳಿದಂತಾಯಿತು' ಎಂದು ತಮ್ಮ ಮೆಚ್ಚಿಗೆಯನ್ನು ವ್ಯಕ್ತಪಡಿಸಿ, ತೀರ ಬಡಕಲಾಗಿದ್ದ ಗಂಗೂಬಾಯಿಯವರಿಗೆ (ಬೂಬ್ ಖಾನಾ-ಟ್ಯೂಬ್ ಗಾನಾ' ಎಂದು ಸಂದೇಶವಿ ರು. ಉತ್ತರ ಕರ್ನಾಟಕದಲ್ಲಿ ದಕ್ಷಿಣಾದಿ ಪದ್ದತಿಯ ಸಂಗೀತಕ್ಕೆ ಪ್ರೋತ್ಸಾಹ ವಿಲ್ಲ. ಕೇಳುವವರೂ ಇಲ್ಲ, ಕಲಿಸುವವರೂ ಇಲ್ಲ. ಅಲ್ಲಿ ಪ್ರಸಾರದಲ್ಲಿದ್ದ ಔತ್ತರೇಯ ಮಾರ್ಗವನ್ನೇ ಮಗಳು ಅನುಸರಿಸಲೆಂದು ತಾಯಿ ಗಂಗೂಬಾಯಿ ಯವರಿಗೆ ಕಿನ್ನರಿವಿದ್ವಾನ್ ಹುಲಗೂರು ಕೃಷ್ಣಾ ಚಾರ್ಯರವರಿಂದ ಪಾಠ ಹೇಳಿಸಲಾರಂಭಿಸಿದರು. ಐದು ವರ್ಷ ಪಾಠ ಸುಸೂತ್ರವಾಗಿ ಸಾಗಿತು , ಕರ್ನಾಟಕದ ಪ್ರತಿಭಾಶಾಲಿ ಗಾಯಕರಾದ ಸವಾಯ್ ಗಂಧರ್ವರ * (ಕುಂದಗೋಳದ ರಾಮರಾಯರು) ಪರಮಸ್ನೇಹಿತರಾದ ಶ್ರೀ ದತ್ತೋಪಂತ ದೇಸಾಯರು, ಸವಾಯ್ ಗಂಧರ್ವರಲ್ಲಿ ಗಂಗೂಬಾಯಿಯರು ಸಂಗೀತಾಭ್ಯಾಸ ಮುಂದುವರಿಸಲು ೧೯೩೨ರಲ್ಲಿ ಅನುಕೂಲ ಮಾಡಿಕೊಟ್ಟು ವಿಧ್ಯುಕ್ತವಾಗಿ 'ಗಂಡಾ ಮುಹೂರ್ತ' * *ವೂ ಆಯಿತು. ಆದರೆ ಸವಾಯ್ ಗಂಧರ್ವರು ಕ್ರಮವಾಗಿ ಪಾಠ ಪ್ರವಚನಗಳನ್ನು ನಡೆಸಲಾಗಲಿಲ್ಲ. ಅವರು ಮರಾಟ

  • ಇವರ ವಿಸ್ತ್ರತ ಪರಿಚಯ ಕರ್ನಾಟಕ ಕಲಾವಿದರು - ಭಾಗ ೧ 'ರಲ್ಲಿ ಕೂಡಲಾಗಿದ.
  • * ಗುರು ಶಿಷ್ಯ ಸ್ವೀಕಾರ ಮಾಡುವುದಕ್ಕೆ “ಗಂತಾಮಹೂರ್ತ'ವೆಂದು ಹೆಸರು. ಗುರು ಗೃಹದಲ್ಲಿ ಸಾರ್ವಜನಿಕ ಸಭಾಮಂದಿರದಲ್ಲಿಯೇ ಈ ಮಹೂರ್ತ ನೆರವೇರುತ್ತದೆ. ಔತ್ತರೇಯ ಸಂಗೀತ ಪದ್ಧತಿ ಪ್ರಸಾರದಲ್ಲಿರುವೆಡೆಯಲ್ಲೆಲ್ಲಾ ಇಂದಿಗೂ ಈ ಪದ್ದತಿ ನಡೆದುಬರುತ್ತಿದೆ,