ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೧೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೪೪ ಕರ್ನಾಟಕದ ಕಲಾವಿದರು ಕಂದಾಯ ಕೊಡದೆ, ಲೈಸೆನ್ಸ್ ಪಡೆಯದೆ ಅನುಸರಿಸಬಹುದಾದ ವೃತ್ತಿಗಳಲ್ಲಿ ನೃತ್ಯವೂ ಒಂದೆಂದು ಪರಿಗಣಿಸಲ್ಪಟ್ಟಿದೆ. * ಈ ಪರಿಸ್ಥಿತಿಯನ್ನು ಸುಧಾರಿಸಿ, ಭಾರತೀಯ ನೃತ್ಯಕಲೆಯನ್ನು ಜಿ ವ ನಾ ದ ಶ ೯ ಪೂರೈಸುವ ರೀತಿಯಲ್ಲಿ ಮುಂದಕ್ಕೆ ಒಯ್ಯಬೇಕೆಂದು ಪ್ರಯತ್ನಿಸುತ್ತಿರುವ ಕೆಲವು ತರುಣ ಕಲಾವಿದರಲ್ಲಿ ಶ್ರೀಮತಿ ಮಾಯಾದೇವಿ ಒಬ್ಬರಾಗಿದ್ದಾರೆ. ಮಾಯಾ ೧೯೨೮ನೆಯ ಇಸಏ ಮೇ ತಿಂಗಳಲ್ಲಿ ಜನಿಸಿದರು. ಇವರ ತಂದೆ ದಿವಂಗತ ಶ್ರೀ ಸಂಜೀವರಾಯರು ' ಮೈಸೂರ್ ಹೋಲ್ಸ್ ' ಎಂಬ ಪ್ರಸಿದ್ದ ಎಂಜನಿಯರಿಂಗ್ ಸಂಸ್ಥೆ ನಡೆಸುತ್ತಿದ್ದರು. ಶೈಶವ್ಯದಲ್ಲಿ ಮಾಯಾ ದೇವಿಗೆ ದೇಹಾರೋಗ್ಯವಿರಲಿಲ್ಲ. ಮಗುವಿಗೆ ಆಯಾಸವಾಗಬಾರದೆಂದು ಎಂಟ ನೆಯ ವಯಸ್ಸಿನವರೆಗೆ ಶಾಲೆಗೆ ಕಳುಹಿಸಲಿಲ್ಲ. ಮನೆ ಯ ಪಾಠ. ಸಂಗೀತಕ್ಕೂ ಒಬ್ಬ ಶಿಕ್ಷಕರು ಬರುತ್ತಿದ್ದರು. ಸಂಗೀತ ಶಿಕ್ಷಕರು ಬರೆದುಕೊಟ್ಟ ಹಾಡನ್ನು ಅಭ್ಯಾಸಮಾಡಿಕೊಳ್ಳುವುದಕ್ಕೆ ಲಿಪಿಯೇ ಬರುತ್ತಿರಲಿಲ್ಲ. ಹಾಗೂ ಹೀಗ ಸಂಗೀತ ಶಿಕ್ಷಣ ಕೇವಲ ಬಾಯಿಪಾಠದಲ್ಲಿಯೇ ಸಾಗಿತು. ಜತೆಗೆ ದಿಲ್ ರುಬಾ ವಾದ್ಯದ ಅಭ್ಯಾಸವೂ ಆರಂಭವಾಯಿತು. ೧೯೪೦ರಲ್ಲಿ ಪ್ರಸಿದ್ದ ಕಥಕ್ ನೃತ್ಯಕಾರರಾದ ಶ್ರೀ ಸೋಹನಲಾಲರು ಮಾಯಾದೇವಿಯ ಸೋದರಿಯರಿಗೆ ಕಥಕ್ ನೃತ್ಯ ಅಭ್ಯಾಸಮಾಡಿಸಲಾರಂಭಿಸಿ ದರು. ತಂಗಿಯರ ಶಿಕ್ಷಣ ನೋಡುತ್ತಿದ್ದ ಮಾಯಾದೇವಿಯವರಲ್ಲಿ ಸುಪ್ತವಾಗಿದ್ದ ನೃತ್ಯಕಲೆ ಚjjತವ:ಯಿತು. ತ: ವೂ ನೃತ್ಯ ಕಲಾಭ್ಯಾಸ ಮಾಡಬೇಕೆಂದು ಬಯಸಿದರು. ವಯಸ್ಸಿಗೆ ಬಂದ ಹೆಣ್ಣುಮಗಳು ನೃತ್ಯಾಭ್ಯಾಸಮಾಡುವುದಕ್ಕೆ ಮನೆಯ ಹಿರಿಯರು ಅಡ್ಡಿಯಾದ.. ಬೇಡದ ಸಂಗೀತ ಶಿಕ್ಷಣವೇ ಮುಂದು ವರಿಯಿತು. ಮಗಳಿಗೆ ಸಂಗೀತದ ಮೇಲೆ ಇಷ್ಟವಿಲ್ಲದಿರುವುದನ್ನು ಕಂಡುಕೊಂಡ ತಂದೆ ಆಕೆಯ ಇಚ್ಛೆಯಂತೆ ನೃತ್ಯ ಕಲಾಭ್ಯಾಸಕ್ಕೆ ಅವಕಾಶಮಾಡಿಕೊಟ್ಟರು, ೧೯೪೭ರಲ್ಲಿ ಆರಂಭವಾದ ನೃತ್ಯ ಕಲಾ ಭ್ಯಾ ಸ ಎರಡು ವರ್ಷಕಾಲ ಮುಂದುವರಿಯಿತು. ಸೋಪನಲಾಲರ ಬಳಿ ಕಥಕ್ ಮತ್ತು ಮಣಿಪೂರಿ ಸಂಪ್ರದಾಯಗಳ ಪಾಠವಾಯಿತು. ೧೯೪೪ರಲ್ಲಿ ಬೆಂಗಳೂರು ಟೌನ್ ಹಾಲಿನಲ್ಲಿ ಸಾರಸ್ವತ ಮಹಿಳಾ ಸಮಾಜದವರ ವಿವಿಧ ವಿನೋದಾವಳಿಯ ಪ್ರದರ್ಶನ'