ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೧೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೪o ಕರ್ನಾಟಕದ ಕಲಾವಿದರು ಅಭಿಪ್ರಾಯ. ಪರಂಪರಾಗತವಾದ ಭಕ್ತಿ ಗೀತೆಗಳ ಜತೆಗೆ ಬೇರೆ ಬೇರೆ ಭಾವಗಳ, ರಸಗಳ ಗೀತೆಗಳನ್ನೂ ಹಾಡಲು ಅವರು ಪ್ರಯತ್ನಿಸುತ್ತಿದ್ದಾರೆ. ಸುಬ್ಬರಾಯರ ಸಂಗೀತ ವೈಶಿಷ್ಟಕ್ಕೆ ಅವರ ಮಾನಸಿಕ ಸಂಸ್ಕೃತಿಯೂ ಕಾರಣವಾಗಿದೆ. ಪ್ರಪಂಚದ ಆಗುಹೋಗುಗಳನ್ನರಿಯಲು ಅವರು ತೋರುವ ಉತ್ಸಾಹ, ಉದ್ರಂಥಗಳನ್ನು ಓದುವುದರಲ್ಲಿ ತೋರುವ ಆಸ್ಥೆ ಪರೋಕ್ಷವಾಗಿ ಅವರ ಸಂಗೀತದ ಮೇಲೆ ಸದ್ರಗಿಣಾಮವನ್ನುಂಟುಮಾಡಿದೆ. ಕನ್ನಡನಾಡಿನ ವರ್ಧಿಷ್ಟು ಕಲಾವಿದರಲ್ಲಿ ಸುಬ್ಬರಾಯರು ಹಿರಿಯನನ ಗಳಿಸಿಕೊಂಡಿದ್ದಾರೆ. ಕನ್ನಡ ಸಂಗೀತದ ಬೆಳವಳಿಗೆಗೆ ಸುಬ್ಬರಾಯರಿಂದ ಮದದ್ದೇವೆ ಸಲ್ಲುತ್ತದೆಂದು ಸಂಸ್ಕೃತಿಪ್ರಿಯರು ಧೈರ್ಯ ತಳೆಯಬಹುದು.