ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

XV ಮುನ್ನುಡಿ ರಚಿಸುವ ಉತ್ತಮೋತ್ತಮ ಕೃತಿಗಳನ್ನು ಸರ್ಕಾರ ಕೊಂಡು ಮ್ಯೂಸಿಯಂನಲ್ಲಿ ಪ್ರದರ್ಶಿಸಬೇಕು. ಶ್ರೇಷ್ಠ ಕಲಾಕೃತಿ ವ್ಯಕ್ತಿಯ ಸಂಪತ್ತಾಗಬಾರದು, ರಾಷ್ಟದ ಸಂಪತ್ತಾಗಬೇಕು. ಕನ್ನಡ ನಾಡಿನಲ್ಲಿ ಚಿತ್ರಕಲಾಭಿರುಚಿ ಬೆಳೆಸಲು ಶ್ರೀ ಎ. ರ್ಎ. ಸುಬ್ಬರಾಯರು ಮಾಡಿರುವ ನಿಷ್ಕಾಮಸೇವೆ ಚಿರಸ್ಮರಣೀಯವಾದುದು. ೧೯೧೯ ಇಸವಿಯಲ್ಲಿ ಶ್ರೀ ಸುಬ್ಬರಾಯರು ಕಲಾಮಂದಿರ' ಸ್ಥಾಪಿಸಿದರು. ಕಲಾಮಂದಿರದ ಮುಖೇನ ನೂರಾರು ವಿದ್ಯಾರ್ಥಿ ವಿದ್ಯಾರ್ಥಿನಿಯವರಿಗೆ ಕಲೆಯ ಪಾಠ ಹೇಳಿದರು. ಅಲ್ಲಿಂದ ಶಿಕ್ಷಣ ಪಡೆದು ಹೊರಬಿದ್ದ ಕೆಲವು ವಿದ್ಯಾರ್ಥಿಗಳು ಇಂದು ಭಾರ ತಾ ದ್ಯಂತ ಖ್ಯಾತಿಗಳಿಸಿಕೊಂಡಿದ್ದಾರೆ. ಶ್ರೀ ಸುಬ್ಬರಾಯರು ಅನೇಕ ಲಲಿತಕಲಾ ಪ್ರದರ್ಶನಗಳನ್ನೇರ್ಪಡಿಸಿ ಜನತೆಗೂ ಲಲಿತಕಲೆಗೂ ನಿಕಟ ಸಂಪರ್ಕ ಬೆಳೆಯುವಂತೆ ಮಾಡಿದರು. ೩೩ ವರ್ಷಕಾಲ ದುಡಿದ ಮೇಲೂ ಸುಬ್ಬರಾಯರು ತಮ್ಮ 'ಕಲಾಮಂದಿರ'ವನ್ನು ಸಾಲಸೋಲ ಮಾಡಿ ನಡೆಸುತ್ತಿದ್ದಾರೆಂದರೆ ನಮ್ಮ ಅಭಿಮಾನಶೂನ್ಯತೆಗೆ ಹೆಚ್ಚಿನ ನಿದರ್ಶನ ಬೇಕೇ ? ೩, ನಾಟಕ: ನಾಟಕಶಿರೋಮಣಿ ಎ. ವಿ. ವರದಾಚಾರ್ಯರ “ಮಹಾಯುಗ' ಮುಗಿದ ಮೇಲೆ, ನಾಟಕ ಕಲೆಯ ಪುನರುದ್ಧಾರ ಮಾಡಲು ಕೀರ್ತಿಶೇಷ ಮಹಮ್ಮದ್ ಪೀರ್ ಸಾಹೇಬರವರು ಪ್ರಯತ್ನಿಸಿದರು. ನಾಟಕರತ್ನ ಜಿ. ಎಚ್. ವೀರಣ್ಣನವರೂ, ಶ್ರೀ ಕೆ. ಹಿರಣ್ಣಯ್ಯನವರೂ 'ಹಾಸ್ಯರಸ ಪ್ರಧಾನ' ರಂಗಭೂಮಿಯ ಬೆಳವಳಿಗೆಗೆ ಹೆಚ್ಚು ಲಕ್ಷ ಕೊಟ್ಟರು. ಉತ್ತರ ಕರ್ನಾಟಕದಲ್ಲಿ ಶ್ರೀ ಗರುಡ ಸದಾಶಿವರಾಯರು, ಶ್ರೀ ವಾಮನರಾವ್ ಮಾಸ್ಕರ್‌ ಅವರು, ಶ್ರೀ ಹಂ ದಿ ಗ ನೂರ ಸಿದ್ದರಾಮಪ್ಪನವರು, ಶ್ರೀ ಬಸವರಾಜ ಮನ್ಸೂರರೂ ಕನ್ನಡ ರಂಗಭೂಮಿಯ ಹಿರಿಮೆಯನ್ನು ಕಾಪಾಡಿಕೊಂಡು ಬಂದರು. ದಕ್ಷಿಣ ಕನ್ನಡ ಜಿಲ್ಲೆಯ ಶ್ರೀ ರಂಗನಾಥ ಭಟ್ಟರೂ, ಶ್ರೀ ಹುಲಿಮನೆ ಸೀತಾರಾಮಶಾಸ್ತ್ರಿಗಳೂ ಕನ್ನಡ ರಂಗಭೂಮಿಯ ವ್ಯಾಪ್ತಿಯನ್ನು ವಿಸ್ತರಿಸಿದರು. ಇಂದು ಕನ್ನಡ ರಂಗಭೂಮಿ ರಾಹುಗ್ರಸ್ತ ವಾಗಿದೆ. ಮೈಸೂರಿನಲ್ಲಿ ಮೂರು ನಾಲ್ಕು ಕಂಪನಿಗಳೂ, ಉತ್ತರ ಕರ್ನಾಟಕದಲ್ಲಿ ಎರಡು ಮೂರು ಕಂಪನಿಗಳೂ, ಕುಂಟುತ್ತ, ಎಡವುತ್ತ ನಡೆದಿವೆ. ಬಳ್ಳಾರಿ