ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೨೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೫೦ ಕರ್ನಾಟಕದ ಕಲಾವಿದರು ನಶ್ವ ರಕೆ ಮನಸೆಳದು ಶಾಶ್ವತವ ಮರಸುವುದು ಬದುಕೆಂಬ ಚೆಲುಮೊಗದ ಸಾವು ಇದಮಿಾರಿ ಬದುಕುವುದೇ ಕಲೆ ಕಲೆಗಾಗಿ ಕಲೆ, ಕಲೆಗಾಗಿ ಕಲೆ, ಇದೇ ಕಲೆಯ ಬೆಲೆ || ” ಶಿಲ್ಪಿ ತನ್ನ ಕೃತಿಯನ್ನು ಮುಗಿಸುವುದರಲ್ಲಿದ್ದಾನೆ. ಆಗ ಜೀವನ ಹೆಣ್ಣಿನ ಆಕಾರ ತಳೆದು ಬಾಳ್ವೆಯ ಸೊಗಸನ್ನು -ದೇವನ ಸುಗ್ಗಿಯ ಬೀಡಾದ ಭೂಮಿ, ರತ್ನ ಖಚಿತ ನೀಲಾಂಬರ, ನಗುವ ಹೂಗಳು, ಪಚ್ಚೆ ಸಯಿರು, ಹೆಣ್ಣಿನ ಸ್ನಿಗ ಸುಂದರ ಮುಗುಳ್ಳಗೆ, ಗೆಳೆತನದ ಸಾಂತಃಕರಣ, ಇವೆಲ್ಲವನ್ನೂ ಅನುಭವಿಸಬಾರೆಂದು ಕರೆಯುತ್ತದೆ. ಜೀವನ : ನನ್ನನ್ನು ನಿರಾಕರಿಸಬೇಡ. ನಿನ್ನ ಕಲೆಯ ಅಭ್ಯುದಯಕ್ಕೆ ನನ್ನಿಂದ ಹಿರಿ ಸೇವೆ ಸಲ್ಲುತ್ತದೆ' ಎಂದು ಹೇಳುತ್ತದೆ. ತನ್ನ ಕನಸಿನ ದಂತದರಮನೆಯಲ್ಲಿ ವಾಸಮಾಡುತ್ತಿರುವ ಶಿಲ್ಪಿ ಜೀವನದ ಕಡೆಗೆ ಬೆನ್ನು ತಿರುಗಿಸುತ್ತಾನೆ. ಈ ವಿಕರ್ಷಣೆಯಿಂದ ತನ್ನ ಕಲೆಯನ್ನೆ ನಿರ್ಜಿವಮಾಡುತ್ತಿರುವುದನ್ನು ಅವನು ಅರಿಯ. ನಿರಾಶೆಗೊಂಡ ಹೆಣ್ಣು ಹೊರಟುಹೋಗುತ್ತದೆ. ಶಿಲ್ಪಿಯ ಕಲಾಕೃತಿ ಮುಗಿಯುತ್ತದೆ. ಕಲ್ಲಿನಲ್ಲಿ ತಾನು ಕಡೆದಿರುವ ಹೆಣ್ಣಿನ ಅನುಪನು ಸೌಂದರ್ಯಕ್ಕೆ ಶಿಲ್ಪಿಯೇ ಮರುಳಾಗುತ್ತಾನೆ. ಅವನ ಮನಸ್ಸಿನಲ್ಲಿ ಪ್ರಚಂಡ ಹೋರಾಟ ಆರಂಭವಾಗುತ್ತದೆ. ತನಿಷ್ಟುರನಾಗಿರ ಬೇಕೆ ?ಈ ಭಾವೋದ್ರೇಕಕ್ಕೆ ವಶನಾಗಬೇಕೆ ? “ ಏನಿದೀ ಹೊಸಕರೆಯು ಮೊಳೆಯುತಿದೆ ಎದೆಯಲ್ಲಿ ಎಲೆಯ ಮರೆಯಲಿ ಕುಳಿತು ಕಾಣದಿಹ ಹಕ್ಕಿ ಹಾಡುವಂತೆ ಯಾವ ರಾಗದ ಹೊಳೆಯೊ ಸೆಳೆ ಸೆಳೆದು ಸುತ್ತುತಿದೆ ಹಳೆತೆಲ್ಲವನ್ನು ಕೊಚ್ಚು ತಿದೆ ಸೋಲುವೆನು ನಾ ನೆಂಬ ಭೀತಿಯೇಕೋ ಏನೋ ಸೋಲಿನಲಿ ಗೆಲುವೆಂಬ ಬಯಕೆಯೇಕೊ ಏನೊ ಬರಿಶೂನ್ಯ ಕೆದರುತಿದೆ, ಕಲೆ ಬೇಡವೆನಿಸುತಿದೆ ಒಲವೊಂದೇ ಸಾಕೆಂಬ ಮ 3ನಿಸುತಿದೆ