ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೧೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮಾಯಾದೇವಿ ೧೪೩ ಪ್ರಯತ್ನಿಸಿದರು. * ಭಾರತದಲ್ಲಿಯೂ ಇಂಥ ಪ್ರಯತ್ನ ನಡೆದಿದೆ. ಮಣಿಪೂರಿ ಸಂಪ್ರದಾಯವನ್ನು ಉದ್ಧರಿಸಲು ಗುರುದೇವ ರವೀಂದ್ರರೂ, ಶಾಂತಿನಿಕೇತನದ 'ಕಲಾಶಾಖೆ'ಯವರೂ ಪ್ರಯತ್ನಿಸಿದ್ದಾರೆ. ಕಥಕ್ಕಳಿ ಸಂಪ್ರದಾಯದ ಪುನರುಜ್ಜಿ ಮನಕ್ಕೆ ಮಹಾಕವಿ ವಲ್ಲತೆಳ:, ಗೋಪಿನಾಥ, ತಂಗಮಣಿಯವರೂ ತುಂಬ ಶ್ರಮಪಟ್ಟಿದ್ದಾರೆ. ಭರತ ನಾಟ್ಯವನ್ನು ಶುದ್ಧ ಸ್ವರೂಪದಲ್ಲಿ ಪ್ರದರ್ಶಿಸಲು ರುಕ್ಕಿಣಿ ಆರುಂಡೇಲರೂ, ಕಥಕ್ ಸಂಪ್ರದಾಯದ ಜೀ ರ್ಣೋ ದ್ದಾ ರ ಕ್ಕೆ ಲೀಲಾ ಸೋಖೆ ( ದಿವಂಗತ ಮೇನಕಾ) ಅವರೂ ಪ್ರಯತ್ನಿಸಿದ್ದಾರೆ. ಬಂಗಾಳದ ವೀರ ನೃತ್ಯಗಳನ್ನು ಬದುಕಿಸಿ ಅವುಗಳ ಪ್ರಸಾರಕ್ಕೆ 'ಬ್ರತಾಚಾರಿ ಚಳುವಳಿ' ಯನ್ನೇ ದಿವಂಗತ ಜಿ. ಎಸ್. ದತ್ತರು ಆರಂಭಿಸಿದರು. ಇಂದು ನೃತ್ಯಕ್ಕೆ ಸಾಕಷ್ಟು ಪ್ರಾಶಸ್ತ್ರ ಬಂದಿದೆ. ಜನ ನೃತ್ಯಕ್ಕೆ ವಿಶೇಷ ಪ್ರೋತ್ಸಾಹ ಕೊಡುತ್ತಿದ್ದಾರೆ. ಪ್ರತಿ ಯೊ ೦ ದು ಊರಿನಲ್ಲಿಯ ನೃತ್ಯ ಶಾಲೆಗಳು ಜನ್ಮ ತಳೆದಿವೆ. ಕಲ್ಕತ್ತೆ, ಮುಂಬಯಿ, ಮದರಾಸು, ಲಕ್ಕೊ, ಬೆಂಗಳೂರು, ಹೈದರಾಬಾದು ಮೊದಲಾದ ದೊಡ್ಡ ಪಟ್ಟಣಗಳಲ್ಲಿ ಬೀದಿ ಬೀದಿಗೂ ನೃತ್ಯಶಾಲೆಗಳಾಗಿವೆ. ನೃತ್ಯ ಕಲೆಯ ಪ್ರಸಾರ ಭಾರತದಲ್ಲಿ ನೃತ್ಯ ಕಲಾ ಪ್ರಾಗವನ್ನು ತ೦ ದಿ ದೆ ಯೆ ೦ ದು ಹೇಳಲು ಸಾಧ್ಯವಿಲ್ಲ. ಸಿನಿಮಾ ಹಾಡುಗಳನ್ನು ನುಡಿಸಿ ತೃಪ್ತಿ ಹೊಂದುವ ವಾದ್ಯ ಮೇಳ, ಅದಕ್ಕನುಗುಣವಾಗಿ ಕೈ ಕಾಲು ಬೀಸಿ ತೃಪ್ತಿ ಹೊಂದುವ ನರ್ತಕರ ತಂಡ ಬೆಳೆದಿದೆ. ಇಂದು ನರ್ತಕರು ವರ್ತಕರಾಗಿದ್ದಾರೆ. ಪಂದನಲ್ಲರಿಗೆ ಹೋಗಿ ಒಂದೆರಡು ತಿಂಗಳು ಇದ್ದು ಬಂದವರು, ಅಚ್ಚನ್ ಮಹಾರಾಜರ ಮನೆಯ ಮುಂದೆ ಸುಳಿದವರು, ಹೇಗೋ ಎಂತೋ ವಿಲಾಯತಿ ಯಾತ್ರೆ ಮಾಡಿ ಬಂದವರು ಇಂದು 'ಪ್ರಾಚ್ಯ ನೃತ್ಯ ಕಲಾ ಪ್ರವೀಣ'ರಾಗಿದ್ದಾರೆ. + "....the world famous dancers of to-day are not content merely to present the gaiety and revelry of life ; the beauty of the dance is for them coupled with its seriousness, and in their finest moments they aim to make it a sacred ritual” -"THE DANCE OF LIFE” --Havelock Ellis (Foreword)