ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೧೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಹಾನಗಲ್ಲ ಗಂಗೂಬಾಯಿ ೧೩೧ ನಾಟಕ ಕಂಪನಿಯೊಂದರಲ್ಲಿ ನಟರಾಗಿದ್ದುದರಿಂದ ಪದೇಪದೇ ಊರು ಬಿಟ್ಟು ಹೋಗಬೇಕಾಗುತ್ತಿತ್ತು. ಅವರು ಪ್ರವಾಸದಲ್ಲಿರುತ್ತಿದ್ದಾಗೆ ದೇಸಾಯ್ ದತೆಪಂತರೂ, ಗಂಗೂಬಾಯಿಯವರ ಸೋದರ ಮಾವಂದಿರಾದ ಆರ್. ಕೆ. ಹಾನಗಲ್ ಅವರೂ ಶಿಕ್ಷಣ ಕೊಡುತ್ತಿದ್ದರು. ೧೯೨೮ರಲ್ಲಿ ಸವಾಯ್ ಗಂಧರ್ವರು ತಮ್ಮ ನಾಟಕ ಜೀವನ ಮುಗಿಸಿ, ದುಟ್ಟೂರಾದ ಕುಂದಗೋಳಕ್ಕೆ ಬಂದು ನೆಲಸಿದರು. ಹುಬ್ಬಳ್ಳಿಗೆ ದನ್ನೊಂದು ಮೈಲಿ ದೂರದಲ್ಲಿದ್ದ ಕುಂದಗೋಳಕ್ಕೆ ಪ್ರತಿದಿನವೂ ಗಂಗೂಬಾಯಿಯವರು ಹೋಗಿ ಶಿಕ್ಷಣ ಪಡೆದು ಬರು ದ್ದರು. ಮೂರು ವರ್ಷ ಕಾಲ ಗಂಗೂಬಾಯಿಯವರ ಶಿಕ್ಷಣ ಯಾವ ತಡೆಯೂ ಇಲ್ಲದೆ ಸಾಗಿತು. ೧೯೪೧ರಲ್ಲಿ ಸವಾಯ್ ಗಂಧರ್ವರು ಪ್ರಬಲ ಬೇನೆಗೆ ತುತ್ತಾಗಿ ಹಾಸಿಗೆ ಹಿಡಿದು ಮಲಗಿಬಿಟ್ಟರು. ಸವಾಯ್ ಗಂಧರ್ವರು ಹಾಡುವುದು, ಶಿಕ್ಷಣ ಕೊಡುವುದು ಅಪಾಯಕರವೆಂದು ವೈದ್ಯರು ಎಚ್ಚರಿಕೆ ಕೊಟ್ಟರು. ಆದರೆ ಈ ಮೂರುವರ್ಷಗಳಲ್ಲಿ ಗಂಗೂಬಾಯಿಯವರು ಗುರುಗಳಿಂದ ಅಪರೂಪ ರಾಗಗಳು, ಚೀಸುಗಳು ಮತ್ತು ಪ್ರಚಲಿತ ರಾಗಗಳನ ಕ್ರಿಯಾತ್ಮವಾಗಿ ಹಾಡುವ ಬಗೆಯನ್ನು ಸಂಗ್ರಹಿಸಿಕೊಂಡಿದ್ದರು. ಗುರುವಿದ್ದ ಜ್ಞಾನವೃಕ್ಷಕ್ಕೆ ಅನುಷ್ಠಾನದ ಫೋಷಣೆ ಮಾತ್ರ ಬೇಕಾಗಿತ್ತು. ಸವಾಯ್ ಗಂಧರ್ವರು ಶ್ರೇಷ್ಠ ಕಲಾವಿದರಾಗಿದ್ದಂತೆ ಉತ್ತಮ ಗುರುಗಳೂ ಆಗಿದ್ದರು. ಒಂದು ರಾಗದ ಸ್ವರಗಳನ್ನು ಮೊದಲು ಹೇಳಿಕೊಟ್ಟು ಅದರ ಆಸ್ಕಾಯಿ), ಅಂತರ ಕಲಿಸಿಕೊಡು ದ್ದರು. ಅನಂತರ ರಾಗವನ್ನು ಬಿಲಂಪದದಲ್ಲಿ (ವಿಳಂಬಕಾಲದಲ್ಲಿ ) ತಾವೇ ಹಾಡಿ, ವಿಸ್ತರಿಸುವ ಮಾರ್ಗವನ್ನು ತೋರಿಸುತ್ತಿದ್ದರು. ಯಮನ್ ರಾಗದಿಂದ ಪಾಠ ಆರಂಭ ಆಯಿತು. ಮುಂದೆ ಸೂರ್ಯಾಧನರಾಗ ಪಾಠವಾಯಿತು. ತರುವಾಯ ಅನೇಕ ಘನರಾಗಗಳ ಪಾಠವೂ ಆಯಿತು. ೧೯೨೪ರಲ್ಲಿ ಬೆಳಗಾಂವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಅಂಗವಾಗಿ ನಿಯೋಜಿತವಾಗಿದ್ದ 'ಸಂಗೀತ ಸಮ್ಮೇಳನ' ದಲ್ಲಿ ಗಂಗೂಬಾಯಿ ಯವರು ತಮ್ಮ ದುನರನೆ ಯ ವಯಸ್ಸಿನಲ್ಲಿ ಮೊಟ್ಟಮೊದಲಿಗೆ ಹಾಡಿ ಸಂಗೀತಪ್ರೇಮಿಗಳ ಮನಸ್ಸಿನಲ್ಲಿ ಆಶಾಂಕುರ ಮಾಡಿದರು. ದತ್ತು ವರ್ಷಗಳ ತರುವಾಯ ಹಿಸ್‌ ಮಾಸ್ಟರ್‌ ವಾಯವ್ಕ್ ' ಕಂಪನಿಗೆ ಗ್ರಾಮಫೋನ್ ರಿಕಾರ್ಡು