ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೧೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೩೪ ಕರ್ನಾಟಕದ ಕಲಾವಿದರು ಪುಸ್ತಕ ಹೊರಬಿದ್ದರೂ ಮೊದಲೇ ತರಿಸಿ ಓದಿದರೇ ಅವರಿಗೆ ತೃಪ್ತಿ, ಮರಾಟಿ, ಹಿಂದಿ ಭಾಷೆಗಳ ಪರಿಚಯವೂ ಇವರಿಗಿದೆ. : ಸೋದರ ಸಂಗೀತ ವಿದ್ವಾಂಸರ ಗಾಯನ, ವಾದನ ಕೇಳುವುದು ತಮ್ಮ ಗೌರವಕ್ಕೆ ಕುಂದೊಂದು ಸಾಮಾನ್ಯವಾಗಿ ಸಂಗೀತಗಾರರು ಭಾವಿಸುತ್ತಾರೆ. ಗಂಗೂಬಾಯಿಯವರು ಎಲ್ಲ ವಿದ್ವಾಂಸರ ಗಾಯನ ವಾದನವನ್ನು ಆಸಕ್ತಿಯಿಂದ ಕೇಳುವುದಲ್ಲದೆ ಅವರ ಹಿರಿಮೆಯನ್ನು ಸ್ವತ್ತೂರ್ವಕವಾಗಿ ಕೊಂಡಾಡುತ್ತಾರೆ. ಸವಾಯ್ ಗಂಧರ್ವ, ಅಬ್ದುಲ್ ಕರೀಂ ಖಾನ್, ಅಲ್ಲಾದಿಯಾ ಖಾನ್, ಫ ಯಾಜ್ ಖಾನ್ ಇವರ ಹಾರಿಕೆಯನ್ನೂ ಆಲಿ ಅಕಬರ್ ಖಾನರ ವಿ ಚಿತ್ರ ವೀಣಾ, ರವಿಶಂಕರರ ಸಿತಾರ, ಅಜೀಜ್ ಖಾನರ ಸರೋದ್, ಅಹಮದ್ ಜಾನ್ ರಖವಾ ಹಾಗೂ ದ ಬಿ ಬು ದ್ವಿ . ನ ರ ತಬಲ ವಾದ್ಯವಾದನವನ್ನು ಗಂಗೂಬಾಯಿಯವರು ತುಂಬ ಗೌರವಿಸುತ್ತಾರೆ. ಸಂಗೀತ ಕೇವಲ ಶಾಸ್ತ್ರವಲ್ಲ, ಅದೊಂದು ಮಹಾಕಲಿ ಎಂದು ಗಂಗೂಬಾಯಿಯವರು ನಂಬುತ್ತಾರೆ. ಅವರ ಹಾಡಿಕೆಯಲ್ಲಿ ರಾಗಗಳು ಲಕ್ಷಣಯುತವಾಗಿ, ಜೀವದುಂಬಿ ಪ್ರಕಾರಗೊಳ್ಳುತ್ತವೆ. ಗಂಭೀರವೂ ಸ್ನಿಗ್ಧವೂ ಆದ ಅವರ ಶಾರೀರದಿಂದ ಭೂಪ್, ಯಮನ್, ಲಲಿತಾಗೌರಿ, ತೋಡಿ, ಬಿಲಾವಲ್ ಮೊದಲಾದ ಘನರಾಗಗಳು ಪೂರ್ಣಕಳೆಯಿಂದ ಮೂರ್ತಿ ಭವಿಸುತ್ತವೆ. ಪ್ರಸ್ತಾರಕ್ರಮದಲ್ಲಿ ಸ್ವರಗಳು ಬಿಡಿ ಬಿಡಿಯಾಗದೆ ಇಡಿಯಾಗಿ ರಾಗವನ್ನು ಅನುವರ್ತಿಸುತ್ತವೆ. ಸಾಧಾರಣ ರಾಗವನ್ನು ಅಸಾಧಾರಣವಾಗಿ ಹಾಡುವ ಪಾಂಡಿತ್ಯ, ಘನರಾಗಳನ್ನು ಕೂಡ ಸಾಮಾನ್ಯರ ಮನಮುಟ್ಟುವಂತೆ ಹಾಡುವ ಕಲಾನೈ ಪುಣ್ಯ ಗಂಗೂಬಾಯಿಯವರಿಗೆ ಸಾಧಿಸಿವೆ. ಕನ್ನಡನಾಡಿನಲ್ಲಿ, ಕನ್ನಡನಾಡಿನ ಹೊರಗೆ ಕರ್ನಾಟಕದ ಹಿರಿಮೆಯನ್ನು ವಿಪುಲವಾಗಿ ಸಾರಿ ಈ ಕನ್ನಡ ಸೋದರಿ ಎಲ್ಲರ ಗೌರವ, ವಿಶ್ವಾಸಗಳಿಗೆ ಪಾತ್ರರಾಗಿದ್ದಾರೆ.