ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೧೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೩೮ ಕರ್ನಾಟಕದ ಕಲಾವಿದರು ಈಗ್ಗೆ ಮೂರು ವರ್ಷಗಳಾಗಿರಬಹುದು. ಸುಬ್ಬರಾಯರು ಯಾರು ಎನ್ನುವುದು ನನಗೆ ತಿಳಿದಿರಲಿಲ್ಲ. ಬಸವನಗುಡಿಯಿಂದ ವಿಶ್ವೇಶ್ವರಪುರದ ಕಡೆಗೆ ಬರುದ್ದ ನನಗೆ ಸಜ್ಜನರಾಯರ ವರ್ತುಲದ ಕಡೆಯಿಂದ ಬರುದ್ದ ಮೃದುಮಧುರ ಸಂಗೀತ ೬ಪ್ಯಾಯನವನ್ನುಂಟುಮಾಡಿತು. ಜತೆಯಲ್ಲಿದ್ದ ಗೆಳೆಯರನ್ನು ಕೇಳಿದೆ (ಇದು ಯಾರು ಕೃಷ್ಣಪ್ಪನವರ ನೆನಪು ತರುತ್ತಿರುವರಲ್ಲಾ' ಎಂದು. ಗೆಳೆಯರು, 'ನಿಜ. ಹಾಡು ತ್ತಿರುವವರು ಕೃಷ್ಣಪ್ಪನವರ ಶಿಷ್ಯರು. ಬೆಂಗಳೂರಿನ ಎ. ಸುಬ್ಬರಾಯರು' ಎಂದರು. ಸಜ್ಜನರಾಯರ ವರ್ತುಲದ ಬಳಿಯಿರುವ ಕಲ್ಯಾಣಮಂಟಪ' ದಲ್ಲಿ ಸುಬ್ಬರಾಯರು ಹಾಡುತ್ತಿದ್ದರು. ತೋಡಿ ರಾಗದ ಆಲಾಪನೆ. ಅರುಣಾಚಲಪ್ಪನವರ ಹಾರೊನಿಯಂ ವಾದ್ಯ, ಬಾಗಲೂರು ಕೃಷ್ಣಮೂರ್ತಿಯವರ ಪಿಟೀಲು, ವೀರಭದ್ರಪ್ಪನವರ ಮೃದಂಗ. ಹಾಡುಗಾರಿಕೆ, ವಾದ್ಯವಾದನ ಸಮರಸವಾಗಿತ್ತು. ಸುಬ್ಬ ರಾಯ ರ ದಿವ್ಯ ಕಂಠದಿಂದ ತಾನ ವಿತಾನಗಳು ಭಾವಪೂರ್ಣವಾಗಿ ಚಿಮ್ಮು ಇದ್ದವು. ಅಂದಿನ ರಸದೂಟ ನನ್ನ ಜೀವನದ ಒಂದು ಚಿರಸ್ಮರಣೀಯ ದಿನವಾಯಿತು. ಕಳೆದ ನವೆಂಬರ್‌ ತಿಂಗಳಲ್ಲಿ (೧೯೫೧) ಧರ್ಮಸ್ಥಳದ ಶ್ರೀ ಮಂಜಯ್ಯ ಹೆಗ್ಗಡೆಯವರ ಆಮಂತ್ರಣದಂತೆ ಸುಬ್ಬರಾಯರೂ ಅವರ ಪಕ್ಕವಾದ್ಯಗಾರರೂ ಧರ್ಮಸ್ಥಳಕ್ಕೆ ಬಂದಿದ್ದರು. ಮಹಾಸಭೆಯಲ್ಲಿ ಸುಬ್ಬರಾಯರು ಕನ್ನಡ ದೇವರನಾಮಗಳ ಕಛೇರಿಮಾಡಿದರು. ಸಭೆ ಯಲ್ಲ ೦ ದು ಪಂಡಿತರಿದ್ದ , ವಿದ್ವಾಂಸರಿದ್ದರು, ಕಲಾವಿದರಿದ್ದರು. ಹಾಗೇ ಸಾವಿರಾರುಮಂದಿ ಜಾತ್ರೆಯ ಜನರೂ ಇದ್ದರು. ಸುಬ್ಬರಾಯರು ಹಾಡಿದಷ್ಟು ಕಾಲ ಜನ ಭಿ ಚಿತ್ರದಂತೆ ಕುಳಿತಿದ್ದರು. ಮಾರನೆಯ ದಿನವೂ ಸುಬ್ಬರಾಯರನ್ನು ಪೂಜ್ಯ ಹೆಗ್ಗಡೆಯವರು ನಿಲ್ಲಿಸಿಕೊಂಡು ಪಲ್ಲವಿ' ಹಾಡಿಸಿ ಕೇಳಿ ಸಂತೋಷಪಟ್ಟರು. ಹೆಗ್ಗಡೆಯವರಿಗೆ ಮೈ ಯಲ್ಲಿ ಸ್ವಲ್ಪವೂ ಆರೋಗ್ಯವಿಲ್ಲ. ನಿತ್ಯ ಜ್ವರ ಬರುತ್ತಿತ್ತು. ತುಂಬ ನಿತ್ರಾಣ. ಆ ಸ್ಥಿತಿಯಲ್ಲಿಯೂ ಅವರು ಸುಬ್ಬರಾಯರ ಎರಡು ಕಛೇರಿಗಳನ್ನೂ ಆಲಿಸಿ ಆನಂದಿಸುತ್ತಾ ನನ್ನ ಕಾಹಿಲೆಗೆ ಇದಕ್ಕಿಂತ ಚಿಕಿತ್ಸೆ ಬೇಕೇ ?' ಎಂದರು. ಸುಬ್ಬರಾಯರಿಗೆ ದೈವದತ್ತವಾದ ಶಾರೀರವಿದೆ. ಸ೦ ಚು ಮಾ ಡಿ ಹಾಡಿದಾಗ, ಘಾತಮಾಡಿ ಹಾಡಿದಾಗ ಶಾರೀರ ತನ್ನ ಸ್ವಾಯಿಬಲವನ್ನು ಕಳೆದುಕೊಳ್ಳುವುದಿಲ್ಲ. ದುರಿತಕಾಲದ ತಾನಗಳನ್ನು, ಸ್ವರಗಳನ್ನು ಇವರಷ್ಟು