ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೨೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮಾಯಾದೇವಿ ೧೪೫ ದಲ್ಲಿ ಮಾಯಾದೇವಿ ಭಾಗವಹಿಸಿ ಕೆಲವು ತನ್ನತ್ಯಗಳನ್ನೂ ಮಾಡಿದುದಲ್ಲದೆ * ಸಂಗೀತ ಜನ್ಮ' ಎಂಬ ಛಾಯಾನ್ಸತ್ಯನಾಟಕದಲ್ಲಿ ಪಾತ್ರವಹಿಸಿ ಯಶಸ್ಸು ಗಳಿಸಿದರು. ಬಂಧು ಬಳಗದ ಭರ್ತನೆ ಅಧಿಕವಾಗುತ್ತ ಬಂತು. ಇದೇ ಕಾಲಕ್ಕೆ ತಂದೆಯವರೂ ನಿಧನರಾದರು. ದುಃಖದ ಭರದಲ್ಲಿ ಮಾಯಾದೇವಿಗೆ ಯಾವದೂ: ಬೇಡವಾಯಿತು. ಗುರುದೇವ ರವೀಂದ್ರರ ಕಾವ್ಯದಲ್ಲಿ ಶಾಂತಿಯನ್ನ ರಸಿದರು. ಕಾಲೇಜಿನ ನೃತ್ಯ ಸಂಘ ಮಾಯಾದೇವಿಯನ್ನು ಕಾರ್ಯದರ್ಶಿಯನ್ನಾಗಿ ಆರಿಸಿ ಅವರ ನೃತ್ಯ ಕಲೆಗೆ ಪುಟಗೊಟ್ಟಿತು. ಜತೆಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯರ ನೆರವಿನಿಂದ ಕಾಲೇಜಿನಲ್ಲಿ ನೃತ್ಯ ಪ್ರದರ್ಶನಗಳನ್ನಿತ್ತರು. ಕಾಲೇಜಿನಲ್ಲಿಯೆ: ಮಾ ಯಾ ದೇವಿ ತಮ್ಮ ಸ್ವಯಂಕಲ್ಪಿತ ನೃತ್ಯನಾಟಕಗಳ ಪ್ರಯೋಗ ಮಾಡಿದರು. ಸಂಪ್ರದಾಯದ ಮಹತ್ವವನ್ನು ಮಾಯಾದೇವಿ ಅಲ್ಲಗಳೆಯದಿದ್ದರೂ ಅದನ್ನೇ ಹೆಚ್ಚಾಗಿ ಅವಲಂಬಿಸುವುದಿಲ್ಲ. ಶಾಸ್ತ್ರದ ಹೊರೆಯಿಂದ ತೊನೆದ ತೂಗುತ್ತಿರುವ ಸಂಪ್ರದಾಯ ಪದ್ಧತಿಗಿಂತಲೂ ಅವರಿಗೆ ಜಾನಪದ ನೃತ್ಯಪದ್ಧಸಿ ಹೆಚ್ಚು ಮೆಚ್ಚು. ಈ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ : ( ಕ್ರಮಬದ್ದ ಮಾರ್ಗದಲ್ಲಿ ಹೋಗುವ ನೃತ್ಯ ಪ್ರದರ್ಶನಗಳು ನನಗಷ್ಟು ಸೇರುವುದಿಲ್ಲ. ಅವುಗಳ ಗತಿ ಚಲನವಲನವೆಲ್ಲಾ ಒಂದು ಪದ್ದತಿಯನ್ನನುಸರಿಸು ಇದೆ. ಸಂಗೀತ ಉದ್ರೇಕಿಸುವ ಭಾವ, ರಸಾನುಗುಣವಾಗಿ ಬೆಳೆಯುವ ಲಾವಣ್ಯಭರಿತ ಚಲನವಲನದಲ್ಲಿ ಹೆಚ್ಚು ಸೌಂದರ್ಯವೂ ಸ್ವಾತಂತ್ರವೂ ಇರುತ್ತದೆ. ಪದ್ಧತಿಗಳನ್ನನುಸರಿಸುವ ನೃತ್ಯಗಳಲ್ಲಿ ಕಲ್ಪನೆಗೆ ಅವಕಾಶವಿಲ್ಲಮುಂದಿನ ಹೆಜ್ಜೆ ಯಾವದೆಂದು ನಿರೀಕ್ಷಿಸಬಹುದು. ಅನಿರೀಕ್ಷಿತ ಭಾವ ಕಲೆಗೆ ಕೊಡುವ ಕುಂದಣದ ಅಭಾವ ಕ್ರಮಾಗತಮಾರ್ಗಗಳಲ್ಲಿ ಅನಿರ್ವಾಯ. ಸಂಗೀತ ಬದಲಾಯಿಸಿದಂತೆ ನೃತ್ಯಗತಿಯೂ ಬದಲಾಯಿಸಿದರೆ ಮನಸ್ಸಿಗೆ ಸಂತೋಷವಾಗುತ್ತದೆ. ಕಥಕ್ ಅಥವಾ ಕಥಾಕಳಿ ಸಂಪ್ರದಾಯಕ್ಕೆ ಬದ್ಧವಾಗಿರಬೇಕೆಂಬ ಅಭಿಪ್ರಾಯವನ್ನು ನಾನು ಒಪ್ಪುವುದಿಲ್ಲ. ಎಲ್ಲ ಸಂಪ್ರ ದಾಯಗಳ ಚಲನವಲನಗಳನ್ನು ಕ್ರೋಢೀಕರಿಸಿಕೊಂಡು ಸಮರಸವನ್ನರಸುವ ಬಗೆ ನನಗೆ ಚೆನ್ನು, ಇದಕ್ಕಾಗಿಯೇ ನಾನು ಜಾನಪದ ನೃತ್ಯಗಳ ನೆರವನ್ನು 10