ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

xiv ಮುನ್ನುಡಿ ವಿದ್ವಾಂಸರು ಬದಲಾಯಿಸಿಕೊಳ್ಳಬೇಕು. ಸಂಗೀತ ವಿದ್ವಾಂಸರು ಜನತೆಯ ಮುಂದೆ ನಿಂತು ತಮ್ಮ ಆಶೋತ್ತರಗಳನ್ನು ವ್ಯಕ್ತಪಡಿಸಿ, ಅವರ ಸಹಕಾರ ದೊರಕಿಸಿಕೊಳ್ಳಬೇಕು. ಕನ್ನಡನಾಡಿನ ಸಂಗೀತ ವಿದ್ವಾಂಸರು ಒಂದುಗೂಡಿ ಪ್ರಯತ್ನಿಸಿದರೆ ಮದರಾಸಿನ (ಮೂಸಿಕ್ ಅಕೆಡಮಿ'ಯಂಥ ಸಂಸ್ಥೆ ಸ್ಥಾಪಿಸುವುದು ಅಸಾಧ್ಯ ಎಂದು ನನಗನಿಸುವುದಿಲ್ಲ. ಇನ್ನಾದರೂ ಕನ್ನಡನಾಡಿನ ಸಂಗೀತ ವಿದ್ವಾಂಸರು ತಮ್ಮ ವಿಷವೂ ಹಬಿಟ್ಟು ಹೊರಬರದಿದ್ದರೆ ತಮಗೆ ತಾವು ಅಪಕಾರಮಾಡಿ ಕೊಳ್ಳುವುದರ ಜತೆಗೆ ಕರ್ನಾಟಕ ಸಂಗೀತಕಲೆಗೇ ಹೆಚ್ಚಿನ ಅನ್ಯಾಯ ಮಾಡಿದಂತಾಗುತ್ತದೆ, ೨, ಚಿತ್ರಕಲೆ : ಬಂಗಾಳ, ಲಕ್ಕೋ, ಮುಂಬಯಿ, ಮದರಾಸು ಚಿತ್ರಕಲೆಯಲ್ಲಿ ನೂತನ ಪ್ರಯೋಗಗಳನ್ನು ಮಾಡಿ ಹೊಸ ಸಂಪ್ರದಾಯಗಳನ್ನು ಹುಟ್ಟಿಹಾಕಿದಂತೆ ಮೈಸೂರು ಮಾಡಲಿಲ್ಲ. ಕನ್ನಡನಾಡಿನ ಶಿಲ್ಪ ಪರಂಪರೆ ಯನ್ನೂ (ಐಹೊಳೆ, ಪಟ್ಟದಕಲ್ಲು, ಬಾದಾಮಿ, ಹಂಪೆ, ಲೇಪಾಕ್ಷಿ, ಇಟಗಿ, ವಿಜಾಪುರ, ಮೂಡಬಿದಿರೆ, ಬೇಲೂರು, ಶ್ರವಣಬೆಳಗೊಳ) ಜನಪದ ಚಿತ್ರಕಲಾ ಪರಂಪರೆಯನ್ನೂ ಆಧಾರವಾಗಿಟ್ಟುಕೊಂಡು ಕರ್ನಾಟಕ ಸ್ವತಂತ್ರ ಚಿತ್ರಕಲಾ ಸಂ ಪ್ರ ದಾ ಯ ನ ನ್ನೇ ಆರಂಭಿಸಲು ಅವಕಾಶವಿದೆ. ಮೈಸೂರಿನ ಚಾಮರಾಜೇಂದ್ರ ಟೆಕ್ನಿಕಲ್ ರ್ಇಸ್ಫೂಟ್ ಜನ್ಮತಾಳಿ ಅನೇಕ ವರ್ಷಗಳಾ ದರೂ ಅದರಿಂದ ಗಣನೀಯವಾದ ಯಾವ ಸೇವೆಯೂ ಆಗದಿರುವುದು ವಿಷಾದಕರ. ಆ ಸಂಸ್ಥೆ ಇನ್ನೂ ಕಳೆದ ಶತಮಾನದ ನಿರ್ಜೀವ ಕಲೆಯನ್ನೇ ಅನುಕರಣಮಾಡುತ್ತಿದೆ. ಕನ್ನಡ ನಾಡಿನಲ್ಲಿ ಸ್ವತಂತ್ರ ಮಾರ್ಗಗಳನ್ನು ನಿರ್ದೆಶಿಸಿಕೊಂಡು ಪ್ರತಿಭಾಯುತ ಕೃತಿಗಳನ್ನು ಮಾಡುತ್ತಿರುವ ಶ್ರೀಗಳಾದ ಮಿಣಜಿಗಿ, ಪಿ. ಸುಬ್ಬರಾವ್, ಎಲವಟ್ಟಿ, ಎಸ್. ಆರ್. ಸ್ವಾಮಿ, ಕಮಡೋಳಿ ಮೊದಲಾದ ಕಲಾವಿದರ ನೆರವು ಪಡೆದು ಮೈಸೂರಿನಲ್ಲಿ ಒಂದು ಚಿತ್ರ ಕಲಾಕ್ಷೇತ್ರವನ್ನು ನಿರ್ಮಿಸಬಹುದು. ಅನುಕೂಲಸ್ಥರು ಬಜಾರಿನಲ್ಲಿ ಸಿಕ್ಕುವ ಅಗ್ಗದ ಜರ್ಮನ್ ಪ್ರಿಂಟುಗಳನ್ನು ಕೊಂಡು ತಮ್ಮ ಮನೆಯ ಅಂದ ಚೆಂದವನ್ನು ಕೆಡಿಸಿಕೊಳ್ಳುವುದರ ಬದಲು ಕನ್ನಡ ಚಿತ್ರಶಿಲ್ಪಿಗಳ ಕೃತಿಗಳನ್ನು ಕೊಳ್ಳುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಸ್ಥಳೀಯ ಚಿತ್ರ ಕಲಾವಿದರು